ದೇಶದಲ್ಲಿ ಹೆಚ್ಚುತ್ತಿರುವ ಆ್ಯಕ್ಸಿಡೆಂಟ್ಸ್‌ಗೆ ಇದರ ಬಳಕೆಯೇ ಕಾರಣ!

First Published | Sep 2, 2024, 5:33 PM IST

Road Safety Report: ದೇಶದಲ್ಲಿ ಭಯೋತ್ಪಾದನೆ ಅಥವಾ ಯುದ್ಧ ಮತ್ತು ಅಪರಾಧಗಳಲ್ಲಿ ಎಷ್ಟು ಜೀವಗಳು ಹೋಗುವುದಿಲ್ಲವೋ ಅದಕ್ಕಿಂತ ಹೆಚ್ಚಿನ ಸಾವು ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತವೆ. ಇಲ್ಲಿ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತವೆ, ಇದರಲ್ಲಿ 1.5 ಲಕ್ಷ ಸಾವುಗಳು ಸಂಭವಿಸುತ್ತವೆ.

ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂಕಿ ಅಂಶಗಳನ್ನು ಗಮನಿಸಿದರೆ, ಪ್ರತಿ ವರ್ಷ 2 ಪ್ರತಿಶತ ರಸ್ತೆ ಅಪಘಾತಗಳ ಹೆಚ್ಚಳವಾಗುತ್ತಿದೆ ಮತ್ತು 1.5 ಪ್ರತಿಶತದಷ್ಟು ಸಾವಿನ ಸಂಖ್ಯೆ ಹೆಚ್ಚುತ್ತಿದೆ. 2023ರಲ್ಲಿ ಭಾರತದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತವು 6.2 ಮಿಲಿಯನ್ ಕಿಲೋಮೀಟರ್ ಉದ್ದದ ರಸ್ತೆ ಜಾಲವನ್ನು ಹೊಂದಿದೆ. ಆದರೆ ರಸ್ತೆ ಸುರಕ್ಷತಾ ನಿಬಂಧನೆಗಳ ಕೊರತೆಯಿಂದಾಗಿ ಈ ರಸ್ತೆಗಳು ಮರಣ ಶಾಸನ ಬರೆಯುತ್ತಿದೆ. 

ವರದಿ ಪ್ರಕಾರ, ಪ್ರತಿ ವರ್ಷ ಮೊಬೈಲ್ ಬಳಸುವಾಗ ಚಾಲನೆ ಮಾಡುವುದರಿಂದ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಇದು ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಸುಮಾರು 10 ಪ್ರತಿಶತ. ಅದೇ ರೀತಿ, ರಸ್ತೆ ಅಪಘಾತಗಳಲ್ಲಿ ಸಾಯುವವರಲ್ಲಿ 15 ಪ್ರತಿಶತದಷ್ಟು ಜನರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುತ್ತಾರೆ. ಸುಮಾರು 60% ಅಪಘಾತಗಳಲ್ಲಿ ಸಾವುಗಳಿಗೆ ಅತಿ ವೇಗದ ಚಾಲನೆ ಕಾರಣ.

Tap to resize

ಕಳಪೆ ರಸ್ತೆಗಳು ಸಹ ಜೀವ ತೆಗೆದುಕೊಳ್ಳುತ್ತಿವೆ

ರಸ್ತೆ ಸುರಕ್ಷತಾ ವರದಿ ಪ್ರಕಾರ, ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವುಗಳಲ್ಲಿ 8 ಪ್ರತಿಶತದಷ್ಟು ಸಾವಿಗೆ ಕಳಪೆ ರಸ್ತೆಗಳೇ ಕಾರಣ. ರಸ್ತೆಗಳ ಗುಂಡಿಗಳು, ರಸ್ತೆ ಚಿಹ್ನೆಗಳ ಕೊರತೆ, ಕಳಪೆ ಬೆಳಕಿನ ರಸ್ತೆಗಳು ಸಹ ಭೀಕರ ಅಪಘಾತಗಳಿಗೆ ಕಾರಣವಾಗುತ್ತಿವೆ. ವಾಣಿಜ್ಯ ವಾಹನಗಳಲ್ಲಿ ಯಾಂತ್ರಿಕ ದೋಷಗಳು ಸುಮಾರು 5% ಅಪಘಾತಗಳಿಗೆ ಕಾರಣವಾಗಿವೆ.

ಸಾವನ್ನಪ್ಪುವವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಬಲಿಪಶುಗಳು ದ್ವಿಚಕ್ರ ವಾಹನ ಸವಾರರು. ಸಾವು ಅಥವಾ ಗಾಯಗೊಂಡವರಲ್ಲಿ 40 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನ ಸವಾರರು. 25 ಪ್ರತಿಶತದಷ್ಟು ಅಪಘಾತಗಳಲ್ಲಿ ಕಾರು ಸವಾರರು ಬಲಿಯಾಗುತ್ತಾರೆ ಮತ್ತು ಸಾಮಾನ್ಯವಾಗಿ ಅವರು ಸೀಟ್ ಬೆಲ್ಟ್ ಧರಿಸಿರುವುದಿಲ್ಲ. ಟ್ರಕ್‌ಗಳು ಮತ್ತು ಬಸ್‌ಗಳು ಸುಮಾರು 20% ರಸ್ತೆ ಅಪಘಾತಗಳಾಗುತ್ತವೆ. ಈ ವಾಹನಗಳಿಂದ ಸಂಭವಿಸುವ ಅಪಘಾತಗಳಲ್ಲಿ ಸಾವಿನ ಪ್ರಮಾಣ ಹೆಚ್ಚು.

15 ಪ್ರತಿಶತ ಪಾದಚಾರಿಗಳ ಸಾವಿಗೆ ಅವರು ಕಾರಣರಲ್ಲ!
ರಸ್ತೆಯಲ್ಲಿ ನಡೆಯುವವರು ಮತ್ತು ಸೈಕಲ್ ಸವಾರರು ರಸ್ತೆ ಅಪಘಾತಗಳಲ್ಲಿ ತಮ್ಮದಲ್ಲಿದ ತಪ್ಪಿಗೆ ಸಾಯುತ್ತಾರೆ. ರಸ್ತೆ ಅಪಘಾತಗಳಲ್ಲಿ 15 ಪ್ರತಿಶತದಷ್ಟು ಸಾವು ಪಾದಚಾರಿಗಳು ಮತ್ತು ಸೈಕಲ್ ಸವಾರರದ್ದಾಗಿರುತ್ತವೆ.

ಈಶಾನ್ಯದ ರಸ್ತೆಗಳು ಹೆಚ್ಚು ಸುರಕ್ಷಿತ
ರಸ್ತೆ ಸುರಕ್ಷತಾ ವರದಿ ಪ್ರಕಾರ, ಈಶಾನ್ಯದ ರಸ್ತೆಗಳು ಇತರ ರಾಜ್ಯಗಳಿಗಿಂತ ಹೆಚ್ಚು ಸುರಕ್ಷಿತ. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ ರಸ್ತೆಗಳಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತವೆ, ಆದರೆ ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣ ತುಸು ಕಡಿಮೆ.

Latest Videos

click me!