ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸನ್‌ಗೆ ಆತ್ಮೀಯ ಸ್ವಾಗತ ನೀಡಿದ ಮೋದಿ, ಮಹತ್ವದ ದ್ವಿಪಕ್ಷೀಯ ಮಾತುಕತೆ!

First Published Oct 9, 2021, 3:57 PM IST
  • ಮೂರು ದಿನಗಳ ಪ್ರವಾಸ ಕೈಗೊಂಡಿರುವ ಡೆನ್ಮಾರ್ಕ್ ಪ್ರಧಾನಿ
  • ಮೆಟ್ಟೆ ಫ್ರೆಡೆರಿಕ್ಸನ್‌ ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ
  • ದ್ವಿಪಕ್ಷೀಯ ಸಹಾಕರ ವದ್ಧಿಗೆ ಮಹತ್ವದ ಮಾತುಕತೆ
     

ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಇಂದು(ಅ.09) ಭಾರತಕ್ಕೆ ಆಗಮಿಸಿದ್ದಾರೆ. ಫ್ರೆಡೆರಿಕ್ಸನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಫ್ರೆಡೆರಿಕ್ಸನ್ ಅವರನ್ನು ಸ್ವಾಗತಿಸಿದ ಮೋದಿ ಮಹತ್ವದ ಮಾತುಕತೆ ನಡೆಸಿದರು. 

ಇದೇ ಮೊದಲ ಭಾರಿಗೆ ಡೆನ್ಮಾರ್ಕ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮೆಟ್ಟೆ ಫ್ರೆಡೆರಿಕ್ಸನ್ ಭಾರತ ಪ್ರವಾಸ ಹಲವು ವಿಶೇಷತೆಗಳಿಂದ ಕೂಡಿದೆ. ರಾಷ್ಟ್ರಪತಿ ಭವನದಲ್ಲಿ ಮೆಟ್ಟೆ ಫ್ರೆಡೆರಿಕನ್ಸ್ ಜೊತೆ ನರೇಂದ್ರ ಮೋದಿ ದ್ವಿಪಕ್ಷೀಯ ಸಹಕಾರ ವೃದ್ಧಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
 

ಡೆನ್ಮಾರ್ಕ್ ಹಾಗೂ ಭಾರತ ನಡುವಿನ ವ್ಯಾಪಾರ ವಹಿವಾಟು, ಹೂಡಿಕೆ, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ಕ್ಷೇತ್ರದ ಕುರಿತು ಮಾತುಕತೆ ನಡೆಸಿದ್ದಾರೆ.ಡೆನ್ಮಾರ್ಕ್‌ನಲ್ಲಿ ಭಾರತದ 60ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ.  ಇನ್ನು 200ಕ್ಕೂ ಹೆಚ್ಚು ಡೆನ್ಮಾರ್ಕ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಉಭಯ ನಾಯಕರ ಮಾತುಕತೆಯಿಂದ ಡೆನ್ಮಾರ್ಕ್ ಹಾಗೂ ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಈ ವರ್ಷದ ಆರಂಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಡೆನ್ಮಾರ್ಕ್‌ಗೆ ಭೇಟಿ ನೀಡಿದ್ದರು. ಈ ಭೇಟಿಯ ಫಲವಾಗಿ ಇದೀಗ ಡೆನ್ಮಾರ್ಕ್ ಪ್ರಧಾನಿ ಭಾರತಕ್ಕೆ ಆಗಮಿಸಿದ್ದಾರೆ. 
 

ಮೆಟ್ಟೆ ಫ್ರೆಡೆರಿಕ್ಸನ್ ಇಂದು ಸಿವಿಲ್ ಸೊಸೈಟಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯಲ್ಲಿ ಮತ್ತೊಂದು ವಿಶೇಷತೆ ಇದೆ. ಕೊರೋನಾ ವಕ್ಕರಿಸಿದ ಬಳಿಕ ಇತರ ರಾಷ್ಟ್ರನಾಯಕರು ಭಾರತಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಸರಿಸುಮಾರು ಎರಡು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಇತರ ದೇಶದ ಮೊದಲ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇಂದು ಬೆಳಗ್ಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಟ್ಟೆ ಫ್ರೆಡಿರಿಕ್ಸನ್ ಅವರನ್ನು ಕೇಂದ್ರ ವಿದೇಶಾಂಗ ವ್ಯವಾಹರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಬರಮಾಡಿಕೊಂಡರು.   ಪ್ರಧಾನಿ ಮೋದಿ ಭೇಟಿಗೂ ಮುನ್ನ ಫ್ರೆಡೆರಿಕ್ಸನ್ ರಾಜ್‌ಘಾಟ್‌ಗೆ ತೆರಳಿ ಮಹತ್ಮಾ ಗಾಂಧಿಗೆ ಗೌರವ ನಮನ ಸಲ್ಲಿಸಿದರು. 

ವಿದೇಶಾಂಗ ವ್ಯವಾಹರ ಸಚಿವ ಡಾ.ಎಸ್. ಜೈಶಂಕರ್ ಅವರನ್ನು ಭೇಟಿಯಾದ ಮೆಟ್ಟೆ ಫ್ರೆಡಿರಿಕ್ಸನ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
 

click me!