ಆಯೋಧ್ಯೆ ರಾಮ ಮಂದಿರ ದಿನದ 24 ಗಂಟೆ ತೆರಯಲು ಸಿಎಂ ಯೋಗಿ ಸೂಚನೆ, ಈ ಮೂರು ದಿನ ಮಾತ್ರ!

First Published Mar 15, 2024, 9:07 PM IST

ಆಯೋಧ್ಯೆ ರಾಮ ಮಂದಿರಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿನ 24 ಗಂಟೆ ರಾಮ ಮಂದಿರ ಭಕ್ತರ ದರ್ಶನಕ್ಕೆ ತೆರೆಯಲು ಸೂಚನೆ ನೀಡಿದ್ದಾರೆ. ಈ ಮೂರು ದಿನ 24 ಗಂಟೆಯೂ ರಾಮ ಮಂದಿರ ಭಕ್ತರಿಗೆ ದರ್ಶನ ನೀಡಲಿದೆ
 

ಆಯೋಧ್ಯೆ ರಾಮ ಮಂದಿರ ದರ್ಶನಕ್ಕೆ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಉತ್ತರ ಪ್ರದೇಶ ಸರ್ಕಾರ ನೋಡಿಕೊಳ್ಳುತ್ತಿದೆ. ಭಕ್ತರು ಸುಗಮವಾಗಿ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ಇದೀಗ ಶಾಲಾ ಕಾಲೇಜುಗಳು ಬೇಸಿಗೆ ರಜೆಯತ್ತ ದಾಪುಗಾಲಿಡುತ್ತಿದೆ. ಹೀಗಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
 

ಇದರ ನಡುವೆ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಸೂಚನೆ ನೀಡಿದ್ದಾರೆ. ದಿನದ 24 ಗಂಟೆ ರಾಮ ಮಂದಿರ ತೆರೆಯಲು ಸೂಚನೆ ನೀಡಿದ್ದಾರೆ. ನವರಾತ್ರಿಯ ಅಂತಿಮ ಮೂರು ದಿನದಲ್ಲಿ 24 ಗಂಟೆಯೂ ರಾಮ ಮಂದಿರ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ಸೂಚಿಸಿದ್ದಾರೆ.
 

ಎಪ್ರಿಲ್ ತಿಂಗಳ ನವರಾತ್ರಿಯ ಅಷ್ಠಮಿ, ನವಮಿ ಹಾಗೂ ದಶಮಿಯ ಮೂರು ದಿನ 24 ಗಂಟೆ ರಾಮ ಮಂದಿರ ಭಕ್ತರಿಗೆ ದರ್ಶನ ನೀಡಲಿದೆ. ಈ ಮೂರು ದಿನ ವಿಶೇಷ ಪೂಜೆಗಳು ನಡೆಯಲಿದೆ.
 

24 ಗಂಟೆ ಭಕ್ತರು ರಾಮ ಮಂದಿರ ದರ್ಶನ ಪಡೆಯಲು ಅಧಿಕಾರಿಗಳು ಎಲ್ಲಾ ವ್ಯವಸ್ಥೆ ಮಾಡಲು ಸಿಎಂ ಯೋಗಿ ಸೂಚಿಸಿದ್ದರೆ. ಭಕ್ತರಿಗೆ ಎಲೆಕ್ಟ್ರಿಕ್ ಬಸ್ ಸೇವೆ ನೀಡಲು ಸೂಚನೆ ನೀಡಲಾಗಿದೆ.
 

ದೇಗುಲದಲ್ಲಿ ಶುಚಿತ್ವ ಕಾಪಾಡಲು ವಿಶೇಷ ಕಾಳಜಿ ವಹಿಸಬೇಕು. ಬೇಸಿಗೆ ಉರಿ ಹೆಚ್ಚಾಗಿರುವ ಕಾರಣ ಭಕ್ತರಿಗೆ ನೀರಿನ ವ್ಯವಸ್ಥೆ ಮಾಡಬೇಕು. ಭಕ್ತರು ಸರದಿ ಸಾಲಿನಲ್ಲಿ ಗರಿಷ್ಠ 2.5 ಕಿಲೋಮೀಟರ್‌ಗಿಂತ ಹೆಚ್ಚು ನಡೆಯುವಂತಿರಬಾರದು ಎಂದು ಯೋಗಿ ಸೂಚಿಸಿದ್ದಾರೆ.
 

ಅಷ್ಠಮಿ, ನವಮಿ ಹಾಗೂ ದಶಮಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ವೇಳೆ ಯಾವುದೇ ಅನಾನುಕೂಲಗಳಾಗಬಾರದು. ಉರಿ ಬಿಸಿಲಿನ ಕಾರಣ ಸಂಜೆ ವೇಳೆ ದರ್ಶನ ಪಡೆಯುವವರ ಸಂಖ್ಯೆ ಹೆಚ್ಚಿರಲಿದೆ. ಹೀಗಾಗಿ 24 ಗಂಟೆ ಮಂದಿರ ತೆರೆಯುವುದಾಗಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
 

ರಾತ್ರಿ ವೇಳೆ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಶುಭ ದಿನದಲ್ಲಿ ಭಕ್ತರು ಶ್ರೀ ರಾಮ ಲಲ್ಲಾ ದರ್ಶನ ಪಡೆದು ಪುನೀತರಾಗಲು ಉತ್ತರ ಪ್ರದೇಶ ಸರ್ಕಾರ ಕೋರಿದೆ.

ಇದೇ ವೇಳೆ ರಾಮ ನವಮಿ ಆಚರಣೆಗೆ ತಯಾರಿ ಕುರಿತು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರೆ. ಚುನಾವಣೆ ವೇಳೆ ರಾಮ ನವಮಿ ಆಗಮಿಸುತ್ತಿರುವ ಕಾರಣ ಯಾವುದೇ ಸಮಸ್ಯೆಯಾಗದಂತೆ ತಯಾರಿ ಮಾಡಲು ಸೂಚಿಸಿದ್ದಾರೆ.
 

click me!