ಮೋದಿ ಉದ್ಘಾಟಿಸಲಿದ್ದಾರೆ ಭಾರತ- ಜಪಾನ್‌ ಸ್ನೇಹದ ಪ್ರತೀಕ 'ರುದ್ರಾಕ್ಷ'!

Published : Jul 14, 2021, 01:27 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 15ರಂದು ವಾರಾಣಸಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದರ ಜೊತೆ, ಕೆಲ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ಜಪಾನ್‌ ಹಾಗೂ ಭಾರತದ ನಡುವಿನ ಸ್ನೇಹದ ಸಂಕೇತವಾಗಿರುವ ರುದ್ರಾಕ್ಷ ಕನ್ವೆಂಶನ್‌ ಸೆಂಟರ್‌ ಕೂಡಾ ಇದೆ. ಮೋದಿ ನಾಳೆ, ಗುರುವಾರ ಬೆಳಗ್ಗೆ 11 ಗಂಟೆಗೆ ಬಿಎಚ್‌ಯುನಲ್ಲಿ ನೂರು ಹಾಸಿಗೆಯ ಎಂಸಿಎಚ್‌ ವಿಭಾಗ, ಗೋದೌಲಿಯಾದಲ್ಲಿ ಒಂದು ಬಹುಮಹಡಿ ಪಾರ್ಕಿಂಗ್ ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಬೋಟ್‌ಗಳು ಮತ್ತು ವಾರಣಾಸಿ-ಗಾಜಿಪುರ ಹೆದ್ದಾರಿಯಲ್ಲಿ ತ್ರಿಪಥದ ಫ್ಲೈಓವರ್ ಸೇರಿದಂತೆ ವಿವಿಧ ಸಾರ್ವಜನಿಕ ಯೋಜನೆ ಹಾಗೂ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

PREV
17
ಮೋದಿ ಉದ್ಘಾಟಿಸಲಿದ್ದಾರೆ ಭಾರತ- ಜಪಾನ್‌ ಸ್ನೇಹದ ಪ್ರತೀಕ 'ರುದ್ರಾಕ್ಷ'!

ಹೌದು ಪಿಎಂ ಮೋದಿ ಗುರುವಾರದಂದು ಸುಮಾರು 744 ಕೋಟಿ ರೂ. ವೆಚ್ಚದ ವಿಭಿನ್ನ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಸುಮಾರು 839 ಕೋಟಿ ರೂ.ಗಳ ವೆಚ್ಚದ ಹಲವಾರು ಯೋಜನೆಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ಸೆಂಟರ್ ಫಾರ್ ಸ್ಕಿಲ್ ಮತ್ತು ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಐಪಿಇಟಿ), ಜಲ್ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನ್ವ್ನಲ್ಲಿ ಮಾವು ಮತ್ತು ತರಕಾರಿಗಾಗಿ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಸೇರಿವೆ. ಮಧ್ಯಾಹ್ನ 2 ಗಂಟೆಗೆ ಬಿಎಚ್‌ಯುನ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಲಿದ್ದಾರೆ. ಕೋವಿಡ್‌ನ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ಭೇಟಿ ಮಾಡಲಿದ್ದಾರೆ.
 
27

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಾಹ್ನ 12: 15 ಕ್ಕೆ ಜಪಾನ್ ನೆರವಿನಿಂದ ನಿರ್ಮಿಸಲಾದ ಇಂಟರ್‌ ನ್ಯಾಷನಲ್ ಕೋ ಆಪರೇಚನ್ ಆಂಡ್‌ ಕಕನ್ವೆಂಶನ್ ಸೆಂಟರ್‌ ರುದ್ರಾಕ್ಷ್ ಉದ್ಘಾಟಿಸಲಿದ್ದಾರೆ.

