ಮನಮೋಹನ್ ಸಿಂಗ್ ಅವರು ಪಂಜಾಬ್ ಪ್ರಾಂತ್ಯದ ಚಕ್ವಾಲ್ ಜಿಲ್ಲೆಯ ಗಾಹ್ ಗ್ರಾಮದಲ್ಲಿ 26 ಸೆಪ್ಟೆಂಬರ್ 1932 ರಂದು ಜನಿಸಿದರೆಂದು ಹೇಳಲಾಗುತ್ತೆ. ಬಾಲ್ಯ ಅದೇ ಗ್ರಾಮದಲ್ಲಿ ಕಳೆದ ಮನಮೋಹನ ಸಿಂಗ್. ಮುಂದೆ ಭಾರತ-ಪಾಕಿಸ್ತಾನ ದೇಶ ವಿಭಜನೆಯಾದಾಗ ಈ ಭಾಗ ಪಾಕಿಸ್ತಾನಕ್ಕೆ ಸೇರಿತು ಅಲ್ಲದೇ ಮನಮೋಹನ್ ಸಿಂಗ್ ಕುಟುಂಬ ಪಾಕಿಸ್ತಾನದ ಗ್ರಾಮದಲ್ಲಿ ತಮ್ಮ ಮನೆ ಆಸ್ತಿಯೆಲ್ಲ ತೊರೆದು ಭಾರತಕ್ಕೆ ಬಂದರು. ಅದಕ್ಕೂ ಮೊದಲು ಅಂದರೆ, 1937 ರಿಂದ 1941 ರವರೆಗೆ ಮನಮೋಹನ್ ಸಿಂಗ್ ಈ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು.
ಭಾರತದ ಪ್ರಧಾನಿಯಾದಾಗ, ಅವರು ಒಮ್ಮೆ ಪಾಕಿಸ್ತಾನಕ್ಕೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದ್ದರಂತೆ, ಇದನ್ನು ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಅವರು ತಮ್ಮ Scars Of 1947: Real Partition Stories ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.