ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ರಾಷ್ಟ್ರಪತಿ!

First Published Jan 15, 2021, 3:58 PM IST

ರಾಮ ಮಂದಿರ ನಿರ್ಮಾಣಕ್ಕೆ ತಯಾರಿ ಆರಂಭಗೊಂಡಿದೆ. ಇದೀಗ ದೇಶಾದ್ಯಂತ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ಇದೀಗ ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ, ದೇಣಿಗೆ ಸಂಗ್ರಹ ವೇಗ ಹೆಚ್ಚಿಸಿದ್ದಾರೆ. ರಾಮನಾಥ್ ಕೋವಿಂದ್ ಜೊತೆಗೆ ದೇಣಿಗೆ ನೀಡಿದ ಇತರ ಕೆಲ ಮುಖ್ಯಮಂತ್ರಿಗಳು ದೇಣಿಗೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ಜನವರಿ 13ರಂದು ಭಕ್ತರಿಂದ ದೇಣಿಕೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
undefined
ಇದೀಗ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿ ಸಮಿತಿಗೆ 5 ಲಕ್ಷದ 100 ರೂಪಾಯಿ ದೇಣಿಗೆ ನೀಡಿದ್ದಾರೆ.
undefined
ರಾಮನಾಥ್ ಕೋವಿಂದ್ ನೀಡಿದ ಚೆಕ್ ಸ್ವೀಕರಿಸಿದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ಅಧ್ಯಕ್ಷ ಗೋವಿಂದ್ ದೇವ್ ಗಿರಿಜಿ ಮಹರಾಜ್ ಸಂತಸ ವ್ಯಕ್ತಪಡಿಸಿದರು.
undefined
ರಾಷ್ಟ್ರಪತಿ ಭಾರತದ ಮೊದಲ ಪ್ರಜೆ. ಇದೀಗ ರಾಮನಾಥ್ ಕೋವಿಂದ್ ಸ್ವತ 5 ಲಕ್ಷ ರೂಪಾಯಿ ದೇಣಿಗೆ ನೀಡೋ ಮೂಲಕ ದೇಣಿಕೆ ಸಂಗ್ರಹ ಪ್ರಕ್ರಿಯೆಗೆ ಮತ್ತಷ್ಟು ಚಾಲನೆ ನೀಡಿದ್ದಾರೆ ಎಂದರು.
undefined
ರಾಮನಾಥ್ ಕೋವಿಂದ್ ಮಾತ್ರವಲ್ಲ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಕೂಡ ದೇಣಿಕೆ ನೀಡಿದ್ದಾರೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ
undefined
ಜನವರಿ 13 ರಂದು ಆರಂಭಗೊಂಡಿರುವ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ, ಫೆಬ್ರವರಿ 27ರ ವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಲಾಗಿದೆ.
undefined
ದೇಣಿಗೆ ಸಂಗ್ರಹ ಅಭಿಯಾನದಡಿ ಭಾರತದ ಬರೋಬ್ಬರಿ 4 ಲಕ್ಷ ಹಳ್ಳಿಗೆ ಸ್ವಯಂ ಸೇವಕರು, ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಮನೆ ಮನೆಗೆ ತೆರಳಿಗೆ ದೇಣಿಗೆ ಸಂಗ್ರಹಿಸಲಿದ್ದಾರೆ.
undefined
ಆಸಕ್ತರು 10,100 ಹಾಗೂ 1000 ಮುಖಬೆಲೆಯ ಕೂಪನ್ ಪಡೆದು ದೇಣಿಗೆ ನೀಡಬಹುದು ಎಂದು ಸಮಿತಿ ಹೇಳಿದೆ. ಈಗಾಗಲೇ ದೇಣಿಗೆ ಸಂಗ್ರಹ ಕಾರ್ಯ ಭರದಿಂದ ಸಾಗುತ್ತಿದೆ.
undefined
click me!