ಪ್ರತಿದಿನವೂ ನೈಟ್‌ಗೌನ್ ಧರಿಸುವಂತೆ ಒತ್ತಡ; ಗಂಡನ ವಿರುದ್ಧ ದೂರು ದಾಖಲಿಸಿದ 21ರ ವಿವಾಹಿತೆ

Published : Mar 22, 2025, 07:14 PM ISTUpdated : Mar 22, 2025, 07:32 PM IST

21 ವರ್ಷದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಅತ್ತೆ ನೈಟ್‌ಗೌನ್ ಧರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಪತಿ ಕುಡಿದು ಬಂದು ನಿಂದಿಸುವುದು ಮತ್ತು ಮಲಗುವ ಸಮಯವನ್ನು ನಿರ್ಧರಿಸುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ.

PREV
15
ಪ್ರತಿದಿನವೂ ನೈಟ್‌ಗೌನ್ ಧರಿಸುವಂತೆ ಒತ್ತಡ; ಗಂಡನ ವಿರುದ್ಧ ದೂರು ದಾಖಲಿಸಿದ 21ರ ವಿವಾಹಿತೆ

ನನ್ನ ಗಂಡ ಪ್ರತಿದಿನವೂ ನೈಟ್‌ಗೌನ್ ಧರಿಸುವಂತೆ ಕಿರುಕುಳ ನೀಡುತ್ತಾನೆ ಎಂದು ಆರೋಪಿಸಿ 21 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

25

ಗುಜರಾತಿನ ಜುಹಾಪುರದಲ್ಲಿ ಈ ಘಟನೆ ನಡೆದಿದೆ. ದೂರಿನಲ್ಲಿ ಪತಿ ಮತ್ತು ಅತ್ತೆಯ ವಿರುದ್ಧ ನಿಂದನ ಹಾಗೂ ಕಿರುಕುಳದ ಆರೋಪವನ್ನು ಮಾಡಿದ್ದಾರೆ. ಮನೆಯಲ್ಲಿ ಯಾವಾಗಲೂ ನೈಟ್‌ಗೌನ್ ಧರಿಸಲು ತನ್ನ ಮೇಲೆ ಒತ್ತಡ ಹಾಕ್ತಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. 

35

ಪತಿ ಓರ್ವ ವೈದ್ಯನಾಗಿದ್ದು, ಮದ್ಯ ಸೇವಿಸೋದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಕುಡಿದು ಬಂದು ಅವಾಚ್ಯ ಪದಗಳಿಂದ ತನ್ನನ್ನು ನಿಂದಿಸುತ್ತಾನೆ. ಗಂಡನ ವರ್ತನೆಗೆ ಆತನ ತಾಯಿಯೂ ಸಾಥ್ ನೀಡುತ್ತಾಳೆ. ಅತ್ತೆ ಸಹ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

45

ಇಷ್ಟು ಮಾತ್ರವಲ್ಲದೇ ನಾನು ಎಷ್ಟು ಗಂಟೆ ಮಲಗಬೇಕು ಅನ್ನೋದನ್ನು ಸಹ ಗಂಡ ನಿರ್ಧರಿಸುತ್ತಾನೆ. ಗಂಡನ ಈ ನಡೆಯನ್ನು ವಿರೋಧಿಸಿದ್ರೆ ಕೋಪಗೊಂಡು ನನ್ನೊಂದಿಗೆ ಜಗಳ ಮಾಡಲು ಶುರು ಮಾಡುತ್ತಾನೆ. ಗಂಡ ನಿರ್ಧರಿಸಿದ ಸಮಯದಲ್ಲಿಯೇ ಮಹಿಳೆಗೆ ನಿದ್ದೆ ಮಾಡಲು ಒತ್ತಡ ಹಾಕಲಾಗುತ್ತೆ ಎಂದು ವರದಿಯಾಗಿದೆ. 

55

ಗಂಡ ಮತ್ತು ಅತ್ತೆಯ ಪ್ರಕಾರ, ನಾನು ಯಾವಾಗಲೂ ನೈಟ್‌ಗೌನ್ ಧರಿಸಬೇಕು. ಒಂದು ವೇಳೆ ನೈಟ್‌ಗೌನ್ ಧರಿಸಲು ಒಪ್ಪದಿದ್ರೆ ಇಬ್ಬರು ಸೇರಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories