ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ, ಬೆಜಿಪಿ ನಾಯಕಿ ಅಪರ್ಣ ಯಾದವ್ ಪತಿ ಪ್ರತೀಕ್ ಯಾದವ್ ಸಾವು ಪ್ರಕರಣದಲ್ಲಿ ಟ್ವಿಸ್ಟ್ ಎದುರಾಗಿದೆ. ಪ್ರತೀಕ್ ಯಾದವ್ ಆಸ್ಪತ್ರೆ ದಾಖಲಿಸುವ ಮೊದಲೇ ಮೃತಪಟ್ಟಿದ್ದರು ಎಂಬ ವೈದ್ಯರ ಹೇಳಿಕೆ ಬಳಿಕ ಸಾವಿನ ಅನುಮಾನ ಹೆಚ್ಚಾಗಿದೆ.
ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ನಿಧನ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. 38ರ ಹರೆಯದ ಪ್ರತೀಕ್ ಯಾದವ್ ಸಾವಿನ ಹಿಂದೆ ಅನುಮಾಗಳು ವ್ಯಕ್ತವಾಗಿದೆ. ಇದೀಗ ವೈದ್ಯರ ನೀಡಿದ ಹೇಳಿಕೆಯಿಂದ ಅನುಮಾನ ಹೆಚ್ಚಾಗಿದೆ. ಪ್ರತೀಕ್ ಯಾದವ್ ಆಸ್ಪತ್ರೆ ದಾಖಲಿಸುವ ಮೊದಲೇ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ.
26
ಬೆಳಗ್ಗೆ ನಡೆದಿದ್ದು ಏನು?
ಪ್ರತೀಕ್ ಯಾದವ್ ಆರೋಗ್ಯ ಸಂಪೂರ್ಣ ಹದಗೆಟ್ಟಿರುವುದಾಗಿ ಬೆಳಗ್ಗೆ 5 ಗಂಟೆಗೆ ವೈದ್ಯರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣೇ ವೈದ್ಯರ ತಂಡ ಪ್ರತೀಕ್ ಯಾದವ್ ಮನೆಗೆ ಧಾವಿಸಿತ್ತು. ಪರಿಶೀಲಿಸಿದ ವೈದ್ಯರು ತಕ್ಷಣವೇ ಆಸ್ಪತ್ರೆಗೆ ಪ್ರತೀಕ್ ಶಿಫ್ಟ್ ಮಾಡಲು ಸೂಚಿಸಿದ್ದಾರೆ. 5.30ರ ವೇಳೆಗೆ ಪ್ರತೀಕ್ ಯಾದವ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತರವು ಮೊದಲೇ ಪ್ರತೀಕ್ ಯಾದವ್ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ.
36
ಮರಣೋತ್ತರ ಪರೀಕ್ಷೆ ವರದಿ ಕಾಯುತ್ತಿರುವ ಪೊಲೀಸ್
ಪ್ರತೀಕ್ ಯಾದವ್ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆ ಅನುಮಾನಗಳು ಹೆಚ್ಚಾಗತೊಡಗಿದೆ. ಇದೀಗ ವೈದ್ಯರು ಹಾಗೂ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ವಿಷಪ್ರಾಷನದ ಶಂಕೆಗಳು ವ್ಯಕ್ತವಾಗಿದೆ. ಮಾನಸಿಕವಾಗಿ ನೊಂದಿದ್ದ ಪ್ರತೀಕ್ ಯಾದವ್ ಹಲವು ಬಾರಿ ನೋವು ಹೇಳಿಕೊಂಡಿದ್ದರು.
ಪ್ರತೀಕ್ ಯಾದವ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೂ, ಆರೋಗ್ಯದಲ್ಲಿ ಏರುಪೇರುಗಳಿರಲಿಲ್ಲ. ಇದೀಗ ಪ್ರತೀಕ್ ಯಾದವ್ ಸಾವು ಅನುಮಾನಗಳಿಗೆ ಕಾರಣಾಗಿದೆ.
56
ಪತ್ನಿಯಿಂದ ವಿಚ್ಚೇದನ ಬಯಸಿದ್ದ ಪ್ರತೀಕ್ ಯಾದವ್
ಜನವರಿ ತಿಂಗಳಲ್ಲಿ ಪ್ರತೀಕ್ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪತ್ನಿಯಿಂದ ವಿಚ್ಚೇದನ ಬಯಸಿರುವುದಾಗಿ ಹೇಳಿಕೊಂಡಿದ್ದರು. ತಾನು ಮಾನಸಿಕವಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದೇನೆ. ನನ್ನ ಆರೈಕೆಯನ್ನು ಮಾಡುತ್ತಿಲ್ಲ. ಪತ್ನಿಯಿಂದ ವಿಚ್ಚೇದನ ಬೇಕು ಎಂದಿದ್ದರು.
66
ರಾಜಕೀಯಿಂದ ದೂರ ಉಳಿದಿದ್ದ ಪ್ರತೀಕ್ ಯಾದವ್
ಮುಲಾಯಂ ಸಿಂಗ್ ಯಾದವ್ ಹಾಗೂ ಸಾಧಾನ ಗುಪ್ತಾ ಪುತ್ರ ಪ್ರತೀಕ್ ಯಾದವ್ ರಾಜಕೀಯದಿಂದ ದೂರ ಉಳಿದಿದ್ದಾರೆ. ರಿಯಲ್ ಎಸ್ಟೇಟ್, ಜಿಮ್ ಸೇರಿದಂತೆ ಕೆಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಲಖನೌದಲ್ಲಿ ಪಿಟ್ನೆಸ್ ಪ್ಲಾಟಂ ಜಿಮ್ ನಡೆಸುತ್ತಿದ್ದಾರೆ.
ರಾಜಕೀಯಿಂದ ದೂರ ಉಳಿದಿದ್ದ ಪ್ರತೀಕ್ ಯಾದವ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