Modi In Mangaluru ದಾರಿಯುದ್ದಕ್ಕೂ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಕೋರಿದ ಜನ!

First Published | Sep 2, 2022, 3:55 PM IST

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಿದ ಮೋದಿಗೆ ಕುಡ್ಲದ ಜನ ಭರ್ಜರಿ ಸ್ವಾಗತ ಕೋರಿದ್ದಾರೆ. ಕೇರಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಬಳಿ ರಸ್ತೆ ಮಾರ್ಗ ಮೂಲಕ ಕೂಳೂರಿನ ಗೋಲ್ಡ್ ಫಿಂಚ್ ಮೈದಾನಕ್ಕೆ ಆಗಮಿಸಿದ್ದಾರೆ. ದಾರಿಯುದ್ದಕ್ಕೂ ಜನರು ಮೋದಿಗೆ ಸ್ವಾಗತ ಕೋರಿದ್ದಾರೆ. ಮಂಗಳೂರು ಜನರ ಪ್ರೀತಿಯ ಸ್ವಾಗತ ವಿಶೇಷ ಚಿತ್ರಗಳು ಇಲ್ಲಿವೆ.

ಕೇರಳದ ಕೊಚ್ಚಿಯಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಭಾರತೀಯ ನೌಕಾಪಡೆಗೆ ನಿಯೋಜನೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ನೇರವಾಗಿ ಮಂಗಳೂರಿಗೆ ಬಂದಿಳಿದರು. ಮಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿಯನ್ನು ಬರಮಾಡಿಕೊಂಡಿರು.

ವಿಮಾನ ನಿಲ್ದಾಣದಿಂದ ಮೋದಿ ರಸ್ತೆ ಮಾರ್ಗ ಮೂಲಕ ಕೂಳೂರಿನಲ್ಲಿ ಗೋಲ್ಡ್ ಫಿಂಚ್ ಮೈದಾನದಕ್ಕೆ ಆಗಮಿಸಿದರು. ಮೋದಿ ಆಗಮನದಿಂದ ವಿಮಾನ ನಿಲ್ದಾಣದ ಸುತ್ತ ಭಾರಿ ಜನ ಸೇರಿದ್ದರು. ವಿಮಾನ ನಿಲ್ದಾಣದಿಂದ ಹೊರಹೋಗುವ ವಾಹನಗಳ ದಾರಿಯಲ್ಲಿ ಕಿಕ್ಕಿಕ್ಕಿರಿದು ತುಂಬಿದ್ದ ಜನ ಮೋದಿಗೆ ಸ್ವಾಗತ ಕೋರಿದರು.

Tap to resize

ವಿಮಾನ ನಿಲ್ದಾಣದಿಂದ ಕೂಳೂರಿನತ್ತ ಹೊರಟ ಮೋದಿಗೆ ರಸ್ತೆಯುದ್ದಕ್ಕೂ ಭರ್ಜರಿ ಸ್ವಾಗತ ನೀಡಿದ್ದಾರೆ. ಮೋದಿ ಮೋದಿ ಜಯಘೋಷಗಳು ಮೊಳಗಿತು. ರಸ್ತೆ ಬದಿಗಳಲ್ಲಿ ನಿಂತು ಸ್ವಾಗತ ಕೋರಿದ ಜನರಿಗೆ ಮೋದಿ ಕೈಬೀಸಿ ಧನ್ಯವಾದ ಅರ್ಪಿಸಿದರು.

ಮೋದಿ ಆಗಮನದ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಕಿಕ್ಕಿರಿದು ತುಂಬಿದ ಜನರನ್ನ ನಿಯಂತ್ರಿಸಲು ಪೊಲೀಸರು ಹೆಚ್ಚಿನ ಮುಂಜಾಗ್ರತೆ ವಹಿಸಿದ್ದರು. ಯಾವುದೇ ಅಹಿತಕರ ಘಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ. 
 

ರಸ್ತೆಯ ಬದಿಗಳಲ್ಲಿ ಕಬ್ಬಿಣದ ರಾಡ್‌ಗಳನ್ನು ಹಾಕಲಾಗಿತ್ತು. ಈ ಮೂಲಕ ಅದೆಷ್ಟೇ ಜನ ತುಂಬಿದರು ಮೋದಿ ಪ್ರಯಾಣಕ್ಕೆ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು.
 

ಗೋಲ್ಡ್ ಫಿಂಚ್ ಮೈದಾನಕ್ಕೆ ಆಗಮಿಸಿದ ಮೋದಿ ಬರೋಬ್ಬರಿ 3,800 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬಂದರು ನವೀಕರಣ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ.

ಸಾಗರಮಾಲಾ ಯೋಜನೆಯಡಿ ಮಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗೆ ಮೋದಿ ಒತ್ತು ನೀಡಿದರು.  ಇದೇ ವೇಳೆ ಮಂಗಳೂರು ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗಳು ಕರಾವಳಿ ಭಾಗಕ್ಕೆ ಹೆಚ್ಚಿನ ನೆರವು ನೀಡಲಿದೆ ಎಂದರು.

ನಿನ್ನೆ ಕೊಚ್ಚಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ ಮಳೆಯನ್ನು ಲೆಕ್ಕಿಸದೆ ಜನ ಮೋದಿಗೆ ಸ್ವಾಗತ ನೀಡಿದ್ದರು. ಪ್ರಧಾನಿ ಕೊಚ್ಚಿ ವಿಮಾನ ನಿಲ್ದಾಣದ ಸಮೀಪದಲ್ಲೇ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ್ದರು.

Latest Videos

click me!