ಮತ್ತೊಮ್ಮೆ ಪ್ರಧಾನಿ ಗಾದಿಗೆ ಏರುವ ಮುನ್ನ ಕನ್ಯಾಕುಮಾರಿ ಕಲ್ಲಿನ ಮೇಲೆ ಧ್ಯಾನಕ್ಕೆ ಕುಳಿತ ಮೋದಿ!

First Published | May 30, 2024, 8:59 PM IST

pm modi kanyakumari visit ಲೋಕಸಭೆ ಚುನಾವಣೆಯ (Lok Sabha Election 2024) ಬಹಿರಂಗ ಪ್ರಚಾರ ಗುರುವಾರ ಅಂತ್ಯಗೊಂಡ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡು ದಿನಗಳ ಧ್ಯಾನಕ್ಕಾಗಿ (meditation) ದಕ್ಷಿಣದ ಕನ್ಯಾಕುಮಾರಿಗೆ ಭೇಟಿ ನೀಡಿದ್ದಾರೆ.

2024 ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದ ಪ್ರಚಾರ ಮುಗಿದ ನಂತರ, ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಕನ್ಯಾಕುಮಾರಿ ತಲುಪಿದರು.

ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೂನ್‌ 1ರವರೆಗೂ ಇರಲಿದ್ದಾರೆ. 2014 ಹಾಗೂ 2019ರಂತೆ ಈ ಬಾರಿಯೂ ಅವರು ಧ್ಯಾನಮಗ್ನರಾಗಲಿದ್ದಾರೆ.

Tap to resize

ಕನ್ಯಾಕುಮಾರಿ ತಲುಪಿದ ನಂತರ ಪ್ರಧಾನಿ ಮೋದಿ ಮೊದಲು ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.

ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ರಾಕ್ ಸ್ಮಾರಕಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ನಮಸ್ಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಅವರು ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಂಟಪದಲ್ಲಿ ಮೋದಿ ಇರಲಿದ್ದಾರೆ. ಇಲ್ಲಿಯೇ ಅವರು ಇಲ್ಲಿ ಧ್ಯಾನ ಮಾಡಲಿದ್ದಾರೆ.

ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಿದರು. ಇಲ್ಲಿ ಅವರು ಭಾರತ ಮತ್ತು ಭಾರತೀಯತೆಯ ಬಗ್ಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡರು.

ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ಯಾವ ರೀತಿಯಲ್ಲಿ ವಿಶೇಷ ಸ್ಥಾನವಿದೆಯೋ ಅದೇ ರೀತಿಯಲ್ಲಿ ಕನ್ಯಾಕುಮಾರಿಯ ಬಂಡೆ ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಅದೇ ಸ್ಥಾನವನ್ನು ಹೊಂದಿದೆ.

ಸ್ವಾಮಿ ವಿವೇಕಾನಂದರು ದೇಶವನ್ನು ಸುತ್ತಿದ ನಂತರ ಇಲ್ಲಿಗೆ ತಲುಪಿ ಮೂರು ದಿನಗಳ ಕಾಲ ಧ್ಯಾನ ಮಾಡಿದ್ದರು. ಇಲ್ಲಿಂದ ಯುವಕರನ್ನು ಜಾಗೃತಗೊಳಿಸಿ ದೇಶವನ್ನು ಪುನರ್ ನಿರ್ಮಾಣ ಮಾಡುವ ಪ್ರತಿಜ್ಞೆ ಸ್ವೀಕರಿಸಿ ರಾಷ್ಟ್ರ ಪರ್ಯಟನೆ ಮಾಡಿದ್ದರು.

ಕನ್ಯಾಕುಮಾರಿಯು ಪಾರ್ವತಿ ದೇವಿಯು ಶಿವನ ಕುರಿತು ಒಂದೇ ಕಾಲಿನಲ್ಲಿ ತಪಸ್ಸು ಮಾಡುತ್ತಿದ್ದ ಸ್ಥಳವಾಗಿದೆ. ಇದು ಭಾರತದ ದಕ್ಷಿಣದ ತುದಿಯಾಗಿದೆ. ಇದಲ್ಲದೆ, ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ.

Latest Videos

click me!