ಟಿವಿಕೆ ರ‍್ಯಾಲಿ ಭೀಕರ ಚಿತ್ರಣ, 6 ಗಂಟೆ ಕಾಯಿಸಿ 29 ಮುಗ್ದರ ಬಲಿಪಡೆದರಾ ನಟ ವಿಜಯ್? ಪಕ್ಷದ ರ‍್ಯಾಲಿಯಲ್ಲಿ ಸಾಲು ಸಾಲು ನಿಯಮ ಉಲ್ಲಂಘನೆ ಮಾಡಲಾಗಿದೆ. 10 ಸಾವಿರ ಎಂದು 50 ಸಾವಿರ ಜನ ಸೇರಿಸಿ ಬರೋಬ್ಬರಿ 6 ಗಂಟೆ ಕಾಯಿಸಲಾಗಿದೆ. ಕಾಲ್ತುಳಿತದ ಭೀಕರ ಚಿತ್ರಣ ಇಲ್ಲಿದೆ.
ತಮಿಳು ನಟ ಜೊಸೆಫ್ ವಿಜಯ್ ಅವರ ಟಿವಿಕೆ ಪಕ್ಷದ ರ‍್ಯಾಲಿಯ ಭೀಕರ ಚಿತ್ರಣ ಹೊರಬಂದಿದೆ. ನಟ ವಿಜಯ್ ಪಕ್ಷವಾಗಿರುವ ಟಿವಿಕೆ ಇದುವರೆಗೆ ಆಯೋಜಿಸಿದ ಎಲ್ಲಾ ರ‍್ಯಾಲಿ, ಕಾರ್ಯಕ್ರಮಗಳಲ್ಲಿ ಕಿಕ್ಕಿರಿದು ಜನ ಸೇರಿ ಶಕ್ತಿ ಪ್ರದರ್ಶನ ಮಾಡಲಾಗಿದೆ. ಇದರಂತೆ ಇಂದು ಮಾಡಿದ ಶಕ್ತಿ ಪ್ರದರ್ಶನ ದುರಂತಕ್ಕೆ ಕಾರಣವಾಗಿದೆ. ಸಾಲು ಸಾಲು ನಿಯಮ ಉಲ್ಲಂಘಟನೆ, 6 ಗಂಟೆ ಜನರನ್ನು ಕಾಯಿಸಿದ ಗಂಭೀರ ಆರೋಪಿಗಳು ನಟ ವಿಜಯ್ ಮೇಲೆ ಕೇಳಿಬಂದಿದೆ.
25
ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ ರ‍್ಯಾಲಿ
ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ ರ‍್ಯಾಲಿ
ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇತ್ತ ಗಾಯಗೊಂಡವರ ಸಂಖ್ಯೆ 50 ದಾಟಿದೆ ಎಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುಗ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
35
6 ಗಂಟೆ ಕಾಯಿಸಿದ ನಟ ವಿಜಯ್
6 ಗಂಟೆ ಕಾಯಿಸಿದ ನಟ ವಿಜಯ್
ಬಹುತೇಕ ರಾಜಕೀಯ ಕಾರ್ಯಕ್ರಮಗಳು ತಕ್ಕ ಸಮಯಕ್ಕೆ ಆರಂಭವಾಗುವುದಿಲ್ಲ ಅನ್ನೋದು ನಿಜ. ನಟ ವಿಜಯ್ ಟಿವಿಕೆ ಪಕ್ಷದ ರ‍್ಯಾಲಿ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಈ ಬಾರಿಯ ವಿಜಯ್ ರ‍್ಯಾಲಿ ಆಯೋಜಿಸಿ ಬರೋಬ್ಬರಿ 6 ಗಂಟೆ ಮುಗ್ದ ಜನರನ್ನು ಕಾಯಿಸಿದ್ದಾರೆ. ಜನ ಸೇರುತ್ತಲೇ ಹೋಗಿದ್ದಾರೆ.ಇದರಿಂದ ಕಾಲ್ತುಳಿತ ಸಂಭವಿಸಿದೆ.
ನಟ ವಿಜಯ್ ಜೊಸೆಫ್ ಟಿವಿಕೆ ರ‍್ಯಾಲಿಗೆ 10,000 ಜನ ಸೇರಲಿದ್ದಾರೆ ಎಂದು ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿತ್ತು. ಆದರೆ ಟಿವಿಕೆ ರ‍್ಯಾಲಿಗೆ ಬರೋಬ್ಬರಿ 50 ಸಾವಿರ ಮಂದಿಯನ್ನು ಸೇರಿಸಲಾಗಿತ್ತು. ವ್ಯವಸ್ಥೆಗಳು 10 ಸಾವಿರ ಮಂದಿಗೆ ಮಾತ್ರ ಮಾಡಲಾಗಿತ್ತು. ಸುರಕ್ಷತಾ ಕ್ರಮಗಳು,ಭದ್ರತಾ ನಿಯೋಜನೆ ಸೇರಿದಂತೆ ಎಲ್ಲವೂ ಕೇವಲ 10 ಸಾವಿರ ಮಂದಿಗೆ ಸೀಮಿತವಾಗಿತ್ತು.
55
ಘಟನೆಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿ ಹಲವರು
ಘಟನೆಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿ ಹಲವರು
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗಾಯಗೊಂಡವರು ಶೀಘ್ರದಲ್ಲೇ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.