#AdManKejriwal: ಅಭಿವೃದ್ಧಿ ಎನ್ನುತ್ತಿದ್ದ ಕೇಜ್ರೀವಾಲ್‌ಗೆ ಆರತಿ ಎತ್ತಿದ ನೆಟ್ಟಿಗರು!

First Published Jul 14, 2021, 12:45 PM IST

ಸಿಎಂ ಅರವಿಂದ ಕೇಜ್ರೀವಾಲ್‌ ದೆಹಲಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮಾತುಗಳನ್ನಾಡುತ್ತಿದ್ದಾರೆ. ವಿದ್ಯುತ್, ನೀರು ಹೀಗೆ ಎಲ್ಲವೂ ತಾವೇ ಮಾಡಿದ ಸಾಧನೆ ಎನ್ನುತ್ತಿದ್ದಾರೆ. ಆದರೀಗ ಈ ಸಾಧನೆಗಳ ನಡುವೆಯೇ ತಮ್ಮ ಇದೇ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ  #AdManKejriwal ಎಂಬ ಹ್ಯಾಷ್‌ಟ್ಯಾಗ್‌ನಡಿ ಭರ್ಜರಿ ಟ್ರೋಲ್ ಆಗಿದ್ದಾರೆ. ಅನೇಕ ಮಂದಿ ಹಲವಾರು ಪೋಸ್ಟ್‌ ಶೇರ್ ಮಾಡಿ ಕೇಜ್ರಿವಾಲ್ ಅಭಿವೃದ್ಧಿ ಕಲ್ಪನೆ ಮತ್ತು ದೆಹಲಿಯ ವಾಸ್ತವತೆಯ ನಡುವಿನ ವ್ಯತ್ಯಾಸ ಏನು ಎಂಬುವುದನ್ನು ತಿಳಿಸಿದ್ದಾರೆ. ಇದೇ ವೇಳೆ ಜನರಿಂದ ಪಡೆದ ತೆರಿಗೆಯನ್ನು ಹೇಗೆ ಜಾಹೀರಾತಿಗೆ ವ್ಯಯಿಸುತ್ತಿದ್ದಾರೆ ಎಂಬುವುದನ್ನೂ ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಟ್ರೋಲ್‌ ಆದ ಕೇಜ್ರೀವಾಲ್, ಇಲ್ಲಿದೆ ಒಂದು ಝಲಕ್

ನೀರು ಒದಗಿಸುತ್ತೇವೆಂಬ ಭರವಸೆ ನೀಡಿದ್ದ ಕೇಜ್ರೀವಾಲ್, ಈ ಮಾತನ್ನು ಉಳಿಸಿಕೊಳ್ಳಲಾಗದೆ ಪ್ರತಿಭಟಿಸುತ್ತಿದ್ದವರನ್ನು ತಡೆದಿರುವುದಕ್ಕೆ ಟ್ರೋಲ್.
undefined
ಇತ್ತೀಚೆಗಷ್ಟೇ ದೆಹಲಿ ಸಿಎಂ ಕೇಜ್ರೀವಾಲ್, ಪಂಜಾಬ್‌ನಲ್ಲಿ ಆಪ್‌ ಗೆದ್ದರೆ ಉಚಿತ ವಿದ್ಯುತ್ ಸೂತ್ರ ಜಾರಿಗೊಳಿಸುವ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿಯೂ ದೆಹಲಿ ಸಿಎಂ ಟ್ರೋಲ್ ಆಗಿದ್ದಾರೆ.
undefined
ದೆಹಲಿಯಲ್ಲಿ ಸ್ಪೀಡ್‌ ಬ್ರೇಕರ್‌ ಉದ್ಘಾಟಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಇದು ಈವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ಟ್ರಾಫಿಕ್ ಜಾಮ್‌ ಆಗುವ ಫೋಟೋಗಳನ್ನು ಹೀಗೊಂದು ಸ್ಪೀಡ್‌ ಬ್ರೇಕರ್ ಎಂದು ತಮಾಷೆ ಮಾಡಿದ್ದಾರೆ.
undefined
ಕೊಟ್ಟ ಭರವಸೆ ಈಡೇರಿಸದಿದ್ದರೂ ಜಾಹೀರಾತುಗಳು ಮಾತ್ರ ರಾರಾಜಿಸುತ್ತವೆ. ಜಾಹೀರಾಥಿನ ವಿಚಾರದಲ್ಲಿ ಕೇಜ್ರೀವಾಲ್‌ರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಳಕೆದಾರರೊಬ್ಬರು ಕಾಲೆಳೆದಿದ್ದಾರೆ.
undefined
ಇನ್ನು ದೆಹಲಿಗರಿಗೆ ಉಚಿತ ನೀರು, ವಿದ್ಯುತ್ ಒದಗಿಸುವ ಭರವಸೆ ಕೊಟ್ಟ ಕೇಜ್ರೀವಾಲ್, ನೆರೆ ರಾಜ್ಯಗಳಿಗೆ ತಮಗೆ ನೀರು ಕೊಡುವಂತೆ ಕೇಳುತ್ತಿದ್ದಾರೆ. ಇವರೊಬ್ಬ ಅಸಮರ್ಥ ಸಿಎಂ ಎಂದೂ ಕಿಡಿ ಕಾರಿದ್ದಾರೆ.
undefined
ವಿದೇಶೀ ನಾಯಕರ ಫೋಟೋ ಬಳಸಿಯೂ ಕೇಜ್ರೀವಾಲ್ ಕಾಲೆಳೆದಿದ್ದಾರೆ. ಈ ಮೂಲಕ #AdManKejriwal, ಕೇಜ್ರೀವಾಲ್‌ಗೆ ಯಾಕೆ [ಹೋಲಿಕೆಯಾಘುತ್ತದೆ ಎಂದು ತಿಳಿಸಿದ್ದಾರೆ.
undefined
ಮೊಹಲ್ಲಾ ಕ್ಲಿನಿಕ್ ವಿಚಾರದಲ್ಲೂ ಕೇಜ್ರೀವಾಲ್‌ ಫುಲ್ ಟ್ರೋಲ್.
undefined
ದೆಹಲಿಯಲ್ಲಿ ಅಪರಾಧಗಳನ್ನು ಕಡಿಮೆ ಮಾಡುವ ಮತ್ತು ಅಪರಾಧಿಗಳಿಂದ ದೂರವಿಡುವ ಭರವಸೆಯನ್ನೂ ಕೇಜ್ರಿವಾಲ್ ನೀಡಿದ್ದರು. ಆದರೆ ಈ ವಿಚಾರದಲ್ಲೂ ಅವರು ವಿಫಲರಾಗಿದ್ದಾರೆ.
undefined
ಇನ್ನು #AdManKejriwal ನಡಿ ವ್ಯಕ್ತಿಯೊಬ್ಬ ಕೇಜ್ರೀವಾಲ್ ಜೊತೆ ಸಿಎಂ ಉದ್ಧವ್ ಠಾಕ್ರೆಯನ್ನೂ ಟ್ರೋಲ್ ಮಾಡಿದ್ದಾರೆ. ಇಬ್ಬರೂ ಜನರ ತೆರಿಗೆಯಿಂದ ಜಾಹೀರಾತು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ.
undefined
ಮನೆ ಬಾಗಿಲಿಗೆ ಮದ್ಯ ಡೆಲಿವರಿ ನೀಡುವ ವಿಚಾರವಾಗಿಯೂ ಕೇಜ್ರೀವಾಲ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆ ಬಾಗಿಲಿಗೇನೋ ಸರ್ಕಾರ ಮದ್ಯ ಸರಬರಾಜು ಮಾಡುತ್ತದೆ, ಆದರೆ ದೆಹಲಿಗರಿಗೆ ಕುಡಿಯಲು ಶುದ್ಧ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
undefined
ಇನ್ನೊಬ್ಬ ವ್ಯಕ್ತಿ ಕೇಜ್ರೀವಾಲ್ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
undefined
ಅನೇಕ ಮಂದಿ ಈ ಹ್ಯಾಷ್‌ಟ್ಯಾಗ್‌ನಡಿ ಟ್ವೀಟ್‌ ಮಾಡಿದ್ದಾರೆ. ನೆಟ್ಟಿಗರ ಕ್ರಿಯೇಟಿವಿಟಿ ಮತ್ತೊಂದು ಹಂತ ತಲುಪಿದೆ. ವ್ಯಕ್ತಿಯೊಬ್ಬ ಸರ್ಕಾರಕ್ಕೆ ಯಾವುದಾದರೂ ವಿಚಾರದ ಬಗ್ಗೆ ದೂರು ನಿಡಬೇಕಾದರೆ ಜಾಹೀರಾತು ನೀಡಿ ಎಂದು ಬರೆದಿದ್ದಾನೆ.
undefined
ಮತ್ತೊಂದು ಪೋಸ್ಟ್‌ನಲ್ಲಿ ಮೋದಿ ಹಾಗೂ ಕೇಜ್ರೀವಾಲ್ ಫೋಟೋ ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮೋದಿ ದೆಹಲಿ ಸಿಎಂ ಬಳಿ ಇತ್ತೀಚೆಗೆ ಏನು ಮಾಡುತ್ತಿದ್ದೀರೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಕೇಜ್ರೀವಾಲ್‌ ಜಾಹೀರಾತು ಮಾಡುತ್ತಿದ್ದೇನೆ ಎಂದು ಉತ್ತರಿಸುವಂತೆ ಟ್ರೋಲ್ ಮಾಡಲಾಗಿದೆ.
undefined
ಕೇಜ್ರೀವಾಲ್ ಕೊಟ್ಟ ಪ್ರಮುಖ ಭರವಸೆ ಉಚಿತ ನೀರು ಹಾಗೂ ವಿದ್ಯುತ್ ಪೂರೈಕೆ ವಿಚಾರವಾಗಿಯೂ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
undefined
ಕೇಜ್ರೀವಾಲ್ ಸರ್ಕಾರ ಕೇವಲ ಮಹಿಳೆಯರಿಗಾಗಿ ಡಿಟರ್ಜೆಂಟ್‌ ತಂದಿದೆ ಎಂದು ನೆಟ್ಟಿಗನೊಬ್ಬ ಮೂದಲಿಸಿದ್ದಾನೆ.
undefined
ಮಳೆಗಾಲದಲ್ಲಿ ಹೇಗೆ ಜನರು ರಸ್ತೆಯಲ್ಲಿ ಓಡಾಡಲು ಪರದಾಡುತ್ತಾರೆ ಎಂಬುವುದನ್ನೂ ಕೇಜ್ರೀವಾಲ್‌ ಜಾಹೀರಾತು ನೀಡುವಂತೆ ಟ್ರೋಲ್ ಮಾಡಲಾಗಿದೆ.
undefined
ದೆಹಲಿಯಲ್ಲಿ ಭಾರೀ ಮಳೆ ಸುರಿಸಿದ್ದೇವೆ, ನೀವು ನೀರು ತುಂಬಿಸಿಕೊಂಡಿದ್ದೀರಾ? ಎಂದು ಪಪ್ರಶ್ನಿಸಿ ಕೇಜ್ರೀವಾಲ್‌ ಬಗ್ಗೆ ವ್ಯಂಗ್ಯ ಮಾಡಲಾಗಿದೆ.
undefined
ಕೇಜ್ರೀವಾಲ್ ವಿದ್ಯುತ್ ಬಿಲ್ ಕಡಿಮೆ ಮಾಡುವ ಭರವಸೆ ನೀಡಿದ್ದರು. ಈ ವಿಚಾರವಾಗಿ ಟ್ರೋಲ್ ಮಾಡಲಾಗಿದ್ದು, ವಿದ್ಯುತ್ ಕೊಡುವುದನ್ನೇ ನಿಲ್ಲಿಸಿದ್ದಾರೆ ಹೀಗಾಗಿ ವಿದ್ಯುತ್ ಬಿಲ್ ಕಡಿಮೆ ಬರುತ್ತಿದೆ ಎಂದು ಕಾಲೆಳೆದಿದ್ದಾರೆ.
undefined
click me!