ಹೊಸ ಲೋಕಕ್ಕೆ ಕರೆದೊಯ್ಯಬಲ್ಲ ಅಕ್ವೆಟಿಕ್, ರೊಬೊಟಿಕ್ಸ್ ಹಾಗೂ ನೇಚರ್ ಪಾರ್ಕ್; ನಾಳೆ ಮೋದಿ ಉದ್ಘಾಟನೆ!

Published : Jul 15, 2021, 07:01 PM IST

ಅಭಿವೃದ್ಧಿ ಜೊತೆಗೆ ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಮಹತ್ವದ ಗ್ಯಾಲರಿ ಹಾಗೂ ಪಾರ್ಕ್ ದೇಶಕ್ಕೆ ಸಮರ್ಪಿಸಲು ಸಜ್ಜಾಗಿದೆ. ನಾಳೆ ಅಹಮ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಕ್ವೆಟಿಕ್, ರೊಬೊಟಿಕ್ಸ್ ಗ್ಯಾಲರಿ ಹಾಗೂ ನೇಚರ್ ಪಾರ್ಕ್ ಉದ್ಘಾಟಿಸಲಿದ್ದಾರೆ. ಹೊಸ ಲೋಕಕ್ಕೆ ಕೊಂಡೊಯ್ಯಬಲ್ಲ ಅಕ್ವೆಟಿಕ್, ರೊಬೊಟಿಕ್ಸ್ ಹಾಗೂ ನೇಚರ್ ಪಾರ್ಕ್ ವಿಶೇಷತೆಗಳು ಇಲ್ಲಿವೆ.

PREV
112
ಹೊಸ ಲೋಕಕ್ಕೆ ಕರೆದೊಯ್ಯಬಲ್ಲ ಅಕ್ವೆಟಿಕ್, ರೊಬೊಟಿಕ್ಸ್ ಹಾಗೂ ನೇಚರ್ ಪಾರ್ಕ್; ನಾಳೆ ಮೋದಿ ಉದ್ಘಾಟನೆ!

ಜುಲೈ 16 ರಂದು ಪ್ರಧಾನಿ ಮೋದಿ ಗುಜರಾತ್‌ನ ಗಾಂಧಿನಗರದ ರಾಜಧಾನಿ ರೈಲು ನಿಲ್ದಾಣ ಉದ್ಘಾಟನೆ ಸೇರಿದಂತೆ ಅಕ್ವೆಟಿಕ್ ಗ್ಯಾಲರಿ, ರೊಬೊಟಿಕ್ಸ್ ಗ್ಯಾಲರಿ ಹಾಗೂ ನೇಚರ್ ಪಾರ್ಕ್ ಉದ್ಘಾಟನೆಗೆ ಆಹಮ್ಮದಾಬಾದ್‌ಗೆ ತೆರಳಲಿದ್ದಾರೆ.

212

ಮೋದಿ ಉದ್ಘಾಟನೆ ಮಾಡಲಿರುವ ಅಕ್ವೆಟಿಕ್, ರೊಬೊಟಿಕ್ಸ್ ಹಾಗೂ ನೇಚರ್ ಪಾರ್ಕ್ ಹಲವು ವಿಶೇಷತೆಗಳನ್ನು ಹೊಂದಿದೆ. ಅಕ್ವೆಟಿಕ್ ಗ್ಯಾಲರಿ ಅಥವಾ ಜಲಚರ ಪಾರ್ಕ್‌ನಲ್ಲಿ ಪ್ರಪಂಚದಾದ್ಯಂತವಿರುವ ವಿವಿದ ಪ್ರಭೇದಗಳ ಜಲಚರಗಳನ್ನು ಕಾಣಬಹುದು.

312

ಜಗತ್ತಿನಾದ್ಯಂತವಿರುವ ಪ್ರಮುಖ ಶಾರ್ಕ್ ಮೀನು ಒಳಗೊಂಡಿರುವ ಮುಖ್ಯ ಟ್ಯಾಂಕ್ , ಒಂದು ವಿಶಿಷ್ಠ ಅನುಭವವನ್ನು ನೀಡಲು 28 ಮೀಟರ್  ವಾಕ್ ವೇ ಗ್ಲಾಸ್ ಸುರಂಗ ಸೇರಿದಂತೆ ಹಲವು ವಿಶೇಷತೆಗಳು ಈ ಅಕ್ವೆಟಿಕ್ ಗ್ಯಾಲರಿಯಲ್ಲಿದೆ.

412

ವಿವಿಧ ಮೀನುಗಳು ಅವುಗಳ ವೈಜ್ಞಾನಿಕ ಮಾಹಿತಿ ಸೇರಿದಂತೆ ಹಲವು ವಿಶೇಷತೆಗಳು ಈ ಜಲಚರ ಗ್ಯಾಲರಿಯಲ್ಲಿದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಲಿದೆ.

512

ತಂತ್ರಜ್ಞಾನಗಳನ್ನು ಪ್ರದರ್ಶಿಸುವ ರೊಬೊಟಿಕ್ಸ್ ಗ್ಯಾಲರಿ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.  ಪ್ರವೇಶದ್ವಾರದಲ್ಲಿ, ಟ್ರಾನ್ಸ್‌ಫಾರ್ಮರ್ ರೋಬೋಟ್‌ನ ದೈತ್ಯಾಕಾರದ ಪ್ರತಿಕೃತಿಯನ್ನು ಇರಿಸಲಾಗಿದೆ. 

612

ವಿಶೇಷ ಅಂದರೆ ಗ್ಯಾಲರಿಯ ಮುಂಭಾಗದಲ್ಲಿ ಸ್ವಾಗತ ಕೋರಲು ಹ್ಯೂಮನಾಯ್ಡ್ ರೋಬೋಟ್ ಇಡಲಾಗಿದೆ. ಈ ರೋಬೋಟ್ ಸಂತೋಷ, ಆಶ್ಚರ್ಯ ಮತ್ತು ಉತ್ಸಾಹದಂತಹ ಭಾವನೆಗಳನ್ನು ಸಹ ವ್ಯಕ್ತಪಡಿಸುತ್ತದೆ.

712

ಗ್ಯಾಲರಿಯ ವಿವಿಧ ಮಹಡಿಗಳಲ್ಲಿ, ವಿವಿಧ ಕ್ಷೇತ್ರಗಳ ರೋಬೋಟ್‌ಗಳನ್ನು ಇರಿಸಲಾಗಿದೆ. ಔಷಧಿ, ರಕ್ಷಣಾ, ಕೃಷಿ ಮತ್ತು ದೈನಂದಿನ ಜೀವನದಲ್ಲಿ ಬಳಕೆಯಾಗುವ ಹಾಗೂ ಪ್ರತಿನಿಧಿಸುವ ರೋಬೋಟ್‌ಗಳನ್ನು ಇರಿಸಲಾಗುತ್ತಿದೆ.

812

ರೊಬೊಟಿಕ್ ಗ್ಯಾಲರಿಯಲ್ಲಿ ಮಾನವರನ್ನೇ ಚಕಿತಗೊಳಿಸಬಲ್ಲ ರೋಬೋಟಿಕ್‌ಗಳು ಇರಲಿವೆ. 

912

ನೇಚರ್ ಪಾರ್ಕ್‌ನಲ್ಲಿ ಚೆಸ್ ಗಾರ್ಡನ್, ಮಿಸ್ಟ್ ಗಾರ್ಡನ್, ಸೆಲ್ಫಿ ಪಾಯಿಂಟ್ಸ್  ಸೇರಿದಂತೆ ಅನೇಕ ಆಕರ್ಷಕಗಳು ಇಲ್ಲಿವೆ. ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಹಲವು ವಿಭಾಗಗಳಿವೆ. 

1012

ಆಸಕ್ತಿದಾಯಕ ಚಕ್ರವ್ಯೂಹಗಳನ್ನು ಒಳಗೊಂಡಿದೆ. ನೇಚರ್ ಪಾರ್ಕ್ ವೈಜ್ಞಾನಿಕ ಮಾಹಿತಿಯೊಂದಿಗೆ ತುಂಬಿರುವ ಟೆರರ್ ಬರ್ಡ್, ಮ್ಯಾಮತ್, ಸಬೆರ್ ಟೂತ್ ಸಿಂಹ ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿಗಳ ವಿವಿಧ ಶಿಲ್ಪಗಳನ್ನು ಒಳಗೊಂಡಿದೆ.

1112

ನೇಚರ್ ಪಾರ್ಕ್ ಸುಂದರ ಪಕ್ಷಿನೋಟ, ಅತ್ಯಂತ ಮುತುವರ್ಜಿ ವಹಿಸಿ ಈ ನೇಚರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ನಾಳೆ ಈ ಪಾರ್ಕ್‌ನ್ನು ಮೋದಿ ಉದ್ಘಾಟನೆ ಮಾಡಲಿದ್ದಾರೆ

1212

ಅಕ್ವೆಟಿಕ್, ರೋಬೋಟಿಕ್ ಹಾಗೂ ನೇಚರ್ ಪಾರ್ಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಕಟ್ಟದ ವಿನ್ಯಾಸದಲ್ಲೂ ವಿಶೇಷತೆಗಳಿವೆ.

click me!

Recommended Stories