ಭಾರತೀಯ ರೈಲು ಇಂದು ಹೊಸ ಹೊಸ ದಾಖಲೆಗಳನ್ನು ಬರೆಯಲು ಮುಂದಾಗುತ್ತಿದೆ. ರೈಲುಗಳ ವೇಗ ಹೆಚ್ಚಳದ ಜೊತೆ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ. ಆದ್ರೆ ಈ ಎಲ್ಲದರ ನಡುವೆ ಕೆಲ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.
ಸಾಮಾನ್ಯವಾಗಿ ಕೆಲವೊಂದು ರೈಲುಗಳು ಎರಡ್ಮೂರು ಗಂಟೆ ತಡವಾಗಿತ್ತು. ವಿಪರೀತ ಮಳೆ , ಭೂಕುಸಿತ, ದುರಸ್ತಿ ಸಂದರ್ಭದಲ್ಲಿ ರೈಲುಗಳು ನಿಧಾನವಾಗಿ ಸಂಚರಿಸುತ್ತವೆ.
ಆದ್ರೆ ಇಂದು ನಾವು ಹೇಳುತ್ತಿರುವ ರೈಲು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ವರ್ಷದ ಬಳಿಕ ತನ್ನ ಗಮ್ಯ ಸ್ಥಾನವನ್ನು ತಲುಪಿದೆ. ಇದನ್ನು ಭಾರತೀಯ ರೈಲ್ವೆ ಇತಿಹಾಸದಲ್ಲಿ ಅತಿ ನಿಧಾನ ಟ್ರೈನ್ ಎಂದು ಕರೆಯಲಾಗುತ್ತದೆ.
2014 ನವೆಂಬರ್‌ನಲ್ಲಿ ವಿಶಾಖಪಟ್ಟಣದಿಂದ ಗೊಬ್ಬರ ತುಂಬಿದ ರೈಲು ಉತ್ತರ ಪ್ರದೇಶದ ಬಸ್ತಿಯತ್ತ ಪ್ರಯಾಣ ಬೆಳೆಸಿತ್ತು. ಈ ರೈಲು ತನ್ನ ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿತ್ತು. ವ್ಯಾಪಾರಿ ರಾಮಚಂದ್ರ ಗುಪ್ತಾ ಎಂಬವರಿಗೆ ಸೇರಿದ 14 ಲಕ್ಷ ಮೌಲ್ಯದ 1,361 ಗೊಬ್ಬರ ಪ್ಯಾಕೆಟ್‌ಗಳು ರೈಲಿನಲ್ಲಿದ್ದವು.
ರಾಮಚಂದ್ರ ಗುಪ್ತಾ ತಮ್ಮ ಸರಕು ತೆಗೆದುಕೊಳ್ಳಲು ಉತ್ತರ ಪ್ರದೇಶದಲ್ಲಿ ಕಾಯುತ್ತಾ ಕುಳಿತ್ತಿದ್ದರು. ರೈಲು ವಿಳಂಬವಾದ ಹಿನ್ನೆಲೆ ಅಧಿಕಾರಿಗಳನ್ನು ವಿಚಾರಿಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
goods train
ವಿಶಾಖಪಟ್ಟಣದಿಂದ ಉತ್ತರ ಪ್ರದೇಶದ ಬಸ್ತಿ ತಲುಪಲು ಅಂದಾಜು 42 ಗಂಟೆ 13 ನಿಮಿಷ ಬೇಕಾಗುತ್ತದೆ. ಆದ್ರೆ ಈ ರೈಲು 1,400 ಕಿಮೀ ತಲುಪಲು ಮೂರು ವರ್ಷ ತೆಗೆದುಕೊಂಡಿದೆ.
ಮೂರು ವರ್ಷದ ನಂತರ ರೈಲು ಬಸ್ತಿಗೆ ತಲುಪಿದಾಗ ಅದರಲ್ಲಿದ್ದ ಎಲ್ಲಾ ಗೊಬ್ಬರ ಹಾಳಾಗಿತ್ತು. ರಾಮಚಂದ್ರ ಗುಪ್ತಾ ಸಹ ಗೊಬ್ಬರದ ಪ್ಯಾಕೇಟ್ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಆದ್ರೆ ಈ ರೈಲು ಮೂರು ವರ್ಷ ವಿಳಂಬವಾಗಿದ್ದೇಕೆ ಎಂಬುದಕ್ಕೆ ಯಾರಿಂದಲೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ ಎಂದು ವರದಿಯಾಗಿದೆ. 2014ರ ನವೆಂಬರ್‌ನಲ್ಲಿ ಹೊರಟಿದ್ದ ರೈಲು, 2018ಕ್ಕೆ ತಲುಪಿದೆ.