ಇಲ್ಲಿ ವಿಮಾನ ಇಳಿಸೋಕೆ ಪೈಲಟ್‌ಗಳ ಎದೆ ನಡುಗುತ್ತೆ; ಜಗತ್ತಿನ ಅಪಾಯಕಾರಿ ವಿಮಾನ ನಿಲ್ದಾಣಗಳಿವು!

Published : Jan 24, 2025, 07:21 PM IST

ವಿಮಾನ ಪ್ರಯಾಣ ಅಂದ್ರೆ ಐಷಾರಾಮಿ ಅಂತಾರೆ. ಆದ್ರೆ ಅಷ್ಟೇ ಅಪಾಯಕಾರಿ ಕೂಡ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ವಿಮಾನಗಳು ಮಾತ್ರವಲ್ಲ, ವಿಮಾನ ನಿಲ್ದಾಣಗಳೂ ಅಪಾಯಕಾರಿ. ಜಗತ್ತಿನ ಅತಿ ಅಪಾಯಕಾರಿ ವಿಮಾನ ನಿಲ್ದಾಣಗಳು ಯಾವುವು ಅಂತ ಗೊತ್ತಾ..?

PREV
18
ಇಲ್ಲಿ ವಿಮಾನ ಇಳಿಸೋಕೆ ಪೈಲಟ್‌ಗಳ ಎದೆ ನಡುಗುತ್ತೆ; ಜಗತ್ತಿನ ಅಪಾಯಕಾರಿ ವಿಮಾನ ನಿಲ್ದಾಣಗಳಿವು!
ಅಪಾಯಕಾರಿ ವಿಮಾನ ನಿಲ್ದಾಣ

ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿರುವ ಈ ವಿಮಾನ ನಿಲ್ದಾಣದ Runway ಕೇವಲ 4,000 ಅಡಿ. ಸುತ್ತಲೂ ನೀರು. ಇಲ್ಲಿ ವಿಮಾನ ಇಳಿಸೋದು ಪೈಲಟ್‌ಗಳಿಗೆ ಅಗ್ನಿಪರೀಕ್ಷೆ. ಸ್ವಲ್ಪ ಯಡವಟ್ಟಾದ್ರೂ ವಿಮಾನ ಸಮುದ್ರಪಾಲು.

28
ಅಪಾಯಕಾರಿ ವಿಮಾನ ನಿಲ್ದಾಣ

ಸೇಂಟ್ ಮಾರ್ಟಿನ್‌ನಲ್ಲಿರುವ ಈ ವಿಮಾನ ನಿಲ್ದಾಣ ಸಮುದ್ರ ತೀರದಲ್ಲೇ ಇದೆ. ಇಲ್ಲಿ ವಿಮಾನಗಳು ತೀರದ ಮೇಲೆ ಹಾರುತ್ತವೆ. ಅಪಾಯ ತಪ್ಪಿದ್ದಲ್ಲ.

38
ಅಪಾಯಕಾರಿ ವಿಮಾನ ನಿಲ್ದಾಣ

ಹಾಂಗ್ ಕಾಂಗ್‌ನ ಕೈ ಟಕ್ ವಿಮಾನ ನಿಲ್ದಾಣ ತುಂಬಾ ಅಪಾಯಕಾರಿ. ಸುತ್ತಲೂ ಬೆಟ್ಟಗುಡ್ಡಗಳು, ಕಾಡುಗಳು. ಸಿಗ್ನಲ್ ಸಮಸ್ಯೆ ಇರುತ್ತೆ. ಈಗ ಈ ನಿಲ್ದಾಣ ಬಂದ್ ಆಗಿದೆ.

48
ಅಪಾಯಕಾರಿ ವಿಮಾನ ನಿಲ್ದಾಣ

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ವಿಮಾನ ನಿಲ್ದಾಣದ ರನ್‌ವೇ ಆರಂಭ ಮತ್ತು ಅಂತ್ಯದಲ್ಲಿ ನೀರಿದೆ. ಪೈಲಟ್‌ಗಳು ತುಂಬಾ ಎಚ್ಚರಿಕೆಯಿಂದ ಲ್ಯಾಂಡ್ ಮಾಡ್ತಾರೆ. ವಿಮಾನ ಪ್ರಯಾಣಿಕರಿಗಂತೂ ಸೇಫ್ ಆಗಿ ಇಳಿಯೋವರೆಗೆ ಸಮಾಧಾನ ಇರೋಲ್ಲ.

58
ಅಪಾಯಕಾರಿ ವಿಮಾನ ನಿಲ್ದಾಣ

ಸ್ಕಾಟ್ಲೆಂಡ್‌ನ ಬೈರಾ ದ್ವೀಪದ ವಿಮಾನ ನಿಲ್ದಾಣದ ಓಡುದಾರಿ ತುಂಬಾ ಚಿಕ್ಕದು. ಹಾಗಾಗಿ ಪಕ್ಕದ ಕಡಲತೀರವನ್ನೂ ರನ್‌ವೇ ಆಗಿ ಬಳಸುತ್ತಾರೆ. ಪೈಲಟ್‌ಗಳಿಗೆ ಇದು ದೊಡ್ಡ ಸವಾಲು.

68
ಅಪಾಯಕಾರಿ ವಿಮಾನ ನಿಲ್ದಾಣ

ಫ್ರಾನ್ಸ್‌ನ ಆಲ್ಪ್ಸ್ ಪರ್ವತಗಳ ನಡುವೆ ಇರುವ ಈ ವಿಮಾನ ನಿಲ್ದಾಣ ತುಂಬಾ ಅಪಾಯಕಾರಿ. ರನ್‌ವೇ ಚಿಕ್ಕದು ಮತ್ತು ಏರುಪೇರು ಇದೆ. ವಿಮಾನ ಲ್ಯಾಂಡ್ ಮಾಡೋದಂದ್ರೆ ಪೈಲಟ್‌ಗಳಿಗೆ ಶಿಕ್ಷೆ ಅನುಭವಿಸಿದಂತೆ.

78
ಅಪಾಯಕಾರಿ ವಿಮಾನ ನಿಲ್ದಾಣ

ನೇಪಾಳದ ಲೂಕ್ಲಾ ವಿಮಾನ ನಿಲ್ದಾಣ ಹಿಮಾಲಯದಲ್ಲಿ 8,000 ಅಡಿ ಎತ್ತರದಲ್ಲಿದೆ. ಇಲ್ಲಿ ವಿದ್ಯುತ್ ಕಡಿಮೆ ಇರುತ್ತದೆ. ಆಧುನಿಕ ಸೌಲಭ್ಯಗಳಿಲ್ಲ. ಪೈಲಟ್‌ಗಳಿಗೆ ತುಂಬಾ ಕಷ್ಟ.

88
ಅಪಾಯಕಾರಿ ವಿಮಾನ ನಿಲ್ದಾಣ

ಜಪಾನ್‌ನ ಕನ್ಸಾಯ್ ವಿಮಾನ ನಿಲ್ದಾಣ ಸಮುದ್ರದ ಮಧ್ಯೆ ಕೃತಕ ದ್ವೀಪದಲ್ಲಿದೆ. ಭೂಕಂಪ, ಚಂಡಮಾರುತಗಳ ಭಯ ಇದೆ. ಸಮುದ್ರ ಮಟ್ಟ ಏರಿದರೆ ಮುಳುಗಿ ಹೋಗುವ ಅಪಾಯ ಇದೆ.

click me!

Recommended Stories