ಭೂಮಿ ಪೂಜೆಗೂ ಮುನ್ನ 7 ನಿಮಿಷ ಹನುಮಾನ್‌ ಗಡಿಯಲ್ಲಿ ಮೋದಿ ಪೂಜೆ!

First Published Aug 3, 2020, 5:40 PM IST

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಪ್ರಧಾನಿ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ಭದ್ರತೆಯೂ ಹೆಚ್ಚಿದೆ. ಪ್ರತಿ ಮನೆಯ ಗೋಡೆಗಳೂ ಶ್ರೀರಾಮನ ಕತೆ ಹೇಳುತ್ತಿವೆ. ಹೀಗೆ ಅಯೋಧ್ಯೆ ಮಧುವಣಗಿತ್ತಿಯಂತೆ ಈ ಶುಭ ಗಳಿಗೆಗೆ ಸಜ್ಜಾಗಿದೆ. ಆದರೆ ಇವೆಲ್ಲದರ ನಡುವೆ ಹನುಮಾನ್ ಗಡಿ ದೇಗುಲದಲ್ಲೂ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ಪಿಎಂ ಮೋದಿ ಭೂಮಿ ಪೂಜೆಗೂ ಮುನ್ನ ಇಲ್ಲಿ ಭೇಟಿ ನೀಡಿ ಏಳು ನಿಮಿಷದ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಂಕು ಸ್ಥಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
undefined
ಅದಕ್ಕೂ ಮೊದಲು ಅವರು ಹನುಮಾನ್ ಗಡಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
undefined
ಮೋದಿ ಭೇಟಿ ಹಿನ್ನೆಲೆ ಅಯೋಧ್ಯೆಯಲ್ಲಿರುವ ಹನುಮಾನ್ ಗಡಿ ದೇವಾಲಯವನ್ನು ಸೋಮವಾರ ಸ್ಯಾನಿಟೈಸ್ ಮಾಡಲಾಗಿದೆ.
undefined
ಮೊದಲು ದೇವಾಲಯಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ ಬಳಿಕ ರಾಮ ಮಂದಿರ ಶಂಕು ಸ್ಥಾಪನೆ ಸ್ಥಳಕ್ಕೆ ತೆರಳಲಿದ್ದಾರೆ.
undefined
ನರೇಂದ್ರ ಮೋದಿ ಅವರು ಮೊದಲು ಹನುಮಾನ್ ಗಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರಾಮ ಮಂದಿರದ ಜಾಗಕ್ಕೆ ತೆರಳಲಿದ್ದಾರೆ. ಆದ್ದರಿಂದ, ಇಂದು ಸ್ಯಾನಿಟೈಸ್ ಮಾಡಲಾಗುತ್ತಿದೆ" ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ.
undefined
ಮೋದಿ ಮತ್ತು ವಿವಿಧ ಗಣ್ಯರ ಭೇಟಿ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೋದಿಗೆ ರಕ್ಷಣೆ ನೀಡುವ ಎಸ್‌ಪಿಜಿ ಪಡೆ ಈಗಾಗಲೇ ಅಯೋಧ್ಯೆಗೆ ಆಗಮಿಸಿದೆ.
undefined
ಈ ಸಂಬಂಧ ಮಧುವನ್ ದಾಸ್ ಪ್ರತಿಕ್ರಿಯಿಸಿದ್ದು, ಹನುಮಂತನಿಲ್ಲದೇ ಶ್ರೀರಾಮನ ಯಾವುದೇ ಕಾರ್ಯ ನಡೆಯುವುದಿಲ್ಲ. ಹೀಗಾಗಿ ಮೋದಿ ಹನುಮಾಣ್ ಗಡಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾಋಎ ಎಂದಿದ್ದಾರೆ.
undefined
click me!