ಪೋಲೆಂಡ್‌ನಲ್ಲಿ ಪ್ರವಾಸಿ ಭಾರತೀಯರಿಂದ ಮೋದಿಗೆ ಅದ್ದೂರಿ ಸ್ವಾಗತ!

First Published | Aug 22, 2024, 10:31 AM IST

ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನ ಮಂತ್ರಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸಿ ಭಾರತೀಯರು ಮೋದಿಯವರನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.

ಪೋಲೆಂಡ್‌ನಲ್ಲಿ ವಾಸಿಸುವ ಪ್ರವಾಸಿ ಭಾರತೀಯರು ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಜನರು ಮೋದಿ..ಮೋದಿ... ಎಂದು ಘೋಷಣೆ ಕೂಗಿ ಬರಮಾಡಿಕೊಂಡರು. ಈ ವೇಳೆ ಪ್ರಧಾನಿ ಎಲ್ಲರನ್ನೂ ಭೇಟಿಯಾದರು.

ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಹೋಟೆಲ್‌ಗೆ ಸಾಕಷ್ಟು ಜನರು ಆಗಮಿಸಿದ್ದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದರೆ, ಕೆಲವರು ಮೋದಿ ಫೋಟೋ ಹಿಡಿದು ನಿಂತಿದ್ದರು.

Tap to resize

ಪ್ರಧಾನ ಮಂತ್ರಿ ಸ್ವಾಗತಿಸಲು ಬಂದವರ ಬಳಿ ತೆರಳಿ ಅವರೊಂದಿಗೆ ಕೈಕುಲುಕಿದರು. ಈ ವೇಳೆ ಜನರು ಪ್ರಧಾನಿ ಜೊತೆ ಫೋಟೋ ತೆಗೆದುಕೊಳ್ಳಲು ಉತ್ಸಾಹ ಕಂಡುಬಂತು.

ಸ್ವಾಗತಿಸಲು ಬಂದ ವ್ಯಕ್ತಿಯೊಬ್ಬರ ಪುಟ್ಟ ಮಗುವನ್ನು ನೋಡಿದ ನರೇಂದ್ರ ಮೋದಿ ಅವರ ಬಳಿಗೆ ತೆರಳಿದರು. ಪ್ರಧಾನಿ ಮೋದಿ ಮಗುವನ್ನು ಮುದ್ದಾಡಿದ ವಿಡಿಯೋ ಕೂಡ ವೈರಲ್‌ ಆಗಿದೆ.

45 ವರ್ಷಗಳ ನಂತರ ಬುಧವಾರ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಪೋಲೆಂಡ್‌ ಭೇಟಿಗೆ ಆಗಮಿಸಿದ್ದಾರೆ. ಆ ಬಳಿಕ ಉಕ್ರೇನ್‌ಗೂ ಭೇಟಿ ನೀಡಲಿದ್ದಾರೆ.

ಯುರೋಪ್‌ ರಾಷ್ಟ್ರ ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ದ್ವಿಪಕ್ಷೀಯ ಮಾತುಕತೆಯಲ್ಲೂ ಅವರು ಭಾಗಿಯಾಗಲಿದ್ದಾರೆ.

ವಾರ್ಸಾ ವಿಮಾನ ನಿಲ್ದಾಣದಲ್ಲಿ ತಮ್ಮ ವಿಶೇಷ ವಿಮಾನದಿಂದ ಇಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್ ಸರ್ಕಾರದ ಪ್ರತಿನಿಧಿಗಳನ್ನು ಭೇಟಿಯಾದರು.

Latest Videos

click me!