ಮದ್ವೆ ಆಗ್ತೀನಿ ಅಂತ ನಂಬಿಸಿ ಅತ್ಯಾ*ಚಾರ, ಗರ್ಭಿಣಿ ಅಂತ ಗೊತ್ತಾಗ್ತಿದ್ದಂತೆ ಕೈಕೊಟ್ಟ 19 ವರ್ಷದ ಇಂಜಿನಿಯರಿಂಗ್ ಸ್ಟೂಡೆಂಟ್ ಅರೆಸ್ಟ್!

Published : Apr 26, 2026, 08:20 AM IST

ಕೋಯಿಕ್ಕೋಡ್: ಮಕ್ಕಳು ಕಾಲೇಜಿನಲ್ಲಿ ಓದಿ ಬದುಕು ಕಟ್ಟಿಕೊಳ್ಳಲಿ ಎಂದು ಪೋಷಕರು ಬಯಸಿದರೆ, ಮಕ್ಕಳು ಮಾತ್ರ ಬೇರೆಯದ್ದೇ ದಾರಿ ಹಿಡಿಯುತ್ತಿದ್ದಾರೆ. 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಹಲವು ಬಾರಿ ಬಳಸಿಕೊಂಡು ಕೈಕೊಟ್ಟಿದ್ದಾನೆ. 

PREV
15
ಪೊಲೀಸರ ಅತಿಥಿಯಾದ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ

ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

25
19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ

ಕೋಯಿಕ್ಕೋಡ್‌ನ ಚೂಲೂರ್ ನಿವಾಸಿ, ವಡಕ್ಕೇತೊಡಿಕಯಿಲ್ ಮನೆಯ ಅಭಿನವ್ (19) ಬಂಧಿತ ಆರೋಪಿ. ಈತ ಕೆಎಂಸಿಟಿ ಕಾಲೇಜಿನಲ್ಲಿ ಹಾರ್ಡ್‌ವೇರ್ ಇಂಜಿನಿಯರಿಂಗ್ ಓದುತ್ತಿದ್ದಾನೆ.

35
ಅಪಾರ್ಟ್‌ಮೆಂಟ್‌ಗಳಲ್ಲಿ ಹಲವು ಬಾರಿ ಅತ್ಯಾ*ಚಾ*ರ

ಪೊಕ್ಕುನ್ನು ನಿವಾಸಿ ಯುವತಿಯ ಮೇಲೆ ಈತ ಅತ್ಯಾ*ಚಾ*ರ ಎಸಗಿದ್ದಾನೆ. ಮದುವೆ ಆಗುವುದಾಗಿ ಯುವತಿಗೆ ಅಭಿನವ್ ಮಾತು ಕೊಟ್ಟಿದ್ದ. ಬಳಿಕ ಕೋಯಿಕ್ಕೋಡ್‌ನ ಸರೊವರಂ ಪಾರ್ಕ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಹಾಗೂ ಪೆರಿಂಗಳಂನಲ್ಲಿರುವ ಸ್ನೇಹಿತನ ಮನೆಯಲ್ಲಿ ಆಕೆಯ ಮೇಲೆ ಹಲವು ಬಾರಿ ಅತ್ಯಾ*ಚಾ*ರ ಎಸಗಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

45
ಆರೋಪಿ ಪೋಷಕರು ಮದುವೆಗೆ ನಿರಾಕರಣೆ

ಯುವತಿ ಗರ್ಭಿಣಿ ಎಂಬ ವಿಷಯ ಗೊತ್ತಾದಾಗ, ಆಕೆಯ ಕುಟುಂಬಸ್ಥರು ಅಭಿನವ್ ಮನೆಯವರ ಜೊತೆ ಮಾತಾಡಿದ್ದಾರೆ. ಆದರೆ, ಅಭಿನವ್ ಮತ್ತು ಆತನ ಮನೆಯವರು ಮದುವೆ ಮಾತಿನಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

55
ಅರೋಪಿ ನ್ಯಾಯಾಂಗ ಬಂಧನಕ್ಕೆ

ಕುಂದಮಂಗಲಂ ಸಬ್ ಇನ್ಸ್‌ಪೆಕ್ಟರ್ ಬಾಲು ಕೆ. ಅಜಿತ್, ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಮನೋಜ್, ಗೋಕುಲ್ ಪ್ರಕಾಶ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿ ನಿಶಾ ಅವರಿದ್ದ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories