ಕನಿಷ್ಠ ಕಾರ್‌ ಕೂಡ ಹೊಂದಿಲ್ಲದ ದೇಶದ ಹೈಪ್ರೊಫೈಲ್‌ ರಾಜಕಾರಣಿಗಳು ಇವರು!

First Published | May 16, 2024, 12:12 PM IST

ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಸುತ್ತಿನ ಮತದಾನ ಮುಕ್ತಾಯವಾಗಿದೆ. ಜೂನ್‌ 1 ರಂದು ಅಂತಿಮ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ. ಈ ಬಾರಿಯ ಲೋಕಕಣದಲ್ಲಿ ಕನಿಷ್ಠ ಕಾರ್‌ ಕುಡ ಹೊಂದಿಲ್ಲದ ಹೈಪ್ರೊಫೈಲ್‌ ರಾಜಕಾರಣಿಗಳ ಲಿಸ್ಟ್‌ ಇಲ್ಲಿದೆ.
 

ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಹಂಬಲದಲ್ಲಿರುವ ಪ್ರಧಾನ ನರೇಂದ್ರ ಮೋದಿ, ಮೇ 14 ರಂದು ನಾಮಪತ್ರ ಸಲ್ಲಿಸಿದ್ದಾರೆ. ಇದರ ಪ್ರಕಾರ ಅವರ ಆಸ್ತಿ 3.02 ಕೋಟಿ ಆಗಿದ್ದು, ಯಾವುದೇ ಜಮೀನು, ಮನೆ ಹಾಗೂ ಕಾರು ಹೊಂದಿಲ್ಲ.
 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಸ್ವಂತ ಕಾರು ಹೊಂದಿಲ್ಲ. ಕೇರಳದ ವಯನಾಡ್‌ ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಇವರು ಸ್ಪರ್ಧೆ ಮಾಡುತ್ತಿದ್ದು,  20 ಕೋಟಿ ಆಸ್ತಿ ಹೊಂದಿದ್ದಾರೆ.

Tap to resize

ಕೇರಳದ ತಿರುವನಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ಗೆ ಸವಾಲೊಡ್ಡಿರುವ ರಾಜೀವ್‌ ಚಂದ್ರಶೇಖರ್‌ 23.65 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ, ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರುಗಳಿಲ್ಲ.
 

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಆಸ್ತಿ 217.21 ಕೋಟಿ ರೂಪಾಯಿ. ಇವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ. ಆದರೆ, ಸ್ವಂತ ಟ್ರ್ಯಾಕ್ಟರ್‌ಅನ್ನು ಇವರು ಹೊಂದಿದ್ದಾರೆ.


ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಬಳಿಯಲ್ಲೂ ಸ್ವಂತ ಕಾರುಗಳಿಲ್ಲ. ಕನೌಜ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಇವರ ಬಳಿಕ 26.34 ಕೋಟಿ ರೂಪಾಯಿ ಆಸ್ತಿ ಇದೆ.
 

ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌, ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು ಒಟ್ಟು 15 ಕೋಟಿ ಆಸ್ತಿ ಹೊಂದಿದ್ದಾರೆ. ಪತಿಯಂತೆ ಈಕೆ ಕೂಡ ಯಾವುದೇ ಕಾರು ಹೊಂದಿಲ್ಲ.

ಶರದ್‌ ಪವಾರ್‌ ಪುತ್ರಿ ಹಾಗೂ ಬಾರಾಮತಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಸುಪ್ರಿಯಾ ಸುಲೆ ಒಟ್ಟು 166.5 ಕೋಟಿ ಆಸ್ತಿ ಹೊಂದಿದ್ದಾರೆ. ಹಾಗಿದ್ದರೂ ಅವರ ಬಳಿ ಸ್ವಂತ ಕಾರಿಲ್ಲ.

ತೆಲಂಗಾಣದ ಹೈದರಾಬಾದ್‌ನಲ್ಲಿ ಓವೈಸಿಗೆ ಎದುರಾಳಿಯಾಗಿರುವ ವಿರುಂಚಿ ಆಸ್ಪತ್ರೆಯ ಚೇರ್ಮನ್‌ ಮಾಧವಿ ಲತಾ ಕೊಂಪೆಲ್ಲಾ ಆಸ್ತಿ 220 ಕೋಟಿ. ಹಾಗಿದ್ದರೂ ಇವರು ಸ್ವಂತ ಕಾರು ಹೊಂದಿಲ್ಲ.
 

ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲಕ್ನೋ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರ ಸ್ಪರ್ಧೆ ಮಾಡುತ್ತಿದ್ದಾರೆ. ಒಟ್ಟು 6.36 ಕೋಟಿ ಆಸ್ತಿ ಹೊಂದಿರುವ ರಾಜನಾಥ್‌ ಸಿಂಗ್‌ ಅವರ ಬಳಿ ಸ್ವಂತ ಕಾರಿಲ್ಲ.
 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಳಿಯಲ್ಲೂ ಯಾವುದೇ ಸ್ವಂತ ಕಾರುಗಳಿಲ್ಲ. ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಒಟ್ಟು 36 ಕೋಟಿ ಆಸ್ತಿ ಹೊಂದಿದ್ದು, ಪತ್ನಿ ಸೋನಲ್‌ ಶಾ ಬಳಿ 31 ಕೋಟಿ ಆಸ್ತಿ ಇದೆ.
 

ಎಐಎಂಐಎಂ ಪಕ್ಷದ ನಾಯಕ ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಬಳಿ 23 ಕೋಟಿ ಆಸ್ತಿ ಇದೆ. ಹಾಗಿದ್ದರೂ ಅವರ ಬಳಿ ಯಾವುದೇ ಕಾರಿಲ್ಲ.
 

ಹರ್ಯಾಣದ ಮಾಜಿ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಈ ಬಾರಿ ಕರ್ನಾಲ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. 1.27 ಕೋಟಿ ಆಸ್ತಿ ಹೊಂದಿರುವ ಇವರ ಬಳಿ ಕೂಡ ಸ್ವಂತ ಕಾರು ಇಲ್ಲ.

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಬಳಿಯಲ್ಲೂ ಸ್ವಂತ ಕಾರುಗಳಿಲ್ಲ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ 15 ವರ್ಷ ಇವರು ಕೆಲಸ ಮಾಡಿದ್ದಾರೆ. 3.21 ಕೋಟಿ ಆಸ್ತಿ ಹೊಂದಿದ್ದರೂ ಯಾವುದೇ ಕಾರು ಇವರ ಹೆಸರಲ್ಲಿಲ್ಲ. ಪತ್ನಿಯ ಹೆಸರಲ್ಲಿ ಒಂದು ಅಂಬಾಸಿಡರ್‌ ಕಾರು ಇದೆ.

Latest Videos

click me!