ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಹಿಂದಿ. ಇದು ದೇಶದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2011ರ ಜನಗಣತಿಯ ಪ್ರಕಾರ ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುವವರ ಸಂಖ್ಯೆ 2001ರ ಜನಗಣತಿಗೆ ಹೋಲಿಸಿದರೆ 2011ರಲ್ಲಿ ಹೆಚ್ಚಾಗಿದೆ. 2001 ರಲ್ಲಿ, 41.03% ಜನರು ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುತ್ತಿದ್ದರೆ, 2011 ರಲ್ಲಿ ಅದು 43.63% ಕ್ಕೆ ಏರಿತು. ಮ್ಯಾಂಡರಿನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ನಂತರ, ಹಿಂದಿ ಕೂಡ ವಿಶ್ವದಲ್ಲಿ ಹೆಚ್ಚು ಮಾತನಾಡುವ ನಾಲ್ಕನೇ ಭಾಷೆಯಾಗಿದೆ.