11AM ರಿಂದ 3PM ವರೆಗೆ ಭಾರತ್ ಬಂದ್; ಗಮನಿಸಬೇಕಾದ 10 ಅಂಶ ಇಲ್ಲಿವೆ!

First Published | Dec 7, 2020, 3:58 PM IST

ಕೃಷಿ ಕಾಯ್ದೆ ವಿರೋಧಿ ನಡೆಸುತ್ತಿರುವ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಜೊತೆಗಿನ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಪಟ್ಟು ಬಿಡದ ರೈತ ಸಂಘಟನೆಗಳು ನಾಳೆ(ಡಿ.08) ಶಾಂತಿಯುತ ಭಾರತ್ ಬಂದ್ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಇದೇ ವೇಳೆ ಭಾರತೀಯ ಕಿಸಾನ್ ಯುನಿಯನ್ 10 ಪ್ರಮುಖ ಅಂಶಗಳು ಒತ್ತಿ ಹೇಳಿದೆ.

ರೈತ ಸಂಘಟನೆಗಳ ಭಾರತ್ ಬಂದ್‌ಗೆ ಎಡಪಕ್ಷ, ವಿರೋಧ ಪಕ್ಷ, ಆಮ್ ಆದ್ಮಿ, ಲಾರಿ ಮಾಲೀಕರ ಸಂಘ ಸೇರಿದಂತೆ ದೇಶಾದ್ಯಂತ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಇದೀಗ ರೈತ ಸಂಘಟನೆಗಳು ಶಾಂತಿಯುತ ಬಂದ್‌ ಮಾಡುವುದಾಗಿ ಸ್ಪಷ್ಟಪಡಿಸಿದೆ.
ಭಾರತ್ ಬಂದ್‌ನಿಂದ ಸಮಾನ್ಯ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಹೀಗಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಶಾಂತಿಯುತ ಭಾರತ್ ಬಂದ್ ನಡೆಯಲಿದೆ ಎಂದು ಭಾರತೀ ಕಿಸಾನ್ ಯುನಿಯನ್ ಹೇಳಿದೆ.
Tap to resize

ಬಂದ್ ಆರಂಭಕ್ಕೂ ಮುನ್ನ ಜನರು ತಮ್ಮ ತಮ್ಮ ಕೆಲಸಗಳಿಗಾಗಿ ಉದ್ದೇಶಿತ ಸ್ಥಳ ತಲುಪಬಹುದು. ತುರ್ತು ಸೇವೆಗಳಿಗೆ ಯಾವುದೇ ಅಡ್ಡಿ ಇಲ್ಲ. ಮದುವೆ ಸಮಾರಂಭಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂದು ಭಾರತೀಯ ಕಿಸಾನ್ ಯುನಿಯನ್ ಹೇಳಿದೆ.
ರೈತ ಸಂಘಟನೆಗಳ ಸದಸ್ಯರು ದೇಶದ ರಾಷ್ಟ್ರೀಯ ಹೆದ್ದಾರಿ, ಟೋಲ್ ಪ್ಲಾಜಾ ಬಂದ್ ಮಾಡಿ ಪ್ರತಿಭಟನೆ ಆರಂಭಸಲಿದ್ದಾರೆ. ಇದು ಬೆಳಗ್ಗೆ 11 ರಿಂದ 3 ಗಂಟೆ ವರೆಗೆ ರಸ್ತೆಗಳು ಬಂದ್ ಆಗಲಿವೆ. ಕೆಲಸ ಮುಗಿಸಿ ಮನೆಗೆ ತೆರಳು ಸಾಮಾನ್ಯರಿಗೆ ಯಾವುದೇ ಸಮಸ್ಯೆ ಆಗದಂತೆ ಬಂದ್ ಆಯೋಜಿಸಲಾಗಿದೆ ಎಂದು ಕಿಸಾನ್ ಸಂಘಟನೆ ಹೇಳಿದೆ.
ಟ್ರಕ್, ಲಾರಿ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಬಹುತೇಕ ರಾಜ್ಯದಳಿಗೆ ಉತ್ಪನಗಳ ಸಾಗಾಣೆಯಲ್ಲಿ ವ್ಯತ್ಯಯವಾಗಲಿದೆ. ಆಯಾ ಜಿಲ್ಲೆಗಳಲ್ಲಿ ರೈತ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿಗೆ ಮೆಮೋರಾಡಂ ನೀಡಲಿದ್ದಾರೆ.
ಬ್ಯಾಂಕ್ ನೌಕರರ ಸಂಘ ಸೇರಿದಂತೆ ಹಲವು ಖಾಸಗಿ ಬ್ಯಾಂಕ್‌ಗಳು ರೈತರ ಪ್ರತಿಭಟನೆಗ ನೈತಿಕ ಬೆಂಬಲ ಸೂಚಿಸಿದೆ. ಕಪ್ಪು ಪಟ್ಟಿ ಧರಿಸಿ ಬ್ಯಾಂಕ್ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ. ಹೀಗಾಗಿ ಬ್ಯಾಂಕ್ ಸೇವೆ ಎಂದಿನಂತೆ ಲಭ್ಯವಾಗಲಿದೆ.
ಭಾರತ್ ಬಂದ್‌ನಿಂದ ಪಂಜಾಬ್ ಸಂಪೂರ್ಣ ಸ್ಥಬ್ಧವಾಗಲಿದೆ. ಕರ್ನಾಟಕದಲ್ಲಿ ಹಲವು ರೈತ ಸಂಘಟನೆ, ಕನ್ನಡದ ಪರ ಸಂಘಟನೆ ಸೇರಿದಂತೆ ಕೆಲ ಸಂಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದೆ.
ಪಶ್ಚಿಮ ಬಂಗಾಳ, ಮಹಾರಾಷ್ಟ ಸೇರಿದಂತೆ ಬಿಜಿಯೇತರ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಶಾಂತಿಯುತ ಪ್ರತಿಭಟನೆಗೆ ಕಿಸಾನ್ ಯುನಿಯನ್ ಒತ್ತು ನೀಡಿದೆ.
ಪ್ರಮುಖ ವಿರೋಧ ಪಕ್ಷಗಳು, ಎಡಪಕ್ಷಗಳು ಬಂದ್‌ಗೆ ಬೆಂಬಲಸೂಚಿಸಿದೆ. ಇಷ್ಟೇ ಅಲ್ಲ ನಗರಗಳಲ್ಲಿ ಜಾಥ ಕೈಗೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ಕೃಷಿ ಮಸೂದೆಯನ್ನು ಹಿಂಪೆಡಯಲು ಆಗ್ರಹಿಸಲಿದೆ.
ಏಷ್ಯಾದ ಅತೀ ದೊಡ್ಡ ತರಕಾರಿ ಹಾಗೂ ಹಣ್ಣು ಮಾರುಕಟ್ಟೆಯಾದ ದೆಹಲಿಯ ಅಝದ್‌ಪುರ ಮಂಡಿ ಬಂದ್ ಆಗಲಿದೆ. ಇದರಿಂದ ದೇಶಾದ್ಯಂತ ತರಕಾರಿ,ಹಣ್ಣುಗಳ ವಿತರಣೆಯಲ್ಲಿ ಸಮಸ್ಯೆ ಆಗಲಿದೆ.

Latest Videos

click me!