ಕೈ, ಕಾಲಿಲ್ಲದೆ ಹುಟ್ಟಿದ ಹೆಣ್ಣು ಮಗು, ದೇವರ ಪವಾಡ ಎನ್ನುತ್ತಿರುವ ಜನ

First Published | Jul 31, 2020, 7:52 PM IST

ಇಂದಿಗೂ ನಮ್ಮ ದೇಶದಲ್ಲಿ ಮಕ್ಕಳು ದೇವರ ವರ ಎಂದು ಪರಿಗಣಿಸಲಾಗುತ್ತದೆ. ಅಂತಹ ಒಂದು ಆಶ್ಚರ್ಯಕರ ಸುದ್ದಿ ಮಧ್ಯಪ್ರದೇಶದಿಂದ ಹೊರಬಂದಿದೆ, ಮಹಿಳೆಯೊಬ್ಬರು ಕೈ ಮತ್ತು ಕಾಲುಗಳಿಲ್ಲದ ಹೆಣ್ಣಿಗೆ ಜನ್ಮ ನೀಡಿದ್ದಾರೆ, ಅಂದರೆ, ನವಜಾತ ಶಿಶು ತಲೆ ಮತ್ತು ಮುಂಡ ಮಾತ್ರ ಹೊಂದಿದೆ. ಇದರ ಹೊರತಾಗಿಯೂ, ಅದು ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮಗುವನ್ನು ನೋಡಲು ದೂರ ದೂರದಿಂದ  ಜನರು ಆಗಮಿಸುತ್ತಿದ್ದಾರೆ. ಮಗುವನ್ನು ಲಕ್ಷ್ಮಿಯ ಅವತಾರವೆಂದು ಪರಿಗಣಿಸುತ್ತಿರುವ ಸಂತೋಷದ ವಿಷಯ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಿರೋಂಜ್‌ನಲ್ಲಿ ಮಂಗಳವಾರ ಸಂಜೆ ಮೋಹರ್ ಬಾಯಿ ಎಂಬ ಮಹಿಳೆ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಸುತ್ತಮುತ್ತಲಿನ ಜನರು ಇದನ್ನು ದೇವರ ಪವಾಡವೆಂದು ಪರಿಗಣಿಸುತ್ತಿದ್ದಾರೆ, ಈ ಮಗುವನ್ನು ನೋಡಲು ದೂರ ದೂರದಿಂದ ಜನರು ಆಗಮಿಸುತ್ತಿದ್ದಾರೆ.
undefined
ವೈದ್ಯರ ಪ್ರಕಾರ, ಮಗು ಬೆಳವಣಿಗೆಯಾಗದೆ ಎರಡೂ ಕೈಗಳು, ಎರಡೂ ಕಾಲುಗಳಿಲ್ಲ ಹಾಗೂ ಅರ್ಧ ಭಾಗ ಉಳಿದಿವೆ. ಇದು ಲಕ್ಷಾಂತರ ಜನರಲ್ಲಿ ಒಬ್ಬರಿಗೆ ಕಂಡು ಬರುವಜನ್ಮಜಾತ ಕಾಯಿಲೆಯಾಗಿದೆ ಎಂದು ಸಿರೋಂಜ್ ಸರ್ಕಾರಿ ರಾಜೀವ್ ಗಾಂಧಿ ಆಸ್ಪತ್ರೆಯ ಡಾ.ರಾಹುಲ್ ಚಂದೇಲ್ಕರ್ ಹೇಳುತ್ತಾರೆ. ಈ ರೋಗವನ್ನು ಟ್ರೆಟ್ ಅಮೆಲಿಯಾ (tret amelia) ಎಂದು ಕರೆಯಲಾಗುತ್ತದೆ.
undefined
Tap to resize

ಕೈ ಮತ್ತು ಕಾಲುಗಳಿಲ್ಲದೆ ಜನ್ಮ ತೆಗೆದುಕೊಳ್ಳುವುದು ಟೆಟ್ರಾ-ಅಮೆಲಿಯಾ ಸಿಂಡ್ರೋಮ್‌ನ ಆನುವಂಶಿಕ ಕಾಯಿಲೆಯಿಂದಾಗಿ ಎಂದು ವೈದ್ಯರು ಹೇಳುತ್ತಾರೆ. ಅಂತಹ ಮಕ್ಕಳ ಪೋಷಕರು ಅಥವಾ ಅವರ ಯಾವುದೇ ಪೀಳಿಗೆಯವರು ಈ ರೋಗದ ವಂಶವಾಹಿಗಳನ್ನು ಹೊಂದಿದ್ದಾರೆ. ಅನೇಕ ತಲೆಮಾರುಗಳ ನಂತರ, ಈ ಮಗುವಿನಲ್ಲಿ ಹೊರಹೊಮ್ಮಿದೆ ಎನ್ನುತ್ತಾರೆ ಡಾಕ್ಟರ್‌.
undefined
ಇತ್ತೀಚೆಗೆ, ಇದೇ ರೀತಿಯ ಘಟನೆಯನ್ನು ಕೆಲವು ದಿನಗಳ ಹಿಂದೆ ವಿದಿಶಾ ಜಿಲ್ಲೆಯ ಸಂಕ್ಲಾ ಗ್ರಾಮದಲ್ಲಿಯೂ ನಡೆದಿತ್ತು. ಅಲ್ಲಿ ಸೋನು ಕುಟುಂಬದಲ್ಲಿ ಇದೇ ರೀತಿಯ ಹೆಣ್ಣು ಮಗು ಜನಿಸಿದೆ.ಮಗು ಹುಟ್ಟಿದಾಗಿನಿಂದ ತಾಯಿ ಚಿಂತೆ ಮಾಡುತ್ತಿದ್ದರೆ,ತಂದೆ ಮಗಳನ್ನು ದೇವರ ಉಡುಗೊರೆ ಎಂದು ಪರಿಗಣಿಸುತ್ತಿದ್ದಾನೆ.
undefined
ಆಸ್ಟ್ರೇಲಿಯಾದ ಪ್ರಸಿದ್ಧ ಸ್ಪೀಕರ್ ನಿಕ್ ವುಜಿಸಿಸ್ ಕೂಡ ಈ ಸಿಂಡ್ರೋಮ್‌ಗೆ ಬಲಿಯಾಗಿದ್ದಾರೆ. ಆದರೆ ಅವರು ಜಗತ್ತಿಗೆ ಮಾದರಿ.
undefined
ನಿಕ್ ತನ್ನ ಎಡಭಾಗದಲ್ಲಿ ಸಣ್ಣ ಕಾಲು ಹೊಂದಿದ್ದಾರೆ. ನಿಕ್ ತನ್ನ ಎಲ್ಲಾ ಕೆಲಸ ಹಾಗೂ ಸಾಹಸವನ್ನು ಅದರ ಸಹಾಯದಿಂದ ಮಾಡುತ್ತಾರೆ.
undefined
ನಿಕ್ ಆಸ್ಟ್ರೇಲಿಯಾದ ಪ್ರಸಿದ್ಧ ಮೋಟಿವೇಷನಲ್‌ ಸ್ಪೀಕರ್.‌ಕ್ರೀಡಾಪಟು ಕೂಡ ಹೌದು.
undefined
ನಿಕ್‌ಗೆ 10 ವರ್ಷ ವಯಸ್ಸಾಗಿದ್ದಾಗ, ಒಮ್ಮೆ ಆತ್ಮಹತ್ಯೆಯ ಕಲ್ಪನೆ ಬಂದಿತ್ತಂತೆ. ಆ ಸಮಯದಲ್ಲಿ ಅವರು ಮೆಲ್ಬೋರ್ನ್‌ನಲ್ಲಿ ಓದುತ್ತಿದ್ದರು. ಆದರೆ, ತಾಯಿಯ ಪ್ರೀತಿ ಮತ್ತು ಬೆಂಬಲ ಅವರನ್ನು ಪ್ರೋತ್ಸಾಹಿಸಿತು.
undefined
ನಿಕ್‌ಗೆ 17 ವರ್ಷ ವಯಸ್ಸಾಗಿದ್ದಾಗ, ಅವರು ತಮ್ಮ ಶಾಲೆಯಲ್ಲಿ ಸಾರ್ವಜನಿಕ ಭಾಷಣವನ್ನು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು ಮತ್ತು ಜನರು ಅವನಿಂದ ಪ್ರಭಾವಿತರಾದರು.
undefined
ಪ್ರಸ್ತುತ, ನಿಕ್ ಭಾಷಣವನ್ನು ನಡೆಸುವ ಆಟಿಟ್ಯೂಡ್ ಈಸ್ ಆಲ್ಟಿಟ್ಯೂಡ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
undefined
ನಿಕ್ ಈಜು ಮತ್ತು ಸ್ಕೈಡೈವಿಂಗ್ ಅನ್ನು ಪ್ರೀತಿಸುತ್ತಾನೆ. ನಿಕ್ ತನ್ನ ಹೆಚ್ಚಿನ ಕೆಲಸವನ್ನು ಸ್ವತಃ ಮಾಡಿಕೊಳ್ಳಿತ್ತಾರೆ. ಅವರು ಕಂಪ್ಯೂಟರ್‌ ಉಪಯೋಗಿಸುತ್ತಾರೆ. ನಿಕ್ 250 ಕ್ಕೂ ಹೆಚ್ಚು ಫ್ರಾಕ್ಚರ್‌ಗಳನ್ನು ಅನುಭವಿಸಿದ್ದಾರೆ.
undefined

Latest Videos

click me!