ಬಸ್ ಕಂಡಕ್ಟರ್ ಭಾರತಿ ಹಾಗೂ ಪ್ರಯಾಣಿಕರೊಬ್ಬರಾದ ನರ್ಸ್ ಅಲಿವೇಲು ಮಂಗಮ್ಮ ಅವರು ಸಂಧ್ಯಾ ಅವರಿಗೆ ಜನ್ಮ ನೀಡಿದ್ದಾರೆ. ಬಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ ಇಬ್ಬರ ಜೀವ ಉಳಿಸಿದ ಕಂಡಕ್ಟರ್ ಹಾಗೂ ನರ್ಸ್ ರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಆರ್‌ಟಿಸಿ ಎಂಡಿ ಸಜ್ಜನರ್‌ಗೆ ತಲುಪಿತ್ತು. ಹೀಗಾಗಿ ಆ ಮಗುವಿನ ಜೊತೆಗೆ ಕಂಡಕ್ಟರ್ ಭಾರತಿ ಮತ್ತು ನರ್ಸ್ ಅಲಿವೇಲು ಅವರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಬಸ್ಸಿನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೀವನ ಪರ್ಯಂತ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ತೆಲಂಗಾಣದ ಡೀಲಕ್ಸ್ ಮತ್ತು ಸೂಪರ್ ಐಷಾರಾಮಿ ಬಸ್‌ಗಳಲ್ಲಿ ಒಂದು ವರ್ಷದವರೆಗೆ ಕಂಡಕ್ಟರ್ ಮತ್ತು ನರ್ಸ್ ಕೂಡ ಉಚಿತವಾಗಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು. ಜೊತೆಗೆ ಇದೇ ವೇಳೆ ಟಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್ ಅವರು, ಕಂಡಕ್ಟರ್ ಭಾರತಿ ಮತ್ತು ಅಲಿವೇಲು ಅವರಿಗೆ ಒಂದು ವರ್ಷದ ಉಚಿತ ಬಸ್ ಪಾಸ್‌ಗಳನ್ನು ಹಸ್ತಾಂತರಿಸಿದರು.