ಮೋದಿ ತಾಯಿಗೆ 100ನೇ ಹುಟ್ಟುಹಬ್ಬ, ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಪಿಎಂ!

Published : Jun 18, 2022, 09:38 AM IST

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಲು ಬಂದಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಅಹಮದಾಬಾದ್ ಭೇಟಿಯ ಸಮಯದಲ್ಲಿ ಸಾಮಾನ್ಯವಾಗಿ ತಮ್ಮ ತಾಯಿಯನ್ನು ಭೇಟಿಯಾಗುತ್ತಾರೆ, ಆದರೆ ಇಂದಿನ ಸಂದರ್ಭವು ವಿಶೇಷವಾಗಿದೆ. ಪ್ರಧಾನಿ ಮೋದಿಯವರ ತಾಯಿ ಹೀರಾ ಬೆನ್ ಇಂದು 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಗಾಂಧಿನಗರದ ನಿವಾಸದಲ್ಲಿ ಭೇಟಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಪ್ರಧಾನಿ ಮೋದಿ ಕೂಡ ತಮ್ಮ ತಾಯಿಯ ಪಾದದ ಬಳಿ ಕುಳಿತು ಮಾತನಾಡುತ್ತಿದ್ದರು. ಹೀರಾಬೆನ್ ಅವರ ನೂರನೇ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದು, ಗಾಂಧಿನಗರದ ರೈಸನ್ ಪೆಟ್ರೋಲ್ ಪಂಪ್‌ನಿಂದ 60 ಮೀಟರ್ ರಸ್ತೆಯನ್ನು 'ಪೂಜ್ಯ ಹಿರಾ ಮಾರ್ಗ' ಎಂದು ಮರುನಾಮಕರಣ ಮಾಡಲಾಗುತ್ತದೆ.

PREV
14
ಮೋದಿ ತಾಯಿಗೆ 100ನೇ ಹುಟ್ಟುಹಬ್ಬ, ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಪಿಎಂ!
ತಾಯಿಯ 100ನೇ ಹುಟ್ಟುಹಬ್ಬದ ಶುಭ ಕೋರಲು ಮನೆ ತಲುಪಿದ ಪಿಎಂ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಇಂದು ಬದುಕಿನ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಬಂದಿದ್ದಾರೆ.

24
'ತಾಯಿಯ ಪಾದದಲ್ಲಿ ಸ್ವರ್ಗವಿದೆ...'

ಪ್ರಧಾನಿ ಮೋದಿ ಅವರು ತಮ್ಮ ತಾಯಿಯೊಂದಿಗೆ ಸ್ವಲ್ಪ ಸಮಯ ಕಳೆದರು. ಅವರ ಯೋಗಕ್ಷೇಮ ವಿಚಾರಿಸಿದರು. ಮೋದಿ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳದೆ,  ತಾಯಿಯ ಪಾದದ ಬಳಿ ನೆಲದ ಮೇಲೆ ಕುಳಿತಿದ್ದರು.

34
ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದರು

ಹೀರಾಬೆನ್ ಅವರ 100 ನೇ ಹುಟ್ಟುಹಬ್ಬದಂದು, ಪ್ರಧಾನಿ ಮೋದಿ ಅವರು ತಾಯಿಯ ಪಾದಗಳನ್ನು ಸ್ಪರ್ಶಿಸುವ ಮೂಲಕ ಆಶೀರ್ವಾದ ಪಡೆದರು.

44
ಅಮ್ಮನ ಕಾಲು ತೊಳೆದ ಪ್ರಧಾನಿ

ತಮ್ಮ ಹುಟ್ಟುಹಬ್ಬದ ದಿನವೂ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ಭೇಟಿಯಾಗಲು ಗಾಂಧಿನಗರಕ್ಕೆ ಬರುತ್ತಿದ್ದಾರೆ. ಇಂದು ಪಾದ ತೊಳೆದ ಬಳಿಕ ಅವರ ಬಳಿ ಆಶೀರ್ವಾದ ಪಡೆದರು.

Read more Photos on
click me!

Recommended Stories