37

ಇಲ್ಲಿ ಸುಮಾರು 120 ಕಾರುಗಳನ್ನು ಪಾರ್ಕ್ ಮಾಡುವ ವ್ಯವಸ್ಥೆ ಇದೆ. ಈ ಸಮಾವೇಶ ಕೇಂದ್ರ ಅಂತಾರಾಷ್ಟ್ರೀಯ ಸಮ್ಮೇಳನ, ಪ್ರದರ್ಶನ, ಸಂಗೀತ ಕಚೇರಿ ಇತ್ಯಾದಿಗಳನ್ನು ಆಯೋಜಿಸಲು ಸೂಕ್ತ ಸ್ಥಳವಾಗಿದೆ. ಇಲ್ಲಿನ ಗ್ಯಾಲರಿಯಲ್ಲಿ ವಾರಾಣಸಿಯ ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ತೋರಿಸುವ ಭಿತ್ತಿಚಿತ್ರಗಳಿವೆ.

47

ರುದ್ರಾಕ್ಷನ ವಿನ್ಯಾಸ ಶಿವಲಿಂಗದಂತಿದೆ. ಇದರಲ್ಲಿ ಶಿವಲಿಂಗ ಆಕಾರದ ಸುತ್ತ 109 ರುದ್ರಾಕ್ಷಿ ಆಕಾರವನ್ನು ಮಾಡಲಾಗಿದೆ. ಸಮಾವೇಶ ಕೇಂದ್ರದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳಿವೆ. ಇದು ನಿಯಮಿತ ಪ್ರವೇಶದ್ವಾರ, ಕಾರ್ಮಿಕರಿಗೆ ಒಂದು ಮತ್ತು ವಿಐಪಿ ಪ್ರವೇಶವನ್ನು ಹೊಂದಿದೆ.
 
57

ರುದ್ರಾಕ್ಷದ ಮೂಲಕ ವಾರಾಣಸಿಯ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ನಾಗರಿಕತೆ ವಿಶ್ವಕ್ಕೇ ಪರಿಚಯವಾಗಲಿದೆ. ಪ್ರಾಚೀನ ನಗರವಾದ ಕಾಶಿಯ ಅದ್ಭುತ ನೋಟ ರುದ್ರಾಕ್ಷದಲ್ಲಿ ಗೋಚರಿಸುತ್ತದೆ.

67

ರಾತ್ರಿ ಇಡೀ ಕಟ್ಟಡವನ್ನು ಎಲ್ಇಡಿ ದೀಪಗಳಿಂದ ಬೆಳಗಿಸಲಾಗುತ್ತದೆ. 2.87 ಹೆಕ್ಟೇರ್ ಭೂಮಿಯಲ್ಲಿ ಐಷಾರಾಮಿ ಸಿಗ್ರಾ ಪ್ರದೇಶದಲ್ಲಿ ಎರಡು ಅಂತಸ್ತಿನ ಸ್ಥಳದಲ್ಲಿ ಸಮಾವೇಶ ಕೇಂದ್ರವನ್ನು ನಿರ್ಮಿಸಲಾಗಿದೆ.
 
77

ರುದ್ರಾಕ್ಷ ಕನ್ವೆನ್ಷನ್ ಸೆಂಟರ್ 1,200 ಜನರು ಕುಳಿತುಕೊಳ್ಳುವ ಸಾಮರ್ಥ ಹೊಂದಿದೆ. ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲಿದ್ದು, ಇಲ್ಲಿ ಪೋರ್ಟಬಲ್ ಕುರ್ಚಿಗಳನ್ನು  ಇರಿಸಲಾಗಿದೆ. ಅಂದರೆ, ಈ ಕುರ್ಚಿಗಳನ್ನು ಗಾಲಿಕುರ್ಚಿಯಾಗಿಯೂ ಪರಿವರ್ತಿಸಬಹುದು. ಇದನ್ನು ಸ್ವಯಂಚಾಲಿತ ವ್ಯವಸ್ಥೆಯಿಂದ ನಿಯಂತ್ರಿಸಲಾಗುತ್ತದೆ. ಅಂದರೆ, ಸೆಂಟ್ರಲ್ ಕಮಾಂಡ್ ಮೂಲಕ ವೀಕ್ಷಕರ ಸಂಖ್ಯೆಗೆ ಅನುಗುಣವಾಗಿ ಚಿಕ್ಕದಾಗಿ ಅಥವಾ ದೊಡ್ಡದಾಗಿ ಮಾಡಬಹುದು.

click me!

Recommended Stories