ಇಂದು ಒಂದು ಗಂಟೆ ಕರೆಂಟ್ ಇಲ್ಲ, ಮೊಬೈಲ್ ಇಲ್ಲ ಅಂದರೆ ಏನೋ ಕಳೆದುಕೊಂಡಿದ್ದೇವೆ, ಜೀವನವೇ ಹೋಯ್ತು ಎನ್ನುವ ರೀತಿಯಲ್ಲಿ ಕೆಲವರು ಗೋಳಿಡುತ್ತಾರೆ. ಸಣ್ಣ ಜಾಗದ್ಲಿ ಕಸ ಗುಡಿಸಿ, ನೆಲ ಒರೆಸಲು ಕೂಡ ಇಂದು ರೋಬೋಟ್‌ಗಳು ಬಂದಿವೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಕರೆಂಟ್, ಮೊಬೈಲ್, ಯಾವುದೇ ಮಶಿನ್ ಇಲ್ಲ.
ಶ್ರೀಕಾಕುಲಂ ಬಳಿ ಇರುವ ಕೂರ್ಮ ಗ್ರಾಮ ನಿಜಕ್ಕೂ ವಿಶಿಷ್ಟವಾಗಿದೆ. ಭಾರತದ ಪೂರ್ವ ದಿಕ್ಕಿನಲ್ಲಿರುವ ಬೆಟ್ಟಗಳ ಮಧ್ಯೆ ಬರಬೇಕು, ಈ ಊರಿಗೆ ಹೋಗಲು ಬಸ್ ಸಿಗೋದಿಲ್ಲ, ಆಟೋ ಸಿಗೋದಿಲ್ಲ. ಅಲ್ಲಿ ಓಡಾಡುವ ವಾಹನಗಳಲ್ಲಿ ಲಿಫ್ಟ್ ಕೇಳಿ ಹೋಗಬೇಕು. ಅಂದಹಾಗೆ ಈಗ ಆ ಭಾಗದಲ್ಲಿ ಡಾಂಬರು ರೋಡ್ ಮಾಡುತ್ತಿದ್ದಾರೆ.
26
ಕರೆಂಟ್, ಮೊಬೈಲ್ ಇಲ್ಲದ ಮನೆಗಳು!
ಈ ಊರಿನಲ್ಲಿ ಕರೆಂಟ್ ಇಲ್ಲ, ಮೊಬೈಲ್ ಕೂಡ ಇಲ್ಲ, ಅಷ್ಟೇ ಅಲ್ಲದೆ ಯಾವುದೇ ಮಶಿನ್‌ಗಳನ್ನು ಕೂಡ ಬಳಸಲಾಗೋದಿಲ್ಲ. ಅಷ್ಟೇ ಅಲ್ಲದೆ ಅಲ್ಲಿರುವ ಮನೆ ಪೂರ್ತಿ ಮಣ್ಣಿನ ಮನೆಯೇ. ಮಣ್ಣು, ಸುಣ್ಣ ಹಾಕಿ ಮನೆ ಕಟ್ಟಲಾಗುತ್ತದೆ. ಶ್ರೀರಾಮ, ಶ್ರೀಕೃಷ್ಣನ ಹಳ್ಳಿ ಎಂದೇ ಕೆಲವರೇ ಹೇಳುತ್ತಾರಂತೆ.
36
ಗ್ಯಾಸ್ ಇರಲ್ಲ, ಕಟ್ಟಿಗೆಯಲ್ಲಿ ಅಡುಗೆ, ಸಾವಯವ ಕೃಷಿ
ಅಡುಗೆ ಮಾಡುವಾಗ ಗ್ಯಾಸ್ ಬಳಸೋದಿಲ್ಲ, ಬದಲಾಗಿ ಕಟ್ಟಿಗೆ ಒಲೆಯನ್ನು ಬಳಸಲಾಗುತ್ತದೆ. ರುಬ್ಬುವ ಕಲ್ಲು, ಗೋಧಿ ಹಿಟ್ಟು ಮಾಡಲು ಕೂಡ ಕಲ್ಲು ಬಳಸಲಾಗುತ್ತದೆ. ಅಲ್ಲಿ ಗೋಶಾಲೆ ಕೂಡ ಇದೆ. ಆ ಹಳ್ಳಿಯಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಇಲ್ಲಿ ಕೂತು ಊಟ ಮಾಡಲು ಖುರ್ಚಿ, ಟೇಬಲ್ ಕೂಡ ಇರೋದಿಲ್ಲ.
ಚಿಕ್ಕ ಚಿಕ್ಕ ಮಕ್ಕಳು ಕೂಡ ವೇದ ಅಧ್ಯಯನ ಮಾಡುತ್ತಾರೆ. ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳು ಇಲ್ಲಿ ಓದಿದ್ದಾರೆ. ಇಲ್ಲಿ ಯಾರಾದರೂ ಉಳಿದುಕೊಳ್ತಾರೆ ಎಂದರೆ ಹಣ ಪಡೆಯೋದಿಲ್ಲ, ಬದಲಾಗಿ ಆದಷ್ಟು ಸೇವೆ ಮಾಡಿ ಬರಬೇಕು. ಅಂದಹಾಗೆ ಕರ್ನಾಟಕದ ಕೆಲ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಅಲ್ಲಿ ತೆಲುಗು ಭಾಷೆ ಮಾತನಾಡಲಾಗುತ್ತದೆ.
56
ಹೇಗೆ ಹೋಗಬೇಕು?
ಬೆಂಗಳೂರಿನಿಂದ ರೈಲಿನಿಂದ ಶ್ರೀಕಾಕುಲಂಗೆ ಬರಬೇಕು, ಅಲ್ಲಿಂದ ಬಸ್‌ನಲ್ಲಿ ಶ್ರೀಮುಖಿಲಿಂಗಂಗೆ ಬರಬೇಕು, ಆಮೇಲೆ ಅಲ್ಲಿಂದ ಆಟೋದಲ್ಲಿ ಈ ಹಳ್ಳಿಗೆ ಬರಬೇಕು.
66
ಏನು ಕಲಿಯಬಹುದು?
ನಿಮ್ಮನ್ನು ನೀವು ತಿಳಿದುಕೊಳ್ಳಬೇಕು ಎಂದರೆ, ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನೆನಪು ಮಾಡಿಕೊಳ್ಳಲು ಈ ಹಳ್ಳಿಗೆ ಭೇಟಿ ಕೊಡಬೇಕು ಎಂದು ಅಲ್ಲಿಗೆ ಹೋದವರು ಹೇಳುತ್ತಾರೆ. ಅಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ಬಳಸಲಾಗೋದಿಲ್ಲ. ಹೀಗಾಗಿ ಅಲ್ಲಿಗೆ ಹೋಗುವವರು ಪ್ಲಾಸ್ಟಿಕ್ ವಸ್ತುಗಳನ್ನು ತಗೊಂಡು ಹೋಗಬಾರದು, ಮೊಬೈಲ್ ಮುಟ್ಟಬಾರದು, ಅಲ್ಲಿನ ವಸ್ತುಗಳನ್ನು ಅನುಮತಿ ಇಲ್ಲದೆ ಬಳಸಬಾರದು, ಮಕ್ಕಳನ್ನು ಕೂಡ ಮುಟ್ಟಬಾರದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