ಕೇರಳ ದುರಂತ: ಅತ್ಯಂತ ಅನುಭವಿ, ರಾಷ್ಟ್ರಪತಿ ಪದಕ ಪಡೆದಿದ್ದ ಪೈಲಟ್‌ ದೀಪಕ್ ಸಾಠೆ!

Published : Aug 08, 2020, 01:40 PM ISTUpdated : Aug 08, 2020, 02:14 PM IST

ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕಹಿ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು, ಶುಕ್ರವಾರ ರಾತ್ರಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ವಿಮಾನ ದುರಂತ. ಈ ದುರಂತದಲ್ಲಿ ಪೈಲಟ್ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, 125 ಮಂದಿ ಗಾಯಗೊಂಡಿದ್ದಾರೆ. ಕೊರೋನಾತಂಕ ಹಾಗೂ ಮಳೆಯಬ್ಬರದ ನಡುವೆ ಕೇರಳದ ಈ ವಿಮಾನ ಅಪಘಾತ ಗಾಯದ ಮೇಲೆ ಬರೆ ಎಎದಂತಿದೆ. ಆದರೀಗ ವಿಮಾನ ನಡೆಸುತ್ತಿದ್ದ ಪೈಲಟ್ ಸಂಬಂಧ ಕೆಲ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿವೆ. ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ದೀಪಕ್ ಸಾಠೆಯವರು ರಾಷ್ಟ್ರಪತಿ ಪದಕ ಪುರಸ್ಕೃತರೂ ಹೌದು. ಇಲ್ಲಿದೆ ಸಾಠೆ ಸಂಬಂಧಿತ ಕೆಲ ಮಾಇತಿ

PREV
17
ಕೇರಳ ದುರಂತ: ಅತ್ಯಂತ ಅನುಭವಿ, ರಾಷ್ಟ್ರಪತಿ ಪದಕ ಪಡೆದಿದ್ದ ಪೈಲಟ್‌ ದೀಪಕ್ ಸಾಠೆ!

ಅಪಘಾತಕ್ಕೊಳಗಾದ ವಿಮಾನವನ್ನು ಚಲಾಯಿಸುತ್ತಿದ್ದುದ್ದು ಭಾರತೀಯ ವಾಯುಪಡೆಯ ನಿವೃತ್ತ ಪೈಲಟ್‌ ದೀಪಕ್‌ ವಸಂತ್‌ ಸಾಠೆ

27

1981ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಸಾಠೆ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2003ರಲ್ಲಿ ಸ್ವಾ$್ಕಡ್ರನ್‌ ಲೀಡರ್‌ ಆಗಿ ಸೇನೆಯಿಂದ ನಿವೃತ್ತಿ ಹೊಂದಿದ್ದರು.

37

ಬಳಿಕ ವಿಮಾನದ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಅನುಭವಿ ಪೈಲಟ್‌ ಆಗಿದ್ದ ಸಾಠೆ, 20 ಸಾವಿರ ಗಂಟೆ ಹಾರಾಟದ ಅನುಭವ ಹೊಂದಿದ್ದರು

47

ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ಸಾಠೆ 58ನೇ ರಾರ‍ಯಂಕ್‌ ಪಡೆದಿದ್ದರು. ಇವರು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಪೈಲಟ್‌ ತರಬೇತಿಯನ್ನೂ ನೀಡಿದ್ದರು.

57

ಬೋಯಿಂಗ್‌ ವಿಮಾನ ಹಾರಾಟ ಮಾಡುವುದರಲ್ಲಿ ದೀಪಕ್‌ ಪರಿಣತಿ ಹೊಂದಿದ್ದರು. ಅಲ್ಲದೇ 58 ಎನ್‌ಡಿಎ ರಾಷ್ಟ್ರಪತಿ ಚಿನ್ನದ ಪದಕ ಪಡೆದಿದ್ದರು. ಅಲ್ಲದೇ ಹೈದರಾಬಾದ್‌ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಸ್ವಾರ್ಡ್‌ ಗೌರವ ಕೂಡ ಪಡೆದಿದ್ದರು.

67

ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದ ಭಾರತೀಯರನ್ನು ಕರೆತರುವ ವಂದೇಭಾರತ್‌ ಯೋಜನೆಯಡಿ ಈ ವಿಮಾನ ದುಬೈನಿಂದ ಕೇರಳಕ್ಕೆ ಬರುತ್ತಿತ್ತು.

77

ವಿಮಾನ ಇಳಿಯು ವೇಳೆಯಲ್ಲಿ 2000 ಅಡಿ ಗೋಚರತೆ ಇತ್ತು. 500 ಅಡಿಗಿಂತ ಹೆಚ್ಚು ಗೋಚರತೆ ಇದ್ದರೆ ಸಾಕಾಗುತ್ತದೆ. ಹೀಗಾಗಿ ನೀರಿನಲ್ಲಿ ಸ್ಕಿಡ್‌ ಆಗಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

click me!

Recommended Stories