ರಾಮ ಮಂದಿರದ ಲೇಟೆಸ್ಟ್ ಫೋಟೋ: ಒಳಗಿಂದ ಹೀಗಿರುತ್ತೆ ಭವ್ಯ ದೇಗುಲ!

First Published | Aug 4, 2020, 4:19 PM IST

ಭೂಮಿ ಪೂಜೆ ಸಿದ್ಧತೆ ನಡುವೆ ರಾಮ ಮಂದಿರ ಮಾಡೆಲ್‌ ಫೋಟೋಗಳು ಕೂಡಾ ಬಹಿರಂಗಗೊಂಡಿವವೆ. ಬುಧವಾರ ಪ್ರಧಾನಿ ನರೇಂದ್ರ ಮೋದಿರಾಮ ಮಂದಿರದ ಭೂಮಿ ಪೂಜೆ ನಡೆಸಲಿದ್ದಾರೆ. ಇದಾದ ರಾಮ ಮಂದಿರದ ನಿರ್ಮಾಣ ಕಾರ್ಯ ಶೀಘ್ರವಾಗಿ ನಡೆಯಲಿದೆ. ನರೇಂದ್ರ ಮೋದಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಯೋಧ್ಯೆಗೆ ತಲುಪಲಿದ್ದಾರೆ ಹಾಗೂ ಸುಮಾರು ಮೂರು ತಾಸು ಅಲ್ಲಿ ಉಳಿಯಲಿದ್ದಾರೆ. ಅಯೋಧ್ಯೆಗೆ ಅತಿಥಿಗಳ ಆಗಮನವೂ ಆರಂಭವಾಗಿದ್ದು, ಇಂದು ಸಂಜೆಯೊಳಗೆ ಅಯೋಧ್ಯೆ ಗಡಿಯನ್ನು ಸೀಲ್ ಮಾಡಲಾಗುತ್ತದೆ. ಇದಾದ ಬಳಿಕ ಶ್ರೀರಾಮ ಊರಿಗೆ ಹೋಗಲು ಸಾಧ್ಯವಿಲ್ಲ.

ರಾಜಸ್ಥಾನದ ರಾಜ್ಯಪಾಲ ಕಲರಾಜ್ ಮಿಶ್ರಾ ಜನರು ರಾಮ ಮಂದಿರದ ಸಾಂಸ್ಕೃತಿಕ ಐಕ್ಯತೆ, ರಾಷಷ್ಟ್ರೀಯ ಏಕತೆ ಹಾಗೂ ಅಖಂಡತೆಯನ್ನು ವಸುದೈವ ಕುಟುಂಬಕಂನಂತೆ ಅನುಭವಿಸಲಿದ್ದಾರೆ.
ರಾಮ ಮಂದಿರದ ಭವ್ಯತೆಯನ್ನು ಕಂಡು ಟ್ವಿಟರ್‌ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಒಬ್ಬ ಬಳಕೆದಾರನಂತೂ ಈ ಫೋಟೋಗಳನ್ನು ನೋಡಿ ನಮ್ಮ ಜೀವನ ಧನ್ಯವಾಯ್ತು ಎಂದಿದ್ದಾರೆ.
Tap to resize

ರಾಜ್ಯಪಾಲ ಕಲರಾಜ್ ಮಿಶ್ರಾ ಮಾತನಾಡುತ್ತಾ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವ ನಮ್ಮ ಕನಸು ಹಾಗೂ ಬದ್ಧತೆ ಪೂರ್ಣಗೊಳ್ಳುತ್ತಿದೆ. ಇದಕ್ಕಾಗಿ ನಾನು ಈಗಿನ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಧನ್ಯವಾದ ಹಾಗೂ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕಾಗಿ ಎಲ್ಲಾ ರೀತಿಯ ತಯಾರಿಗಳು ಪೂರ್ಣಗೊಂಡಿದ್ದು, ಮೋದಿ ಎಲ್ಲಕ್ಕಿಂತ ಮೊದಲು ಹನುಮಾನ್ ಗಡಿಗೆ ತೆರಳಿ ವಿಶೇಷ ಪೂಜೆ ಮಾಡಲಿದ್ದಾರೆ. ಮುಕುಟ ಹಾಗೂ ಗಧೆಯಿಂದ ಇಲ್ಲಿ ಮೋದಿಗೆ ಸ್ವಾಗತ ನೀಡಲಿದ್ದಾರೆ.
ಶಿವಸೇನೆಯ ಕಾರ್ಯಕರ್ತರು ಬಾಳ್ ಠಾಕ್ರೆಯ ಸಮಾಧಿಯಿಂದ ಮಣ್ಣು ತೆಗೆದುಕೊಂಡು ಅಯೋಧ್ಯೆಗೆ ತೆರಳಿದ್ದಾರೆ.
ನರೇಂದ್ರ ಮೋದಿ ಅಯೋಧ್ಯೆಗೆ ಕ್ರಾಸಿಂಗ್ ಗೇಟ್ ಮೂರರ ಮೂಲಕ ಪಗ್ರವೇಶಿಸಬಹುದು. ಈ ಪ್ರದೇಶದಲ್ಲಿ ಭದ್ರತೆ ಭಾರೀ ಹೆಚ್ಚಿಸಲಾಗಿದೆ.
ನಾನು ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಗೆ ಹೊರಡುತ್ತಿದ್ದೇನೆ. ನನ್ನ ಕಣ್ಣೆದುರಿಗೆ ಭವ್ಯ ರಾಮ ಮಂದಿರದ ಶಿಲಾನ್ಯಾಸ ನಡಡೆಯಲಿದೆ. ಈ ಕಾರ್ಯಕ್ರಮದಲ್ಲಿಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀರಾಮ ಮಂದಿರ ಹೀಗಿರಲಿದೆ.
ಶ್ರೀರಾಮ ಮಂದಿರದ ಹಿಂಬದಿ ನೋಟ

Latest Videos

click me!