ಮಿಜೋರಂ ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ

Published : May 22, 2025, 08:57 AM IST

ಮಿಜೋರಂ 98.2% ಸಾಕ್ಷರತೆ ದರದೊಂದಿಗೆ ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವಾಗಿದೆ. ಸ್ವಯಂಸೇವಕರು ಮತ್ತು ಸಂಪನ್ಮೂಲ ಕೇಂದ್ರಗಳ ಸಹಭಾಗಿತ್ವದಿಂದ ಈ ಸಾಧನೆ ಸಾಧ್ಯವಾಗಿದೆ. ಲಕ್ಷದ್ವೀಪ, ನಾಗಾಲ್ಯಾಂಡ್, ಕೇರಳ ಮುಂತಾದ ರಾಜ್ಯಗಳು ಸಹ ಅತಿ ಹೆಚ್ಚು ಸಾಕ್ಷರತೆ ಹೊಂದಿವೆ.

PREV
15
ಮಿಜೋರಂ ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ

ಭಾರತದ ಈಶಾನ್ಯ ಭಾಗದ ಪುಟ್ಟ ರಾಜ್ಯ ಮಿಜೋರಂ ಇದೀಗ ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಶೇ.98.2ರಷ್ಟು ಮಂದಿ ಓದಲು, ಬರೆಯಲು ಕಲಿತಿದ್ದಾರೆ!

25

ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರ ಉಪಸ್ಥಿತಿಯಲ್ಲಿ ಮಿಜೋರಂ ವಿವಿಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಲಾಲ್ದುಹೊಮಾ ಅವರು ಮಿಜೋರಂ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಘೋಷಣೆ ಮಾಡಿದರು.

35

ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಟಾಪ್‌ 10 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪಟ್ಟಿಯಲ್ಲಿ ಮಿಜೋರಂ, ನಾಗಾಲ್ಯಾಂಡ್‌, ಮಣಿಪುರ ಮತ್ತು ತ್ರಿಪುರ ಹೀಗೆ ಐದು ಈಶಾನ್ಯ ರಾಜ್ಯಗಳು ಸ್ಥಾನ ಪಡೆದಿವೆ. 2011ರ ಜನಗಣತಿ ಪ್ರಕಾರ ಮಿಜೋರಾಂನ ಸಾಕ್ಷರತೆ ಪ್ರಮಾಣ ಶೇ.91.33ರಷ್ಟಿತ್ತು.

45

ಶಿಕ್ಷಕರು, ವಿದ್ಯಾರ್ಥಿಗಳು, ಸಂಪನ್ಮೂಲ ಅಧಿಕಾರಿಗಳು ಸೇರಿ 292 ಸ್ವಯಂ ಸೇವಕ ಶಿಕ್ಷಕರು ಮತ್ತು ಕ್ಲಸ್ಟರ್‌ ಸಂಪನ್ಮೂಲ ಕೇಂದ್ರ ಸಮನ್ವಯಕಾರರು ಸೇರಿಕೊಂಡು ಇವರಿಗೆ ಶಿಕ್ಷಣ ನೀಡುವ ಕೆಲಸ ಮಾಡಿದರು. ಇದರ ಪರಿಣಾಮವಾಗಿ ಇದೀಗ ಮಿಜೋರಾಂ ಸಂಪೂರ್ಣ ಸಾಕ್ಷರ ರಾಜ್ಯವಾಗಿ ಪರಿವರ್ತನೆಯಾಗಿದೆ. 

55
ದೇಶದ ಟಾಪ್‌ 10 ಸಾಕ್ಷರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು


1 ಮಿಜೋರಂ-ಶೇ.98.2
2 ಲಕ್ಷದ್ವೀಪ-ಶೇ.97.3%
3 ನಾಗಾಲ್ಯಾಂಡ್‌-ಶೇ.95.7%
4 ಕೇರಳ-ಶೇ95.3%
5 ಮೇಘಾಲಯ-ಶೇ.94.2%
6 ತ್ರಿಪುರಾ-ಶೇ.93.7% ಮತ್ತು ಚಂಡೀಗಢ-ಶೇ.93.7%
8 ಗೋವಾ-ಶೇ.93.6%
9 ಪುದುಚೇರಿ-ಶೇ.92.7%
10 ಮಣಿಪುರ- ಶೇ.92%

Read more Photos on
click me!

Recommended Stories