ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾದ ಮೇಲೆ ಅಯೋಧ್ಯೆಗೆ ಪೇಜಾವರ ಶ್ರೀಗಳು ಪ್ರಥಮ ಭೇಟಿ ನೀಡಿದ್ದಾರೆ.
undefined
ಪ್ರಸ್ತುತ ಅಲ್ಲಿ ರಾಮಮಂದಿರದ ತಳಹದಿ ತುಂಬಿಸುವ ಕಾಮಗಾರಿ ನಡೆಯುತ್ತಿದೆ.
undefined
ಆರಂಭದಲ್ಲಿ ಶ್ರೀಗಳು ಶ್ರೀರಾಮ ಲಲ್ಲಾನ ತಾತ್ಕಾಲಿಕ ಗುಡಿಗೆ ತೆರಳಿದ ದರ್ಶನ ಪಡೆದರು.
undefined
ವರಿಗೆ ಪುಷ್ಪಾರ್ಚನೆ ಮತ್ತು ಚಾಮರ ಸೇವೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮಂದಿರ ಬುನಾದಿ ನಿರ್ಮಾಣ ಸ್ಥಳಕ್ಕೆ ತೆರಳಿ, ಅಲ್ಲಿ ನಡೆಯುತ್ತಿರುವ ಕಾಮಗಾರಿ ಪರಿವೀಕ್ಷಿಸಿದರು.
undefined
ಕಾಮಗಾರಿಯ ಇಂಜಿನಿಯರುಗಳು ಈವರೆಗೆ ನಡೆದ ಕಾಮಗಾರಿಯ ಪ್ರಗತಿಯ ಸಂಪೂರ್ಣ ಮಾಹಿತಿಯನ್ನು ನೀಡಿದರು.
undefined
ಈ ವೇಳೆ ಟ್ರಸ್ಟ್‌ನ ಇನ್ನೊಬ್ಬ ವಿಶ್ವಸ್ಥರಾದ ಡಾ.ಅನಿಲ್ ಮಿಶ್ರಾ, ಮಂದಿರ ನಿರ್ಮಾಣ ಉಸ್ತುವಾರಿ ತಂಡದ ಗೋಪಾಲ ನಾಗರಕಟ್ಟೆ, ಮಂದಿರ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್ ಟಿ ಮತ್ತು ಮೇಲುಸ್ತುವಾರಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿಯ ಅಧಿಕಾರಿಗಳು, ಪೇಜಾವರ ಶ್ರೀಗಳ ಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ ಮತ್ತು ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
undefined
ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಚಿ ಸ್ವಾಮೀ ಶ್ರೀ ಗೋವಿಂದ ದೇವಗಿರಿ, ವಿಶ್ವಸ್ಥರಾದ ಡಾ.ಅನಿಲ್ ಮಿಶ್ರಾ, ಗೋಪಾಲ ನಾಗರಕಟ್ಟೆ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿ ಮಂದಿರ ನಿರ್ಮಾಣದ ಪ್ರಗತಿಯ ಬಗ್ಗೆ ಚರ್ಚಿಸಿದರು.
undefined
ಸುಪ್ರೀಂ ಕೋರ್ಟ್ ಆದೇಶದ ನಂತರದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ.
undefined
ಕೆಲ ದಿನಗಳ ಹಿಂದೆ ರಾಮಮಂದಿರ ತಳಪಾಯದ ಕೆಲಸದ ವಿವರವನ್ನು ಟ್ರಸ್ಟ್ ನೀಡಿತ್ತು.
undefined