ಶಾಕಿಂಗ್: ಕೊರೋನಾದಿಂದ ಗುಣಮುಖರಾದವರಲ್ಲಿ ಕಾಣುತ್ತಿದೆ ಈ ಹೊಸ ಸಮಸ್ಯೆ!

First Published Aug 6, 2020, 6:17 PM IST

ಕೊರೋನಾ ಮಹಾಮಾರಿ ನಿಯಂತ್ರಿಸಲು ಔಷಧಗಳ ಹುಡುಕಾಟ ಆರಂಭವಾಗಿದೆ. ಹೀಗಿರುವಾಗಲೇ ವುಹಾನ್‌ನಿಂದ ಶಾಕಿಂಗ್ ವರದಿಯೊಂದು ಬಯಲಾಗಿದೆ. ಇಲ್ಲಿ ಯಾರೆಲ್ಲಾ ಕೊರೋನಾದಿಂದ ಗುಣಮುಖರಾಗಿದ್ದಾರೋ ಅವರೆಲ್ಲರ ಶ್ವಾಸಕೋಶಕ್ಕೆ ಭಾರೀ ಹಾನಿಯುಂಟಾಗಿದೆ. ಇಷ್ಟೇ ಅಲ್ಲ ಗುಣಮುಖರಾದ ಶೇ. 5ರಷ್ಟು ಮಂದಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವುಹಾನ್ ಯೂನಿವರ್ಸಿಟಿಯ ವೈದದ್ಯರು ಅಧ್ಯಯನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ನೂರು ರೋಗಿಗಳ ಮೇಲೆ ನಡೆದ ಸಮೀಕ್ಷೆ: ಆಸ್ಪತ್ರೆಗಳ ICU ನಿರ್ದೇಶಕ ಪೆಂಗ್ ಝಿಯೋಂಗ್ ಹಾಗೂ ಅವರ ತಂಡ ಈ ಸರ್ವೆ ನಡೆಸಿದೆ. ವುಹಾನ್‌ ವಿವಿಯ ಝಾಂಗ್‌ನೈನ್ ಆಸ್ಪತ್ರೆಯಲ್ಲಿ ಅವರ ತಂಡ ಕಾರ್ಯ ನಿರ್ವಹಿಸುತ್ತಿದೆ.
undefined
ಅವರು ವುಹಾನ್‌ನಲ್ಲಿ ಕೊರೋನಾದಿಂದ ಗುಣಮುಖರಾದ ನೂರು ರೋಗಿಗಳ ಮೇಲೆ ಸರ್ವೆ ನಡೆಸಿದ್ದಾರೆ.
undefined
ಏಪ್ರಿಲ್‌ನಿಂದ ನಿಗಾ: ವೈದ್ಯರ ತಂಡ ಕೊರೋನಾದಿಂದ ಗುಣಮುಖರಾದವರ ಮೇಲೆ ಏಪ್ರಿಲ್‌ನಿಂದ ನಿಗಾ ಇರಿಸಿದ್ದಾರೆ. ಕಾಲ ಕಾಲಕ್ಕೆ ಅವರ ಮನೆಗೆ ತೆರಳಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ.
undefined
ಜುಲೈನಲ್ಲಿ ಮೊದಲ ಹಂತ ಪೂರ್ಣ: ಈ ಸರ್ವೆ ಒಂದು ವರ್ಷ ನಡೆಸಲಾಗುತ್ತದೆ. ಮೊದಲ ಹಂತ ಜುಲೈನಲ್ಲಿ ಪೂರ್ಣಗೊಂಡಿದೆ. ಈ ಸರ್ವೆಯಲ್ಲಿ ತರೋಗಿಗಳ ಸರಾಸರಿ ವಯಸ್ಸು 5 ಆಗೊದೆ.
undefined
ಮೊದಲ ಹಂತದ ಫಲಿತಾಂಶದನ್ವಯ ರೋಗಿಗಳಲ್ಲಿ ಶೇ. 90 ರಷ್ಟು ಮಂದಿಯ ಶ್ವಾಸಕೋಶ ಹಾನಿಗೊಳಗಾಗಿದೆ.
undefined
ಅಂದರೆ ಶೇ. 90 ರಷ್ಟು ಮಂದಿಯ ಶ್ವಾಸಕೋಶದ ವೆಂಟಿಲೇಷನ್ ಹಾಗೂ ಗ್ಯಾಸ್ ಎಕ್ಸ್‌ಚೇಂಜ್ ಫಂಕ್ಷನ್ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಇವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ,
undefined
ರೋಗಿಗಳಿಗೆ ನಡೆದಾಡಲೂ ಆಗುತ್ತಿಲ್ಲ: ತಂಡ ರೋಗಿಗಳು ನಡೆದಾಡುವ ಕುರಿತಾಗಿಯೂ ಅಧ್ಯಯನ ನಡೆಸಿದೆ. ಅವರು ಆರು ನಿಮಿಷಕ್ಕೆ ಕೇವಲ 400 ಮೀಟರ್ ನಡೆಯಲು ಸಮರ್ಥರಾಗಿದ್ದಾರೆ. ಆದರೆ ಓರ್ವ ಆರೋಗ್ಯವಂತ ಮನುಷ್ಯ ಕನಿಷ್ಟ 500 ಮೀಟರ್ ನಡೆಯಬಲ್ಲ.
undefined
ಮೂರು ತಿಂಗಳು ಆಕ್ಸಿಜನ್ ಸಿಲಿಂಡರ್ ಮೇಲಿದ್ದರು: ಗುಣಮುಖರಾದ ಕೆಲ ರೋಗಿಗಳು ಮೂರು ತಿಂಗಳ ಬಳಿಕವೂ ಆಕ್ಸಿಜನ್ ಸಿಲಿಂಡರ್ ಅವಲಂಭಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ 100ರಲ್ಲಿ 10ರೋಗಿಗಳ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕವೂ ಮುಗಿದಿದೆ.
undefined
5% ರೋಗಿಗಳು ಕೊರೋನಾ ನ್ಯೂಕ್ಲಿಕ್ ಆಸಿಡ್ ಟೆಸ್ಟ್‌ನಲ್ಲಿ ನೆಗೆಟಿವ್‌ ಆಗಿದ್ದಾರೆ. ಆದರೆ ಇಮ್ಯೂನೋಗ್ಲೋಬ್ಯೂಲಿನ್ ಎಂ ಟೆಸ್ಟ್‌ನಲ್ಲಿ ಪಾಸಿಟವ್ ಆಗಿದ್ದಾರೆ. ಅಂದರೆ ಇವರಿಗೆ ಮತ್ತೆ ಕ್ವಾರಂಟೈನ್ ಮಾಡಬಹುದು.
undefined
click me!