ರಸ್ತೆಬದಿ ಹಣ್ಣು ಮಾರುತ್ತಿದ್ದಾಕೆಯ ಅದೃಷ್ಟ: 12 ಮಾವು ಮಾರಿ 1.20 ಲಕ್ಷ ಸಂಪಾದಿಸಿದ ಬಾಲೆ!

First Published | Jun 30, 2021, 1:20 PM IST

ಕೊರೋನಾ ಎರಡನೇ ಅಲೆಯಲ್ಲಿ ಹೇರಲಾದ ಲಾಕ್‌ಡೌನ್‌ನಿಂದ ಅನೇಕರ ಜೀವನ ಹಾಳಾಗಿದೆ. ಹೀಗಿರುವಾಗ ಝಾರ್ಖಂಡ್‌ನ ತುಳಸಿ ಹೆಸರಿನ 12 ವರ್ಷದ ಬಾಲಕಿಯೂ ಹೀಗೇ ಸಂಕಷ್ಟಕ್ಕೊಳಗಾಗಿದ್ದಳು. ಈಕೆ ತನ್ನ ತಂದೆಗೆ ಯಾವುದೇ ಕೆಲಸ ಸಿಗದ ಕಾರಣಕ್ಕೆ ಶಿಕ್ಷಣ ಬಿಡುವಂತಾಗಿದೆ. ಆನ್‌ಲೈನ್ ಕ್ಲಾಸ್‌ಗೆ ಸ್ಮಾರ್ಟ್‌ಫೋನ್‌ ಆಗತ್ಯ, ಆದರೆ ಈಕೆಯ ಹೆತ್ತವರ ಆರ್ಥಿಕ ಪರಿಸ್ಥಿತಿ ಅದೆಷ್ಟು ಕೆಟ್ಟಿತ್ತೆಂದರೆ ಮೊಬೈಲ್ ಖರೀದಿಸಲು ಸಾಧ್ಯವಿರಲಿಲ್ಲ. ಆದರೆ ಈ ಮಗು ಧೈರ್ಯ ಕಳೆದುಕೊಳ್ಳಲಿಲ್ಲ. ರಸ್ತೆ ಬದಿ ಬುಟ್ಟಿ ಇಟ್ಟು ಮಾವಿನ ಹಣ್ಣು ಮಾರಲಾರಂಭಿಸಿದ್ದಾಳೆ. ಆದರೆ ಹೀಗಿರುವಾಗಲೇ ನಡೆದ ಘಟನೆಯೊಂದು ಈ ಬಾಲಕಿಯ ಅದೃಷ್ಟವನ್ನೇ ಬದಲಾಯಿಸಿದೆ. ನೋಡ ನೋಡುತ್ತಿದ್ದಂತೆಯೇ ಈಕೆ ಮಾರುತ್ತಿದ್ದ ಹಣ್ಣುಗಳು 1.20 ಲಕ್ಷ ರೂ. ಮೊತ್ತಕ್ಕೆ ಮಾರಾಟವಾಗಿವೆ.
 

ಈ ಪುಟ್ಟ ಹುಡುಗಿ ತುಳಿಸಿಗೆ ಶಿಕ್ಷಣ ಮುಂದುವರೆಸುವ ಇಚ್ಛೆ ಇತ್ತು. ಆದರೆ ಸ್ಮಾರ್ಟ್‌ಫೋನ್ ಇಲ್ಲದ ಕಾರಣ ಶಿಕ್ಷಣ ಹೇಗೆ ಮುಂದುವರೆಸುವುದು ಎಂಬ ಸವಾಲು ಆಕೆ ಎದುರಿತ್ತು. ತಂದೆ ಶ್ರೀಮನ್ ಕುಮಾರ್ ನೌಕರಿ ಕೊರೋನಾದಿಂದ ಕಳೆದುಕೊಂಡಿದ್ದರು. ಆದರೆ ಈ ಬಾಲಕಿ ಎದೆಗುಂದರೆ ತನಗೆ ಅತ್ಯವಿರುವ ಹಣ ಹೊಂದಿಸಲು ಕೆಲಸ ಆರಮಭಿಸಿದ್ದಾಳೆ. ಆಕೆ ಪ್ರತಿದಿನ ಮಾವಿನ ಹಣ್ಣುಗಳನ್ನು ರಸ್ತೆಬದಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಣ್ಣು ಮಾರುವ ಕೆಲಸ ಯಾಕೆ ಮಾಡುತ್ತದ್ದೀ? ಎಂದು ಯಾರಾದರೂ ಪ್ರಶ್ನಿಸಿದರೆ? ನಾನು ಹಣ ಸಂಪಾದಿಸಿ ಶಿಕ್ಷಣ ಮುಂದುರೆಸಲು ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಉತ್ತರಿಸುತ್ತಿದ್ದಳು. ಹೀಗಿರುವಾಗ ಶಿಕ್ಷಣದ ಬಗ್ಗೆ ಆಕೆಗಿದ್ದ ಆಸಕ್ತಿ ಕಂಡ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಸೋಶಿಯಲ್ ಮಿಡಿಯಾದಲ್ಲಿ ತುಳಸಿಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಆಕೆಯ ಆಸಕ್ತಿ ಕಂಡ ಮುಂಬೈನ ಓರ್ವ ಉದ್ಯಮಿ ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮಗುವಿನ ಹಣ್ಣಿನ ಬುಟ್ಟಿಯಲ್ಲಿದ್ದ 12 ಮಾವುಗಳನ್ನು 1.20 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ. ಅಂದರೆ ಒಂದು ಮಾವಿನ ಹಣ್ಣನ್ನು ಹತ್ತು ಸಾವಿರ ರೂಪಾಯಿಗೆ ಖರೀದಿಸಿದ್ದಾರೆ.
Tap to resize

ಉದ್ಯಮಿ ಅಮೇಯ ಹೇತೆ ಓರ್ವ ವ್ಯಾಪಾರಿ ಹಾಗೂ ವ್ಯಾಲುಯೇಬಲ್ ಎಡುಟೈನರ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಕೂಡಾ ಹೌದು. ಇನ್ನು ಈ ಬಗ್ಗೆ ಮಾತನಾಡಿದ ಅಮೇಯ ಆ ಮಾವಿನ ಹಣ್ಣುಗಳು ಅಷ್ಟೊಂದು ವಿಶೇಷವಾಗಿರಲಿಲ್ಲ. ಆದರೆ ತುಳಸಿಗೆ ಶಿಕ್ಷಣದೆಡೆ ಇದ್ದ ಆಸಕ್ತಿ ಕಂಡು ತಾಣು ಈ ಮಾವಿನ ಹಣ್ಣುಗಳನ್ನು ಖರೀದಿಸಿದೆ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ತುಳಸಿ ಮುಂಬೈನಿಂದ ಒಬ್ಬ ಅಂಕಲ್ ಕರೆ ಮಾಡಿ ನಿನಗೆ ಶಿಕ್ಷಣ ಮುಂದುವರೆಸಲು ಆಸೆ ಇದೆಯಾ ಎಂದು ಕೇಳಿದ್ದರು. ನಾನು ಹೌದು ಎಂದಿದ್ದೆ, ಇದಾದ ಬಳಿಕ ಅವರು ನನ್ನ ಖಾತೆಗೆ ಇಷ್ಟು ದೊಡ್ಡ ಮೊತ್ತ ಹಾಕಿದ್ದಾರೆ ಎಂದಿದ್ದಾರೆ.
ಇನ್ನು ಈ ಹಣದಲ್ಲಿ ತುಳಸಿ 13 ಸಾವಿರದ ಫೋನ್ ಖರೀದಿಸಿದ್ದಾಳೆ. ಇಷ್ಟೇ ಅಲ್ಲದೇ ಇಡೀ ವರ್ಷಕ್ಕೆ ಡೇಟಾ ರೀಚಾರ್ಜ್ ಕೂಡಾ ಮಾಡಿಸಿಕೊಂಡಿದ್ದಾಳೆ. ಇನ್ನು ತಾನು ಗಮನವಿಟ್ಟು ಶಿಕ್ಷಣ ಮುಂದುವರೆಸಬಹುದು ಎಂದಿರುವ ತುಳಸಿ ತನಗೆ ಸಹಾಯ ಮಾಡಿದ ಅಮೇಯರಿಗೆ ಧನ್ಯವಾದ ತಿಳಿಸಿದ್ದಾರೆ. ಉಳಿದ ಹಣದಲ್ಲಿ 80 ಸಾವಿರ ರೂಪಾಯಿ ಮೊತ್ತವನ್ನು ತುಳಸಿ ಹೆಸರಿನಲ್ಲಿ ಫಿಕ್ಸ್ಡ್‌ ಡೆಪಾಸಿಟ್ ಮಾಡಲಾಗಿದೆ. ಇದರಿಂದ ಆಕೆಯ ಮುಂದಿನ ಶಿಕ್ಷಣಕ್ಕೆ ಸಹಾಯವಾಗಲಿದೆ.
ಇನ್ನು ಉದ್ಯಮಿಗೆ ಧನ್ಯವಾದ ಹೆಳಿರುವ ತುಳಸಿ ತಾಯಿ, ಅವರಿಂದ ನನ್ನ ಮಗಳ ಜೀವನ ಹಸನಾಯ್ತು. ಕೊರೋನಾ ಕಾಲದಲ್ಲಿ ಅವರು ದೇವದೂತನಂತೆ ಬಂದಿದ್ದಾರೆ. ಇನ್ಮುಂದೆ ಆಕೆ ಹಣ್ಣು ಮಾರಾಟ ಮಾಡಬೇಕೆಂದಿಲ್ಲ. ತಂದೆಯೂ ಇದೇ ಮಾತುಗಳನ್ನು ಹೇಳಿದ್ದಾರೆ.
ಶಾಲೆ ಬಂದ್ ಆದ ಕಾರಣ ಶಿಕ್ಷಣಕ್ಕೆ ಬ್ರೇಕ್ ಬಿತ್ತು. ಆದರೀಗ ಮನೆಯಲ್ಲೇ ಇದ್ದು ಶಿಕ್ಷಣ ಮುಂದುವರೆಸಬಹುದು. ಸದ್ಯ ತುಳಸಿ ಬಹಳ ಖುಷಿಯಾಗಿದ್ದಾಳೆ.

Latest Videos

click me!