ಗುಜರಾತ್ ಸಿಎಂನಿಂದ ದೇಶದ ಪ್ರಧಾನಿವರೆಗೆ: ಅಧಿಕಾರದ 20ನೇ ವರ್ಷಕ್ಕೆ ಕಾಲಿಟ್ಟ ಮೋದಿ!

First Published Oct 7, 2020, 4:59 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿ ಬುಧವಾರದಂದು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅವರು ಬ್ರೇಕ್ ಪಡೆದದ್ದೇ ಇಲ್ಲ. ಈ ಮೂಲಕ ಓರ್ವ ರಾಜಕೀಯ ನಾಯಕನಾಗಿ ಈ ಕ್ಷೇತ್ರಕ್ಕೆ ಕಾಲಿಡಲಿಚ್ಛಿಸುವವರಿಗೆ ಅವರೊಬ್ಬ ಮಾರ್ಗದರ್ಶಕರೂ ಹೌದು ಎಂದರೆ ತಪ್ಪಾಗುವುದಿಲ್ಲ. ಅಲ್ಲದೇ ಅವರು ತಮ್ಮ ಕೆಲಸ, ಕಾರ್ಯಗಳ ಮೂಲಕ ಬಿಜೆಪಿಗೆ ಪ್ರತಿಷ್ಠೆಯನ್ನೂ ತಂದು ಕೊಟ್ಟಿದ್ದಾರೆ. ಬಿಜೆಪಿಯೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದ ಸಂದರ್ಭದಲ್ಲಿ ಮೋದಿಯನ್ನು ಆರ್‌ಎಸ್‌ಎಸ್‌ನಿಂದ ತೆಗೆದು ಅಚಾನಕ್ಕಾಗಿ ಗುಜರಾತ್‌ನ ಸಿಎಂ ಆಗುವ ಅವಕಾಶ ನೀಡಲಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ನರೇಂದ್ರ ಮೋದಿ ಗುಜರಾತ್‌ನಲ್ಲಿ ನಿರಂತರ ಮೂರು ಅವಧಿಗೆ ಸರ್ಕಾರದ ನೇತೃತ್ವ ವಹಿಸಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ಗೆ ಸವಾಲೆಸೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು. ಇಲ್ಲಿದೆ ನೋಡಿ ಮೋದಿ ರಾಜಕೀಯ ಪಯಣದ ಒಂದು ಝಲಕ್

ದೇಶವಾಸಿಗಳ ಹೃದಯ ಗೆಲ್ಲುತ್ತಲೇ ಇದ್ದ ಮೋದಿ: ಬಿಜೆಪಿ ಮೂಲಗಳ ಅನ್ವಯ ನರೇಂದ್ರ ಮೋದಿ ನಿರಂತರ 19 ವರ್ಷಗಳವರೆಗಿನ ತಮ್ಮ ಸರ್ಕಾರಿ ಸೇವೆಯ ಎರಡನೇ ಅವಧಿ ಅಂದರೆ ಭಾರತದ ಪಗ್ರಧಾನ ಮಂತ್ರಿಯಾಗಿ ಜನ ಸಾಮಾನ್ಯರನ್ನು ಸಂತುಷ್ಟರನ್ನಾಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆನ್ನಲಾಗಿದೆ.
undefined
ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೊಳಿಸುವ ವಿಚಾರವಾಗಿರಲಿ ಅಥವಾ ಕೊರೋನಾ ವೈರಸ್‌ನಂತಹ ಕಣ್ಣಿಗೆ ಕಾಣದ ಮಹಾಮಾರಿ ನಿಯಂತ್ರಿಸುವ ಹೋರಾಟದಲ್ಲಾಗಿರಲಿ, ಪ್ರಧಾನಿ ಮೋದಿಯ ನಿರ್ಧಾರಗಳು ದೇಶದ ಪರ ಅವರ ನಿಷ್ಠೆಯನ್ನು ಮತ್ತಷ್ಟು ಬಲಪಡಿಸಿತು.
undefined
ಬಿಜೆಪಿ ಕೊಟ್ಟಿದ್ದ ಹಳೆ ಆಶ್ವಾಸನೆಗಳನ್ನೂ ಜಾರಿಗೊಳಿಸಿದರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ಇಂತಹ ಗಂಭೀರ ವಿವಾದಕ್ಕೆ ಕಾನೂನಾತ್ಮಕ ಪರಿಹಾರ ನೀಡುವ ಬಿಜೆಪಿಯ ಹಳೆಯ ಆಶ್ವಾಸನೆ ಪೂರೈಸಿದ್ದಾರೆ,.
undefined
ಅದಕ್ಕೂ ಮುನ್ನ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿ ಬಿಜೆಪಿಯ ಮತ್ತೊಂದು ಪ್ರಮುಖ ಆಶ್ವಾಸನೆಯನ್ನು ಈಡೇರಿಸಿದ್ದರು.
undefined
ಇನ್ನು ಮೋದಿ ಪ್ರಧಾನ ಮಂತ್ರಿಯಾಗಿ ಎರಡನೇ ಅವಧಿಯ ಆರಂಭದಲ್ಲೇ ತ್ರಿವಳಿ ತಲಾಖ್ ರದ್ದುಗೊಳಿಸುವ ಮೂಲಕ ಮುಸಲ್ಮಾನ ಮಹಿಳೆಯರನ್ನು ಈ ಪದ್ಧತಿಯಿಂದ ಮುಕ್ತಗೊಳಿಸಿದ್ದರು. ಬಿಜೆಪಿ ಇದನ್ನು ಮುಸ್ಲಿಂ ಸಮಾಜದಲ್ಲಿ ಬಹುದೊಡ್ಡ ಸುಧಾರಣೆಯ ಅಡಿಪಾಯ ಎಂದೇ ಹೇಳುತ್ತದೆ.ಈ ಮೂಲಕ ಬಿಜೆಪಿ ತಾನು ಸಮಾಜದ ಎಲ್ಲಾ ವರ್ಗದ ಜನರ ಕಾಳಜಿ ವಹಿಸುತ್ತೇವೆಂಬ ಸಂದೇಶ ನೀಡಿದೆ.
undefined
ಚುನಾವಣಾ ಪ್ರಣಾಳಿಕೆ ಮೂಲಕ ಜನರಲ್ಲಿ ವಿಶ್ವಸಾ ತುಂಬಿದರು: ಆತ್ಮನಿರ್ಭರ ಭಾರತ ಅಭಿಯಾನದ ಲಾಂಚಿಂಗ್, ಕೊರೋನಾ ಮಹಾಮಾರಿಯಿಂದ ನಲುಗಿದ ಕೋಟ್ಯಂತರ ಜನರಿಗೆ ಉಚಿತ ಆಹಾರ ವಿತರಿಸುವುದರಿಂದ ಹಿಡಿದು ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಭಾಷೆಯಲ್ಲೇ ಉತ್ತರಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ ಮೋದಿ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
undefined
ಬಿಜೆಪಿ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸುತ್ತಾ 'ಚುನಾವಣಾ ಪ್ರಣಾಳಿಕೆ ಸರ್ಕಾರದ ನಿರ್ಧಾರಗಳ ಆಧಾರವಾಗಿಸಬೇಕೆಂದು ಮೋದಿ ಮುತುವರ್ಜಿ ವಹಿಸಿದರು. ಚುನಾವಣೆ ವೇಳೆ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದೂ ಅವರು ತಿಳಿಸಿದ್ದಾರೆ' ಎಂದಿದ್ದಾರೆ.
undefined
ಕೈಕೊಟ್ಟ ಎರಡು ಮೈತ್ರಿ ಪಕ್ಷಗಳು: ನರೇಂದ್ರ ಮೋದಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುವಾಗ ಎನ್‌ಡಿಎ ಮೈತ್ರಿ ಕೂಟದ ಇಬ್ಬರು ಅತಿ ಹಳೆಯ ದೋಸ್ತಿಗಳಾದ ಶಿವಸೇನೆ ಹಾಗೂ ಶಿರೋಮಣಿ ಅಕಾಲಿ ದಳ ಬೇರೆ ಹಾದಿ ಹಿಡಿದವು.
undefined
7 ಅಕ್ಟೋಬರ್ 2001ರಿಂದ ಬಿಡುವಿಲ್ಲದ ಸೇವೆ: ಮೋದಿ 2001ರ ಅಕ್ಟೋಬರ್ 7ರಂದು ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಕೂಡಲೇ ಭುಜ್‌ನಲ್ಲಿ ವಿನಾಶಕಾರಿ ಭೂಕಂಪ ಇಡೀ ರಾಜ್ಯವನ್ನು ನಡುಗಿಸಿತ್ತು. ಆದರೆ 'ವೈಬ್ರೆಂಟ್ ಗುಜರಾತ್'ನಂತಹ ಮೋದಿಯ ಕೆಲ ಯೋಜನೆಗಳು ರಾಜ್ಯವನ್ನು ಮತ್ತೆ ಎದ್ದು ನಿಲ್ಲಿಸಿತ್ತು.
undefined
ಇದಾದ ಬಳಿಕ ಗುಜರಾತ್ ವಿದ್ಯುತ್ ಉತ್ಪಾದನೆ ಸೇರಿ ಅನೇಕ ವಿಚಾರಗಳಲ್ಲಿ ಆತ್ಮನಿರ್ಭರತೆ ಸಾಧಿಸಿತು. ಈ ಮೂಲಕ ಅಭಿವೃದ್ಧಿಯ ಗುಜರಾತ್ ಮಾಡೆಲ್ ಎಲ್ಲೆಡೆ ಸದ್ದು ಮಾಡಲಾರಮಭಿಸಿತು. ಗುಜರಾತ್‌ ಮಾಡಲ್ ಅದು ಯಾವ ಪರಿ ಮೋದಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಶೈನ್ ಮಾಡಿತೆಂದರೆ ಬಿಜೆಪಿ 2013ರಲ್ಲೇ ನರೇಂದ್ರ ಮೋದಿಯನ್ನು ಮುಂಬರುವ ಲೋಕಸಭಾ ಚುನಾವಣೆಯ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು.
undefined
click me!