ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್‌: ನಿದಾ ಖಾನ್ ಕೇಸ್‌ನಲ್ಲಿ ಕೋರ್ಟ್‌ಗೆ ಹೊಸ ಮಾಹಿತಿ ಕೊಟ್ಟ SIT

Published : Apr 28, 2026, 04:21 PM IST

ನಿದಾ ಖಾನ್ ವಿರುದ್ಧ ಮತಾಂತರ, ಹೆಸರು ಬದಲಾವಣೆ, ಬುರ್ಖಾ ತರಬೇತಿ ಮತ್ತು ಮಲೇಷ್ಯಾದಲ್ಲಿ ಉದ್ಯೋಗದ ಆಮಿಷವೊಡ್ಡಿದ ಆರೋಪ ಕೇಳಿಬಂದಿದೆ. ಎಸ್‌ಐಟಿ ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ಲಭ್ಯವಾಗಿದ್ದು, ತನಿಖೆಯು ಮಾಲೆಗಾಂವ್‌ನಿಂದ ಮಲೇಷ್ಯಾದವರೆಗೂ ವಿಸ್ತರಿಸಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ.

PREV
16
ನಾಸಿಕ್ ಟಿಸಿಎಸ್ ಕಚೇರಿ ಮತಾಂತರ ಪ್ರಕರಣ
ನಾಸಿಕ್ ಟಿಸಿಎಸ್ ಕಚೇರಿಗೆ ಸಂಬಂಧಿಸಿದ ಮತಾಂತರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಪ್ರಕರಣ ಸೋಮವಾರ ನ್ಯಾಯಾಲಯದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಕೇವಲ ನಾಸಿಕ್‌ಗೆ ಸೀಮಿತವಾಗಿಲ್ಲ, ಇದರ ಜಾಲ ಮಾಲೆಗಾಂವ್ ಮತ್ತು ಮಲೇಷ್ಯಾದವರೆಗೂ ಹರಡಿದೆ ಎಂದು ವಿಶೇಷ ತನಿಖಾ ತಂಡಕ್ಕೆ (SIT) ಹೊಸ ಸಾಕ್ಷ್ಯಗಳು ಸಿಕ್ಕಿವೆ ಎಂದು ವಿಶೇಷ ಸರ್ಕಾರಿ ವಕೀಲ ಅಜಯ್ ಮಿಶ್ರಾ ನಾಸಿಕ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಮಾಹಿತಿಯಿಂದ ಪ್ರಕರಣದ ಗಂಭೀರತೆ ಹೆಚ್ಚಾಗಿದ್ದು, ತನಿಖಾ ಸಂಸ್ಥೆಗಳು ಅಂತರರಾಷ್ಟ್ರೀಯ ಸಂಪರ್ಕದ ಬಗ್ಗೆಯೂ ತನಿಖೆ ನಡೆಸುತ್ತಿವೆ.
26
ಪ್ರಮುಖ ಆರೋಪಿ ನಿದಾ ಖಾನ್

ಪ್ರಮುಖ ಆರೋಪಿ ನಿದಾ ಖಾನ್, ದೂರುದಾರರಲ್ಲಿ ಒಬ್ಬರಿಗೆ ಧಾರ್ಮಿಕ ಸಂಪ್ರದಾಯಗಳನ್ನು ಕಲಿಸಿ ಇಸ್ಲಾಂಗೆ ಮತಾಂತರಗೊಳ್ಳಲು ಪ್ರಭಾವ ಬೀರಲು ಯತ್ನಿಸಿದ್ದಾಳೆ ಎಂದು ಸರ್ಕಾರಿ ವಕೀಲರ ತಂಡ ನ್ಯಾಯಾಲಯದಲ್ಲಿ ಆರೋಪಿಸಿದೆ. ದೂರುದಾರರಿಗೆ ಬುರ್ಖಾ, ಧಾರ್ಮಿಕ ಪುಸ್ತಕಗಳನ್ನು ನೀಡಿ, ಅವರ ಫೋನ್‌ನಲ್ಲಿ ಧಾರ್ಮಿಕ ಶಿಕ್ಷಣದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲಾಗಿದೆ. ಅಷ್ಟೇ ಅಲ್ಲ, ನಮಾಜ್ ಮಾಡಲು, ಹಿಜಾಬ್ ಮತ್ತು ಬುರ್ಖಾ ಧರಿಸಲು ಕಲಿಸಿ, ಅವರ ಹೆಸರನ್ನು 'ಹಾನಿಯಾ' ಎಂದು ಬದಲಾಯಿಸುವ ಯೋಜನೆಯೂ ಇತ್ತು ಎಂದು ಆರೋಪಿಸಲಾಗಿದೆ.

