ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ

Published : Apr 27, 2026, 07:02 PM IST

ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ ಸೃಷ್ಟಿಸಿದೆ. ಮೇ.4ರಂದು ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಮುನ್ಸೂಚನೆ ನೀಡಿದ್ರಾ? ಮೋದಿ ಹಂಚಿಕೊಂಡ ಆಡಿಯೋದಲ್ಲಿ ಏನಿದೆ 

PREV
16
ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ವಿಶ್ವಾಸ

ಏಪ್ರಿಲ್ 29 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಗಿದ ನಂತರ, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಯ ದಿನದಂದು ಮತ್ತೆ ರಾಜ್ಯಕ್ಕೆ ಬರುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾಜ್ಯದಲ್ಲಿ 2ನ್ ಹಾಗೂ ಕೊನೆಯ ಹಂತದ ಪ್ರಚಾರ ಮುಗಿಸಿದ ನಂತರ ಮೋದಿ ಈ ಇಚ್ಛೆ ವ್ಯಕ್ತಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಾಜ್ಯದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಪ್ರಧಾನಿ ಏನು ಹೇಳಿದರು? ಪೂರ್ತಿ ವರದಿ ಓದಿ.

26
ಪ್ರಧಾನಿಯವರ ಆಡಿಯೋ ಸಂದೇಶ
ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಜನರಿಗಾಗಿ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಬಂಗಾಳಿ ಭಾಷೆಯಲ್ಲಿರುವ ಆ ಆಡಿಯೋ ಸಂದೇಶದಲ್ಲಿ, 'ಪ್ರಜಾಪ್ರಭುತ್ವದ ದೇಗುಲದಲ್ಲಿ ವಿಜಯ ಪತಾಕೆ ಹಾರಿಸಲು ನಿಮ್ಮ ಮುಂದೆ ಒಂದು ಅದ್ಭುತ ಅವಕಾಶ ಬಂದಿದೆ' ಎಂದು ಅವರು ಹೇಳಿದ್ದಾರೆ.
36
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಡಿಯೋ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, 'ಪಶ್ಚಿಮ ಬಂಗಾಳದ ನನ್ನ ಪ್ರೀತಿಯ ಕುಟುಂಬದವರೇ, ಈ ಪ್ರಜಾಪ್ರಭುತ್ವದ ಹಬ್ಬವು ಬಿಜೆಪಿಯ ವಿಜಯ ಧ್ವಜವನ್ನು ಹಾರಿಸಲು ನಿಮಗೆ ಸುವರ್ಣಾವಕಾಶವನ್ನು ತಂದಿದೆ. ಏಪ್ರಿಲ್ 29 ರಂದು ನೀವು ಮತದಾನದ ಹೊಸ ದಾಖಲೆಯನ್ನು ನಿರ್ಮಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಈ ಐತಿಹಾಸಿಕ ಕ್ಷಣದಲ್ಲಿ, ನಾನು ಆಡಿಯೋ ಸಂದೇಶದ ಮೂಲಕ ನನ್ನ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದೇನೆ...' ಎಂದು ಬರೆದಿದ್ದಾರೆ.
46
ಮೋದಿಯ ಆಡಿಯೋ ಸಂದೇಶ
ತಮ್ಮ ಎಕ್ಸ್ ಖಾತೆಯಲ್ಲಿ ಪಶ್ಚಿಮ ಬಂಗಾಳದ ಜನರನ್ನು ಉದ್ದೇಶಿಸಿ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ-
56
ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಮೋದಿ ವಿಶ್ವಾಸ
ಮೊದಲ ಹಂತದ ಮತದಾನದ ನಂತರ ಬಿಜೆಪಿ ತುಂಬ ವಿಶ್ವಾಸದಲ್ಲಿದೆ. ಅಮಿತ್ ಶಾ ಅವರಿಂದ ಹಿಡಿದು ಮೋದಿವರೆಗೆ, ಕೇಸರಿ ಪಾಳಯದ ಪ್ರಮುಖ ನಾಯಕರು ಮೊದಲ ಹಂತದಲ್ಲಿ ಮತದಾನವಾದ 152 ಸ್ಥಾನಗಳ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ರಚಿಸಲು ಬೇಕಾದ ಉಳಿದ ಸ್ಥಾನಗಳನ್ನೂ ಸುಲಭವಾಗಿ ಪಡೆಯುತ್ತೇವೆ ಎಂಬುದು ಕೇಸರಿ ಪಾಳಯದ ನಂಬಿಕೆ.
66
ಮತ್ತೆ ಬಂಗಾಳ ಪ್ರವಾಸಕ್ಕೆ ಬರಲಿದ್ದಾರೆಯೇ ಪ್ರಧಾನಿ?
ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಧಿಕಾರ ಬದಲಾವಣೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಿಜೆಪಿ ಬಂಗಾಳದಲ್ಲಿ ಅಧಿಕಾರ ಹಿಡಿಯಲಿದೆ. ಇದೇ ಕಾರಣಕ್ಕೆ ಮೇ 4ರ ನಂತರ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಾವು ಮತ್ತೆ ಬಂಗಾಳಕ್ಕೆ ಬರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories