Redeveloped central vista ಸೆ.8ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ, 20 ತಿಂಗಳ ಬಳಿಕ ಸಾರ್ವಜನಿಕರಿಗೆ ಮುಕ್ತ!

First Published Sep 5, 2022, 6:27 PM IST

20 ತಿಂಗಳ ಬಳಿಕ ದೆಹಲಿಯಲ್ಲಿ ರಾಜಪಥ ಮತ್ತೆ ಸಂಚಾರಕ್ಕೆ ಮುಕ್ತಗೊಳ್ಳುತ್ತಿದೆ. ಸೆಂಟ್ರಲ್ ವಿಸ್ತಾ ಅವೆನ್ಯೂ ಹಸಿರು ತೋಟಗಳಿಂದ ಕಂಗೊಳಿಸುತ್ತಿದೆ. ಸುಂದರ ಉದ್ಯಾನವನವನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 8 ರಂದು ಉದ್ಘಾಟನೆ ಮಾಡಲಿದ್ದಾರೆ.

ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ರಾಜಪಥ ಸಂಪೂರ್ಣವಾಗಿ ನವೀಕರಿಸಲಾಗಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಈ ರಾಜಪಥ ನವೀಕರಣಗೊಂಡಿದ್ದು ಸೆಪ್ಟೆಂಬರ್ 8 ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅತ್ಯಾಕರ್ಷ ಉದ್ಯಾನವನ, ಕೆರೆ, ಕಾರಂಜಿ, ನಡೆದಾಡಲು ಪಥ ಸೇರಿದಂತೆ ಹಲವು ಸೌಲಭ್ಯಗಳು ನೂತನ ಸೆಂಟ್ರಲ್ ವಿಸ್ತಾ ಅವೆನ್ಯೂನಲ್ಲಿ ಲಭ್ಯವಿದೆ.

ವಿಜಯ ಚೌಕ್‌ನಿಂದ ಇಂಡಿಯಾ ಗೇಟ್ ಬಳಿವರೆಗಿನ ರಾಜಪಥ ಹಾಗೂ  ಬದಿಗಳಲ್ಲಿನ ಉದ್ಯಾನವನ್ನು ಸೆಂಟ್ರಲ್ ವಿಸ್ತಾ ಯೋಜನೆಯಡಿ ನವೀಕರಣ ಮಾಡಲಾಗಿದೆ. ಪಾರ್ಕಿಂಗ್, ನಡೆದಾಡಲು ಕೆಂಪು ಗ್ರ್ಯಾನೈಟ್‌ನ ಪಥ ನಿರ್ಮಾಣ ಮಾಡಲಾಗಿದ್ದು, ಅತ್ಯಂತ ಆಕರ್ಷವಾಗಿದೆ.

ಮರ ಗಿಡ ಸೇರಿದಂತೆ ಹಸಿರು ಹುಲ್ಲಿನ ಹಾಸು ಸೆಂಟ್ರಲ್ ವಿಸ್ತಾ ಅವೆನ್ಯೂ ಮತ್ತಷ್ಟು ಸುಂದರವಾಗಿಸಿದೆ. ಆದರೆ ಅವೆನ್ಯೂ ಪಾರ್ಕ್ ಒಳಗೆ ಯಾವುದೇ ಆಹಾರ ತಿನಿಸು ತೆಗೆದುಕೊಂಡು ಹೋಗುವಂತಿಲ್ಲ.

ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಸೆಂಟ್ರಲ್ ವಿಸ್ತಾ ಅವೆನ್ಯೂ ಉದ್ಘಾಟನೆ ಮಾಡಲಿದ್ದಾರೆ. ಸೆ.8 ರಂದು ಸಾರ್ವಜನಿಕರಿಗೆ ಈ ವಲಯದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಸೆಪ್ಟೆಂಬರ್ 9 ರಿಂದ ಈ ಪ್ರದೇಶ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಉದ್ಯಾನವನ ಆರಂಭಕ್ಕೂ ಮುನ್ನ 40 ಬೀದಿ ಬದಿ ವೆಂಡರ್ಸ್‌ಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಆಹಾರ ವಸ್ತುಗಳನ್ನು ಗಾರ್ಡನ್ ಏರಿಯಾಗೆ ತೆಗೆದುಕೊಂಡು ಹೋಗುವಂತಿಲ್ಲ.
 

ಅತ್ಯಂತ ಸೂಕ್ಷ್ಮ, ಹಾಗೂ ಕಲಕುಷಲ ವಸ್ತುಗಳನ್ನು ಇಡಲಾಗಿದೆ. ಹೀಗಾಗಿ ಸೆಂಟ್ರಲ್ ವಿಸ್ತಾ ಅವೆನ್ಯೂ ಪಾರ್ಕ್ ತುಂಬಾ ಸಿಸಿಟಿಲಿ ಕಣ್ಗಾವಲು ಇರಲಿದೆ. ಇಷ್ಟೇ ಅಲ್ಲ 80 ಸೆಕ್ಯೂರಿಟಿ ಗಾರ್ಡ್ ನಿಯೋಜಿಸಲಾಗಿದೆ. 

ಎರಡು ಕಾಲುವೆಗಳಿದ್ದು 16 ಸೇತುವೆಗಳನ್ನು ನಿರ್ಮಿಸಲಾಗಿದೆ. ಇಷ್ಟೇ ಅಲ್ಲ ಈ ಎರಡ ಕಾಲುವೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. 15.5 ಕಿಲೋಮೀಟರ್ ಕಾಲು ದಾರಿಯನ್ನು ಕೆಂಪು ಗ್ರ್ಯಾನೈಟ್ ಮೂಲಕ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 

1,125 ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್ ಏರಿಯಾ ನಿರ್ಮಾಣ ಮಾಡಲಾಗಿದೆ. ಇಂಡಿಯಾ ಗೇಟ್ ಬಳಿ 35 ಬಸ್ ನಿಲ್ಲಿಸುವ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಇಲ್ಲಿಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಬ್ರಿಟೀಷರ ಕಾಲದಲ್ಲಿದ್ದ ಲೈಟ್ಸ್, ವಿದ್ಯುತ್ ಕಂಬಗಳನ್ನು ಮತ್ತೆ ಅದೇ ರೀತಿ ಅಳವಡಿಸಲಾಗಿದೆ. ಇದರ ಜೊತೆಗೆ 900 ಹೊಸ ಲೈಟ್ ಹಾಗೂ ಕಂಬಗಳನ್ನು ಅಳಡಿಸಲಾಗಿದೆ. 
 

ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಪೂರ್ಣಗೊಂದ ಮೊದಲ ಯೋಜನೆ ಇದಾಗಿದೆ. ಸೆಂಟ್ರಲ್ ವಿಸ್ತಾ ಅವೆನ್ಯೂ ಇದೀಗ ಅತ್ಯಾಕರ್ಷ ಪ್ರವಾಸಿ ತಾಣವಾಗಿ ಮಾರ್ಪಡುವುದು ಖಚಿತವಾಗಿದೆ. 

ಸೆಂಟ್ರಲ್ ವಿಸ್ತಾ ಅವೆನ್ಯೂ ಇದೀಗ ಜನರ ಕುತೂಹಲದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದೀಗ ಪ್ರವಾಸಿಗರು ಭೇಟಿ ನೀಡಲು ಕಾದು ಕುಳಿತಿದ್ದಾರೆ.

click me!