36
ಮಲೇಷ್ಯಾದಲ್ಲಿ ಉದ್ಯೋಗದ ಆಮಿಷ
ಆರೋಪಿಗಳು ದೂರುದಾರರಿಗೆ ಮಲೇಷ್ಯಾದಲ್ಲಿ ಉದ್ಯೋಗದ ಆಮಿಷವೊಡ್ಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಇದಕ್ಕಾಗಿ ಇಮ್ರಾನ್ ಎಂಬ ವ್ಯಕ್ತಿಯ ಹೆಸರು ಕೇಳಿಬಂದಿದ್ದು, ಆತನ ಮೂಲಕ ವಿದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿತ್ತು. ಈ ಇಡೀ ಪ್ರಕ್ರಿಯೆಯ ಹಿಂದೆ ಆರ್ಥಿಕ ನೆರವು ಅಥವಾ ಸಂಘಟಿತ ಜಾಲ ಕೆಲಸ ಮಾಡಿರಬಹುದು ಎಂದು ಎಸ್‌ಐಟಿ ಶಂಕಿಸಿದ್ದು, ತನಿಖೆ ಮುಂದುವರಿಸಿದೆ.
46
ತಲೆಮರೆಸಿಕೊಂಡಿರುವ ನಿದಾ ಖಾನ್
ಪ್ರಮುಖ ಆರೋಪಿ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದಾಳೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಸಂಭಾವ್ಯ ಇತರ ಸಂತ್ರಸ್ತರು ಅಥವಾ ಸಂಪರ್ಕಗಳನ್ನು ಪತ್ತೆಹಚ್ಚಲು ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಳ್ಳುವುದು ಅಗತ್ಯ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಒಂದು ವೇಳೆ ಆಕೆಗೆ ನಿರೀಕ್ಷಣಾ ಜಾಮೀನು ನೀಡಿದರೆ, ಸಾಕ್ಷಿಗಳನ್ನು ಪ್ರಭಾವಿಸುವ ಸಾಧ್ಯತೆಯಿದೆ ಎಂದೂ ಆತಂಕ ವ್ಯಕ್ತಪಡಿಸಲಾಗಿದೆ.
56
ಆರೋಪ ತಳ್ಳಿ ಹಾಕಿದ ನಿದಾ ಖಾನ್ ಪರ ವಕೀಲೆ
ಇತ್ತ, ಪ್ರತಿವಾದಿ ಪರ ವಕೀಲ ರಾಹುಲ್ ಕಸ್ಲಿವಾಲ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಮತಾಂತರ ವಿರೋಧಿ ಯಾವುದೇ ಸ್ಪಷ್ಟ ಕಾನೂನು ಇಲ್ಲ ಎಂದು ಅವರು ವಾದಿಸಿದ್ದಾರೆ. ಹೊರಿಸಲಾದ ಆರೋಪಗಳು ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿವೆ, ಆದರೆ ನಿಜವಾದ ಮತಾಂತರಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಒಂದೇ ಪ್ರಕರಣದಲ್ಲಿ ಒಂಬತ್ತು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿರುವುದನ್ನು ಪ್ರಶ್ನಿಸಿದ ಅವರು, ಇದು ಕಾನೂನುಬಾಹಿರ ಎಂದಿದ್ದಾರೆ.
66
ಮುಂದಿನ ವಿಚಾರಣೆ ಮೇ 02ಕ್ಕೆ ನಿಗದಿ

ಈ ಪ್ರಕರಣದ ಮುಂದಿನ ವಿಚಾರಣೆ ಮೇ 2 ರಂದು ನಡೆಯಲಿದೆ. ಅಂದು ತನಿಖಾ ಸಂಸ್ಥೆಗಳು ಮತ್ತು ಪ್ರತಿವಾದಿ ವಕೀಲರು ತಮ್ಮ ವಾದ ಹಾಗೂ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಿವೆ. ತನಿಖೆ ಮುಂದುವರಿದಂತೆ, ಈ ಪ್ರಕರಣವು ಕೇವಲ ಕಾನೂನಾತ್ಮಕವಾಗಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಸೂಕ್ಷ್ಮ ಸ್ವರೂಪ ಪಡೆದುಕೊಳ್ಳುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories