ಕಳೆದ 3 ವರ್ಷದಲ್ಲಿ 38 ವಿದೇಶ ಪ್ರವಾಸ, ಪ್ರಧಾನಿ ಮೋದಿ ಖರ್ಚು ಮಾಡಿದ್ದೆಷ್ಟು?

Published : Mar 22, 2025, 06:19 PM ISTUpdated : Mar 22, 2025, 06:36 PM IST

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನಪ್ರಿಯ ನಾಯಕ. ಇನ್ನು ಭಾರತ ಹಲವು ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ಸಂಬಂಧವಿದೆ, ವ್ಯವಹಾರ, ಪಾಲುದಾರಿಕೆ ಹೊಂದಿದೆ. ಇದರ ನಡುವೆ ಭಾರತದ ಪ್ರದಾನಿ ವಿದೇಶಿ ಪ್ರವಾಸ ಸಾಮಾನ್ಯ. ಕಳೆದ 3 ವರ್ಷದಲ್ಲಿ ಪ್ರಧಾನಿ ಮೋದಿ 38 ವಿದೇಶಿ ಪ್ರವಾಸ ಕೈಗೊಂಡಿದ್ದರೆ. ಇದಕ್ಕೆ ಖರ್ಚಾಗಿದ್ದೆಷ್ಟು?     

PREV
18
ಕಳೆದ 3 ವರ್ಷದಲ್ಲಿ 38 ವಿದೇಶ ಪ್ರವಾಸ, ಪ್ರಧಾನಿ ಮೋದಿ ಖರ್ಚು ಮಾಡಿದ್ದೆಷ್ಟು?
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ. ಮೋದಿ ವಿದೇಶಿ ಪ್ರವಾಸದ ಮೂಲಕ ಭಾರತದ ಘನತೆ ಹೆಚ್ಚಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೋದಿ ವರ್ಚಸ್ಸು,  ವಿದೇಶ ಭೇಟಿಗಳಿಂದ ಭಾರತೀಯರ ಗೌರವ ಹೆಚ್ಚಾಗಿದೆ. ಆದರೆ ಮೋದಿ ವಿದೇಶ ಪ್ರವಾಸದ ಕುರಿತು ವಿಪಕ್ಷಗಳು ಟೀಕೆ ಮಾಡಿದೆ. ಮೋದಿ ಅತೀ ಹೆಚ್ಚು ಕಾಲ  ವಿದೇಶದಲ್ಲೇ ಕಳೆಯುತ್ತಾರೆ ಎಂದು ಆರೋಪಿಸಿದೆ. ಇದೀಗ ಮೋದಿ ವಿದೇಶ ಪ್ರವಾಸದ ಕುರಿತು ಅಂಕಿ ಅಂಶ ಒಂದು ಬಯಲಾಗಿದ್ದು, ಪರ ವಿರೋಧಕ್ಕೆ ಕಾರಣವಾಗಿದೆ. 

28
ವಿವಾದದ ವಿದೇಶ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ವಿರೋಧ ಪಕ್ಷಗಳು ಹಲವು ಬಾರಿ ಟೀಕಿಸಿವೆ. ಅದರಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ.ಇತ್ತೀಚೆಗೆ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್ ತಿಂಗಳವರೆಗೆ ಪ್ರಧಾನಿ ನರೇಂದ್ರ ಮೋದಿ 38 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಸಂಸತ್ತಿನಲ್ಲಿ ತಿಳಿಸಿದೆ.

38
ವಿದೇಶ ಪ್ರವಾಸದ ವಿಷಯ

ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರವು ಮೂರು ವರ್ಷಗಳಲ್ಲಿ 38 ದೇಶಗಳಿಗೆ ಪ್ರಯಾಣಿಸಲು 258 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿಸಿದೆ. 2023ರ ಜೂನ್‌ನಲ್ಲಿ ಅಮೆರಿಕ ಪ್ರವಾಸಕ್ಕೆ ಅತಿ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಕೇಂದ್ರ ತಿಳಿಸಿದೆ. ವಿದೇಶ ಪ್ರವಾಸದ ವಿಷಯದ ಬಗ್ಗೆ ವಿರೋಧ ಪಕ್ಷಗಳು ಹಲವು ಬಾರಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಿವೆ.ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮೋದಿ ಅವರ ವಿದೇಶ ಪ್ರವಾಸದ ಖರ್ಚಿನ ಬಗ್ಗೆ ಮಾಹಿತಿ ನೀಡಿದೆ.

48

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿಯವರ ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ದರು. ಅದಕ್ಕೆ ಉತ್ತರಿಸಿದ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರು ವಿವರವಾದ ಮಾಹಿತಿಯನ್ನು ನೀಡಿದರು.

58
ಹೆಚ್ಚು ಖರ್ಚು

ಕೇಂದ್ರ ಸರ್ಕಾರವು 2023ರ ಜೂನ್ ತಿಂಗಳಲ್ಲಿ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ತಿಳಿಸಿದೆ. ಆ ಸಮಯದಲ್ಲಿ 22 ಕೋಟಿ 89 ಲಕ್ಷ 68 ಸಾವಿರದ 509 ರೂಪಾಯಿ ಖರ್ಚು ಮಾಡಲಾಗಿತ್ತು. ಜಪಾನ್ ಪ್ರವಾಸಕ್ಕೆ 17 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

68
ಇತರೆ ಖರ್ಚು

ಕೇಂದ್ರದ ಮಾಹಿತಿಯ ಪ್ರಕಾರ, ಮೋದಿಯವರ ವಿದೇಶ ಪ್ರವಾಸದಲ್ಲಿ ಮಿಸ್ಲೇನಿಯಸ್ ಅಥವಾ ಇತರೆ ಖರ್ಚು 75 ಕೋಟಿ 70 ಲಕ್ಷ 50 ಸಾವಿರದ 726 ರೂಪಾಯಿ ಆಗಿದೆ. ಮೋದಿ ವಿದೇಶಿ ಪ್ರವಾಸದ ಲೆಕ್ಕ ಇದೀಗ ವಿಪಕ್ಷಗಳ ಶಕ್ತಿ ಹೆಚ್ಚಿಸಿದೆ. ಬಿಜೆಪಿ ಮೇಲೆ ಮುಗಿ ಬೀಳಲು ಸಜ್ಜಾಗಿದೆ. 

78
ಖರ್ಚು ಯಾವ ಖಾತೆಗೆ

ಕೇಂದ್ರ ಸರ್ಕಾರದ ಲೆಕ್ಕದ ಪ್ರಕಾರ, ಪ್ರಧಾನ ಮಂತ್ರಿಯವರ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳುವುದು, ಪ್ರಯಾಣ ವ್ಯವಸ್ಥೆ, ಭದ್ರತಾ ಖರ್ಚು ಮತ್ತು ಕೆಲವು ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹಾಲ್ ಬಾಡಿಗೆಗೆ ಖರ್ಚು ಮಾಡಲಾಗಿದೆ. ಭಾರತದ ಪ್ರಧಾನಿ ವಿದೇಶಿ ಪ್ರವಾಸಕ್ಕೆ ಕಂದ್ರ ಸರ್ಕಾರದ ಖಜಾನೆಯಿಂದ ಹಣ ಖರ್ಚು ಮಾಡಲಾಗುತ್ತದೆ. ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ವಿದೇಶ ಪ್ರವಾಸಕ್ಕೂ ಒಂದೇ ನಿಯಮವಾಗಿದೆ. 

88
ಮೋದಿ ಅವರ ವಾಸ್ತವ್ಯದ ಖರ್ಚು

ಕೇಂದ್ರ ಸಚಿವರು ನೀಡಿದ ಮಾಹಿತಿಯ ಪ್ರಕಾರ, ಮೋದಿಯವರ ವಿದೇಶ ಪ್ರವಾಸದಲ್ಲಿ ಕೇವಲ ವಾಸ್ತವ್ಯಕ್ಕೆ 100 ಕೋಟಿ 22 ಲಕ್ಷ 22 ಸಾವಿರದ 726 ರೂಪಾಯಿ ಖರ್ಚು ಮಾಡಲಾಗಿದೆ.ಮೋದಿಯವರ ವಿದೇಶ ಪ್ರವಾಸದಲ್ಲಿ ಅತಿ ಕಡಿಮೆ ಖರ್ಚು ನೇಪಾಳ ಪ್ರವಾಸದ ಸಮಯದಲ್ಲಿ ಆಯಿತು. ನೇಪಾಳ ಯಾತ್ರೆಗೆ ಕೇವಲ 80 ಲಕ್ಷ ರೂಪಾಯಿ ಖರ್ಚು ಆಯಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories