ಏರ್‌ಪೋರ್ಟ್‌ ಮೀರಿಸುವ, ವಿದೇಶವನ್ನೇ ನಾಚಿಸುವ ರೀತಿಯಲ್ಲಿ ಭಾರತದ 3 ರೈಲು ನಿಲ್ದಾಣ ನವೀಕರಣ!

First Published | Sep 28, 2022, 4:55 PM IST

ದೇಶದಲ್ಲಿ ಅಭಿವೃದ್ಧಿಯ ವೇಗ ಹಾಗೂ ವಿಧಾನ ಬದಲಾಗಿದೆ. ಇದರ ಪರಿಣಾಮ ಸರ್ಕಾರಿ ಯೋಜನೆಗಳು ಇದೀಗ ವಿಶ್ವದ ಗಮನಸೆಳೆಯುತ್ತಿದೆ. ದೇಶದ ರೈಲು ನಿಲ್ದಾಣಗಳನ್ನು ಉನ್ನತೀಕರಿಸುವ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಇದೀಗ ಅಹಮ್ಮದಾಬಾದ್, ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣ ನವೀಕರಣಗೊಳ್ಳುತ್ತಿದೆ. ನೂತನ ರೈಲು ನಿಲ್ದಾಣ ಹೇಗೆ ಕಾಣಲಿದೆ ಗೊತ್ತಾ? 

ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಅಭಿವೃದ್ಧಿ ಹೊಸ ಇತಿಹಾಸ ರಚಿಸಿದೆ. ಸಾರಿಗೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವದರ್ಜೆ ಮಟ್ಟದ ಮೂಲಭೂತ ಸೌಕರ್ಯ ಒದಗಿಸುತ್ತಿದೆ. ಇದರ ಪರಿಣಾಮ ಭಾರತ  ಹಿಂದೆಂದೂ ಕಾಣದಂತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಭಾರತದ ರೈಲು ನಿಲ್ದಾಣಗಳ ಉನ್ನತೀಕರಣ ಕೆಲಸಗಳು ಭರದಿಂದ ಸಾಗುತ್ತಿದೆ.  ಇದೀಗ ಅಹಮ್ಮದಾಬಾದ್, ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣದ ಸರದಿ.

ಒಟ್ಟು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ದೆಹಲಿ, ಅಹಮ್ಮದಾಬಾದ್ ಹಾಗೂ ಮುಂಬೈ ರೈಲು ನಿಲ್ದಾಣ ನವೀಕರಣಗೊಳ್ಳಲಿದೆ. ಅಹಮ್ಮದಾಬಾದ್ ರೈಲು ನಿಲ್ದಾಣ ಅತ್ಯಾಧುನೀಕರಣ ಹಾಗೂ ಸುಸಜ್ಜಿತ ಮೂಲಭೂತ ಸೌಕರ್ಯ ಹೊಂದಲಿದೆ. 
 

Tap to resize

ಅಹಮ್ಮದಾಬಾದ್ ರೈಲು ನಿಲ್ದಾಣ 15 ಏಕರೆ ಪ್ರದೇಶದಲ್ಲಿ ನವೀಕರಣಗೊಳ್ಳುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರಲಿದೆ. ಇದರ ಜೊತೆಗೆ ಉದ್ಯೋಗವಕಾಶಗಳ ಸೃಷ್ಟಿಯಾಗುತ್ತಿದೆ.

ದೆಹಲಿಯಲ್ಲಿ ನವೀಕರಣಗೊಳ್ಳುತ್ತಿರುವ ರೈಲು ನಿಲ್ದಾಣ 15 ಏಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ತಲೆ ಎತ್ತಲಿದೆ. ಕಾಂಪ್ಲೆಕ್ಸ್, ಪ್ಲಾಟ್‌ಪಾರ್ಮ್, ಲಾಂಜ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಈ ನಿಲ್ದಾಣದಲ್ಲಿ ಇರಲಿದೆ. 

ದೆಹಲಿ ರೈಲು ನಿಲ್ದಾಣದಿಂದ ನೇರವಾಗಿ ಸಿಟಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಸಾರಿಗೆ ಸಂಪರ್ಕ ಎಲ್ಲಾ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರ ಅನೂಕೂಲ ಹೆಚ್ಚಾಗಲಿದೆ.

ಮುಂಬೈ ರೈಲು ನಿಲ್ದಾಣ 5 ಏಕರೆ ಪ್ರದೇಶದಲ್ಲಿ ನವೀಕರಣಗೊಳ್ಳುತ್ತಿದೆ. ಚತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಹೊಸ ರೂಪ ಪಡೆದುಕೊಳ್ಳಲಿದೆ. 

ವಿಮಾನ ನಿಲ್ದಾಣದಲ್ಲಿರುವ ಅತ್ಯಾಧುನಿಕ ಸೌಲಭ್ಯ ಮುಂಬೈ ರೈಲು ನಿಲ್ದಾಣದಲ್ಲಿ ಲಭ್ಯವಾಗಲಿದೆ. ಮುಂಬೈ, ಅಹಮ್ಮಾದಾಬಾದ್ ಹಾಗೂ ದೆಹಲಿ ರೈಲು ನಿಲ್ದಾಣ ನವೀಕರಣದಿಂದ 35,000 ಹೊಸ ಉದ್ಯೋಗಳು ಸೃಷ್ಟಿಯಾಗುತ್ತಿದೆ.

ನವೀಕರಣಗೊಳ್ಳುವ ವಿಮಾನ ನಿಲ್ದಾಣದ ಸ್ಕೆಚ್ ಬಿಡುಗಡೆ ಮಾಡಲಾಗಿದೆ. ಈ ಮೂರು ನಿಲ್ದಾಣದಿಂದ ಪ್ರತಿನಿತ್ಯ 2 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರ ಪ್ರಯಾಣ ಸುಖಕರವಾಗಲಿದೆ.

ಮೂರು ರೈಲು ನಿಲ್ದಾಣಕ್ಕೆ ನವೀಕರಣಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 10,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರೈಲು ನಿಲ್ದಾಣಗಳು ಹೊಸ ಅಧ್ಯಾಯ ಬರೆಯಲಿದೆ.

Latest Videos

click me!