ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಸ್ಪಾನಲ್ಲಿ ಗುಡ್ಡೆ ಗುಡ್ಡೆ ಕಾಂಡೋಮ್ ರಾಶಿ ನೋಡಿ ಪೊಲೀಸರೇ ಶಾಕ್

Published : Feb 08, 2026, 01:03 PM IST

ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ಲೈಂಗಿಕ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಗ್ರಾಹಕರು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ಮಾಲೀಕ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

PREV
16
ಅತಿದೊಡ್ಡ ಲೈಂಗಿಕ ಜಾಲ

ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ಅತಿದೊಡ್ಡ ಲೈಂಗಿಕ ಜಾಲವನ್ನು ಸೂರತ್ ಪೊಲೀಸರು ಭೇದಿಸಿದ್ದಾರೆ. ಸೂರತ್ ನಗರದ ಪಾಲನ್ಪುರ ಪಾಟಿಯಾ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ದಾಳಿಯಲ್ಲಿ ಮೂವರು ಗ್ರಾಹಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಇದೇ ವೇಳೆ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

26
ಸೂರತ್ ನಗರದ ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌

ಸೂರತ್ ನಗರದ ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಮೂರನೇ ಮಹಡಿಯಲ್ಲಿ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಸ್ಪಾ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಡಿಸಿಪಿ ವಲಯ 7 ರ ಎಲ್‌ಸಿಬಿ ತಂಡ ಮತ್ತು ಇತರ ಪೊಲೀಸ್ ತಂಡಗಳು ಜಂಟಿಯಾಗಿ ಕೇಂದ್ರದ ಮೇಲೆ ದಾಳಿ ನಡೆಸಿದವು. ದಾಳಿಯ ಸಮಯ ಸಣ್ಣ ಕೋಣೆಗಳಲ್ಲಿ ಮಹಿಳೆಯರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು.

36
ಗ್ರಾಹಕರೊಂದಿಗೆ ಸಂವಹನ ನಡೆಸಲು ಪ್ರತ್ಯೇಕ ಮೊಬೈಲ್ ಬಳಕೆ

ಸ್ಪಾ ಸಿಬ್ಬಂದಿ ಗ್ರಾಹಕರಿಗೆ ಫೋಟೋಗಳನ್ನ ಕಳುಹಿಸಲು ಪ್ರತ್ಯೇಕವಾಗಿ ಮೊಬೈಲ್‌ಗಳನ್ನು ಇರಿಸಿಕೊಂಡಿದ್ದರು. ಘಟನಾ ಸ್ಥಳದಲ್ಲಿ ಒಟ್ಟು 11 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಏಳು ಮೊಬೈಲ್‌ಗಳನ್ನು ಗ್ರಾಹಕರೊಂದಿಗೆ ಸಂವಹನ ನಡೆಸಲು ಬಳಕೆ ಮಾಡಲಾಗುತ್ತಿತ್ತು. ಇನ್ನುಳಿದ ನಾಲ್ಕು ಫೋನ್‌ಗಳು ಸ್ಥಳದಲ್ಲಿದ್ದ ಗ್ರಾಹಕರಿಗೆ ಸೇರಿದ್ದಾಗಿವೆ.

46
ಅಪಾರ ಪ್ರಮಾಣದ ಕಾಂಡೋಮ್‌

ಇದೇ ದಾಳಿಯಲ್ಲಿ ಸ್ಪಾನಲ್ಲಿದ್ದ ಬಳಕೆಯಾಗದ ಅಪಾರ ಪ್ರಮಾಣದ ಕಾಂಡೋಮ್‌ಗಳು, 8500 ರೂ. ನಗದು, ವಿವಿಧ ಬಿಲ್‌ಗಳು, ನಾಲ್ಕು ಸಣ್ಣ ಪ್ಯಾಕೆಟ್ ಡೈರಿಗಳು, ದೈನಂದಿನ ವ್ಯವಹಾರ ದಾಖಲಿಸಲಾಗುವ ರಿಜಿಸ್ಟರ್ ಮತ್ತು ಗ್ರಾಹಕರು ಮತ್ತು ಮಹಿಳೆಯರ ಹೆಸರಿನ ಡೈರಿಗಳು ಸಿಕ್ಕಿವೆ. ಇನ್ನು ಸ್ಪಾನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದ್ದ ವಿವಿಧ ಬಣ್ಣದ ಒಟ್ಟು 39 ಟೋಕನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ.

56
ಸಿಸಿಟಿವಿ ಕ್ಯಾಮೆರಾ

ಇನ್ನು ಸ್ಪಾ ಮಾಲೀಕರು ಹೊರಗೂ ಮತ್ತು ಒಳಗಡೆಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದರು. ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಹ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ದಾಳಿಯ ಮಾಹಿತಿ ನೀಡಲು ಸ್ಪಾ ಸಿಬ್ಬಂದಿ ಕಾವಲುಗಾರನನ್ನು ನೇಮಿಸಿಕೊಂಡಿದ್ದರು. ಬಂಧಿತ ಆರೋಪಿಗಳಲ್ಲಿ ಸ್ಪಾ ಮ್ಯಾನೇಜರ್ ಶೂದ್ರೋ ಬಾಬುರಾವ್ ಚಕ್ರವರ್ತಿ ಮತ್ತು ಸಹಾಯಕ ವಿಪಿನ್ ಅಲಿಯಾಸ್ ರಿಂಕು ಜಗದೀಶ್ ಶಾಹು ಸೇರಿದ್ದಾರೆ. ರಣ್ ದೀಪಕಭಾಯ್ ಶಾ, ವೀರಸಿಂಗ್ ಶಾಂತಿಜಿ ಕೋಲಿ ಮತ್ತು ಉಮೇಶ್ ದಿಲೀಪ್ ಶರ್ಮಾ ಬಂಧಿತ ಗ್ರಾಹಕರು.

ಇದನ್ನೂ ಓದಿ: ಆಕೆಯ ಖಾಸಗಿ ಭಾಗದ ಬಳಿ "ನಾನು ಕುಡಿದಿದ್ದೇನೆ, ದೂರವಿರಿ" ಹಚ್ಚೆಯಿತ್ತು, ಕೊ*ಲೆಗೂ ಮುನ್ನ ಆರೋಪಿ ಮಾಡಿದ್ದೇನು?

66
1956 ರ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆ

ಸ್ಪಾದ ಮುಖ್ಯ ಮಾಲೀಕ ಆಕಾಶ್ ಅಂಕುಶಭಾಯಿ ಧನವಾಡೆ ಸದ್ಯ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ 1956 ರ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆ ಮತ್ತು 2023 ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸೂರಜ್‌ಕುಂಡ್ ಮೇಳದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories