ರಾಹುಲ್ ಗಾಂಧಿಗೆ ಸಮನ್ಸ್ ಹೀಗಿದೆ ಪ್ರತಿಭಟನೆಯ ತೀವ್ರತೆ, ಪೊಲೀಸರ ಜೊತೆ ಹೆಣ್ಮಕ್ಕಳ ಜಟಾಪಟಿ!
First Published | Jun 15, 2022, 1:15 PM ISTನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜೂನ್ 15ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿದ್ದರು. ರಾಹುಲ್ ಗಾಂಧಿ ಅವರ ಉತ್ತರದಿಂದ ಅಧಿಕಾರಿಗಳು ತೃಪ್ತರಾಗದ ಕಾರಣ ಅವರನ್ನು ವಿಚಾರಣೆಗಾಗಿ ಇಡಿ ಕಚೇರಿಗೆ ಕರೆಸಲಾಯಿತು ಇದು ಮೂರನೇ ದಿನವಾಗಿದೆ. ಮೊದಲು ಜೂನ್ 13 ರಂದು 10 ಗಂಟೆಗಳ ಕಾಲ ಮತ್ತು ಜೂನ್ 14 ರಂದು ಸುಮಾರು 11 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ ಮುಂದುವರೆಯಿತು. ಬುಧವಾರ ಮಹಿಳಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ದೆಹಲಿಯ ಪಕ್ಷದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, "ನಾವು ಭಯೋತ್ಪಾದಕರೇ? ನಮಗೇಕೆ ಭಯ? ಅವರು ಕಾಂಗ್ರೆಸ್ ಮುಖಂಡ-ಕಾರ್ಯಕರ್ತರ ಮೇಲೆ ಪೊಲೀಸ್ ಬಲಪ್ರಯೋಗ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.