ರಾತ್ರಿ ಆರಾಮಾಗಿ ಮಲಗಿತ್ತು ಕುಟುಂಬ, ಬೆಳಗೆದ್ದಾಗ ಕಾದಿತ್ತು ಆಘಾತ!

First Published Aug 1, 2020, 9:59 PM IST

ದೇವರಭೂಮಿ ಉತ್ತರಖಂಡದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಶುಕ್ರವಾರ ತಡರಾತ್ರಿ ಹರಿದ್ವಾರದಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ. ಇನ್ನು ಈ ಸಂಬಂಧ ತಮ್ಮ ನೋವು ತೋಡಿಕೊಂಡಿರುವ ಸ್ಥಳೀಯರು ನಾವು ರಾಥ್ರಿ ನಿಶ್ಚಿಂತೆಯಾಗಿ ಮಲಗಿದ್ದೆವು ಆದರೆ ಎಚ್ಚರವಾದಾಗ ಸುತ್ತಲೂ ನೀರು ತುಂಬಿಕೊಂಡಿತ್ತು ಎಂದಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, ಇದರಲ್ಲಿ ಮನೆಯೊಳಗಿರುವ ವಸ್ತುಗಳು ತೇಲುತ್ತಿರುವುದನ್ನು ನೋಡಬಹುದು.
 

ಹರಿದ್ವಾರದ ತಗ್ಗು ಪಪ್ರದೇಶಗಳಲ್ಲಿ ಎರಡೂವರೆ ಅಡಿ ನೀತರು ತುಂಬಿದೆ. ಜನರು ಮನೆಯಿಂದ ಹೊರ ಬರಲೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನೇಕ ವಸ್ತುಗಳೂನೀರಿನೊಂದಿಗೆ ಕೊಚ್ಚಿ ಹೋಗಿವೆ. ಇನ್ನು ಮಳೆಯ ರಭಸ ಎಷ್ಟಿತ್ತೆಂದರೆ ನಾವು ಬದುಕುಳಿಯುವುದಿಲ್ಲವೆಂದು ಭಾವಿಸಿದ್ದೆವು ಎಂಬುವುದು ಇಲ್ಲಿನ ಸ್ಥಳಿಯರೊಬ್ಬರ ಮಾತಾಗಿದೆ.
undefined
ಉತ್ತರ ಹರಿದ್ವಾರ ಹಾಗೂ ರಾಣಿಪುರ ಬಳಿ ಹಲವಾರು ಮನೆ ಹಾಗೂ ಅಂಗಡಿಯೊಳಗೆ ನೀರು ನುಗ್ಗಿದೆ.
undefined
ಇಷ್ಟೇಯಲ್ಲ ಇಲ್ಲಿ ಭಾರೀ ಮಳೆಯಿಂದ ಅನೇಕ ಫ್ಯಾಕ್ಟರಿಗಳಿಗೂ ನೀರು ನುಗ್ಗಿದೆ.
undefined
ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಮನೆಯೊಳಗೆ ನುಗ್ಗಿದ್ದ ನೀರನ್ನು ಜನರು ಪಾತ್ರೆಗಳ ಸಹಾಯ್ದಿಂದ ತುಂಬಿಸಿ ಹೊರ ಹಾಕಿದರು.
undefined
ಇನ್ನು ಹರಿದ್ವಾರದಲ್ಲಿ ಆಗಸ್ಟ್ 5ರವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ಇಲಾಖೆ 51 ಮಿ. ಮೀ ಮಳರೆ ಬರುತ್ತದೆ ಎಂದು ತಿಳಿಸಿದೆ.
undefined
ತಮ್ಮ ಮನೆ ಹೊರಗಿನ ನೀರು ಹೊರ ಹಾಕುತ್ತಿರುವ ಜನ
undefined
click me!