ಸೇನೆಯಿಂದ ನಿವೃತ್ತಿಯಾದ ಮೇರು ನಾಯಿಗೆ ಭಾವುಕ ಬೀಳ್ಕೊಡುಗೆ, ಎಸಿ ಕೋಚ್‌ನಲ್ಲಿ ತವರಿಗೆ ಪ್ರಯಾಣ!

First Published | May 20, 2024, 12:33 PM IST

ಭಾರತೀಯ ಸೇನೆಯಲ್ಲಿ ಅತ್ಯಂತ ಪ್ರೀತಿ ಪಾತ್ರವಾದ, ನೆಚ್ಚಿನ ನಾಯಿ ಮೆರು ನಿವೃತ್ತಿಯಾಗಿದೆ. 9 ವರ್ಷದ ಮೆರು ಫಸ್ಟ್ ಕ್ಲಾಸ್ ಟ್ರೈನ್ ಮೂಲಕ ತವರಿಗೆ ಮರಳಿದೆ. ಅತ್ಯಂತ ಗೌರವಯುತವಾಗಿ ಮೆರುವನ್ನು ತವರಿಗೆ ಕಳುಹಿಸಿಕೊಟ್ಟಿದೆ.
 

ಭಾರತೀಯ ಸೇನೆಯ ಅಧಿಕಾರಿಗಳ ಕಣ್ಣಾಲಿಗಳು ಒದ್ದೆಯಾಗಿತ್ತು. ಕಾರಣ ಭಾರತೀಯ ಸೇನೆಯ 22 ಆರ್ಮಿ ಡಾಗ್ ಯುನಿಟ್‌ನಿಂದ ಅತ್ಯಂತ ಪ್ರೀತಿ ಹಾಗೂ ಗೌರವಕ್ಕೆ ಪಾತ್ರವಾದ ಮೆರು ನಿವೃತ್ತಿ.

9 ವರ್ಷದ ಮೆರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದೆ. ಡಾಗ್ ಯುನಿಟ್ ನಿಯಮದಂತೆ ಮೆರುವನ್ನು ಅತ್ಯಂತ ಪ್ರೀತಿಯ ಬೀಳ್ಕೊಡಲಾಗಿದೆ.

Tap to resize

ಭಾರತೀಯ ಸೇನಾ ಡಾಗ್ ಯುನಿಟ್‌ನ ಕರ್ತವ್ಯದ ಕೊನೆಯ ದಿನ ಮೆರುವಿಗೆ ಸನ್ಮಾನ ಮಾಡಲಾಗಿತ್ತು. ಆರ್ಮಿ ಸಲ್ಯೂಟ್ ಸೇರಿದಂತೆ ಎಲ್ಲಾ ಸೇನಾ ಗೌರವಗಳೊಂದಿಗೆ ಮೆರು ನಿವೃತ್ತಿಯಾಗಿದೆ.

ನಿವೃತ್ತಿಯಾದ ಮೆರು ನಾಯಿ ತವರಿಗೆ ಪ್ರಯಾಣ ಮಾಡಲು ಭಾರತೀಯ ಸೇನೆ ರೈಲಿನಲ್ಲಿ ಫಸ್ಟ್‌ಕ್ಲಾಸ್ ಎಸಿ ಕೋಚ್ ಬುಕ್ ಮಾಡಿ ಕಳುಹಿಸಿಕೊಟ್ಟಿದೆ. 

ಇತ್ತೀಚೆಗಷ್ಟೇ ಕೇಂದ್ರ ರಕ್ಷಣಾ ಸಚಿವಾಲ, ಆರ್ಮಿ ಡಾಗ್ ಯುನಿಟ್‌ನಿಂದ ನಿವೃತ್ತಿಯಾಗುವ ನಾಯಿಗೆ ಫಸ್ಟ್ ಕ್ಲಾಸ್ ಎಸಿ ಕೋಚ್ ಬುಕ್ ಮಾಡಲು ನಿಯಮ ಬದಲಾಯಿಸಿತ್ತು.

ಭಾರವಾದ ಹೃದಯದೊಂದಿಗೆ ಮೆರು ತನ್ನ ತವರಾದ ಮೀರತ್‌ಗೆ ಮರಳಿದೆ. ಇತ್ತ ಮೀರತ್ ರೈಲು ನಿಲ್ದಾಣದಲ್ಲಿ ಮೆರು ಸ್ವಾಗತಕ್ಕೆ ಹಲವರು ಆಗಮಿಸಿದ್ದರು.

ಮೀರತ್‌ಗೆ ಮರಳಿರುವ ಮೆರು ಇನ್ಮುಂದೆ ಭಾರತೀಯ ಸೇನೆಯ ರಿಮೌಂಟ್ ಹಾಗೂ ವೆಟನರಿ ಕಾರ್ಪ್(RVC) ಕೇಂದ್ರದಲ್ಲಿ ವಿಶ್ರಾಂತಿ ಜೀವನ ಕಳೆಯಲಿದೆ.

ಭಾರತೀಯ ಸೇನೆಗೆ ನಿಯೋಜನೆಗೊಳ್ಳುವ ನಾಯಿಗಳನ್ನು RVC ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷ ತರಬೇತುದಾರರು, ವೈದ್ಯರು, ಸಿಬ್ಬಂದಿಗಳ ತಂಡವಿದೆ.

Latest Videos

click me!