ಒಮ್ಮೆಯೂ ಗೆಲ್ಲದ ಮನಮೋಹನ ಸಿಂಗ್ ಕಿಂಗ್ ಆಗಿದ್ದೇ ಅಚ್ಚರಿ: ಸೋನಿಯಾ ಗಾಂಧಿ ಮಾಡಿದ್ದೇನು?

First Published | Dec 27, 2024, 12:05 PM IST

ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆ ಮೊಳಗಿಸಿತ್ತು. ಆದರೆ 2004ರಲ್ಲಿ ಚುನಾವಣೆ ಫಲಿತಾಂಶ ಹೊರಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಕೂಟ ಎನ್‌ಡಿಎಗಿಂತ ಹೆಚ್ಚು ಸ್ಥಾನ ಗಳಿಸಿತ್ತು. ಹೀಗಾಗಿ ಸೋನಿಯಾ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿತ್ತು. 

ಒಮ್ಮೆಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸದ ರಾಜಕಾರಣದಲ್ಲಿ ಅಷ್ಟೇನೂ 'ಅನುಭವ ಹೊಂದಿಲ್ಲದ ಡಾ | ಮನಮೋಹನ ಸಿಂಗ್ ಅವರು 2004ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿದ್ದೇ ಅಚ್ಚರಿ. 1999ರಿಂದ ಆಳ್ವಿಕೆ ನಡೆಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ, ಪುನರಾಯ್ಕೆಯಾಗುವ ಅದಮ್ಯ ವಿಶ್ವಾಸದಲ್ಲಿ ಆರು ತಿಂಗಳು ಮೊದಲೇ ಲೋಕಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿತ್ತು. 

ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆ ಮೊಳಗಿಸಿತ್ತು. ಆದರೆ 2004ರಲ್ಲಿ ಚುನಾವಣೆ ಫಲಿತಾಂಶ ಹೊರಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಕೂಟ ಎನ್‌ಡಿಎಗಿಂತ ಹೆಚ್ಚು ಸ್ಥಾನ ಗಳಿಸಿತ್ತು. ಹೀಗಾಗಿ ಸೋನಿಯಾ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿತ್ತು. ಕಾಂಗ್ರೆಸ್ಸಿನಲ್ಲಿ ಸಂಭ್ರಮಾಚರಣೆಯೂ ಆರಂಭವಾಗಿತ್ತು. ಆದರೆ ದಿಢೀರನೇ ಸೋನಿಯಾ ಅವರು ದೇಶಕ್ಕೆ ಶಾಕ್ ನೀಡಿದರು. 

Tap to resize

ಮನೆ ಬಾಗಿಲಿಗೆ ಪ್ರಧಾನಿ ಹುದ್ದೆ ಬಂದಿದ್ದರೂ, ತಾವು ಆ ಪಟ್ಟಕ್ಕೇರುವುದಿಲ್ಲ. ಏಕೆಂದರೆ, ತಮ್ಮ ಅಂತರಾತ್ಮ ಒಪ್ಪುತ್ತಿಲ್ಲ ಎಂಬ ಆಘಾತವನ್ನು ಕಾಂಗ್ರೆಸ್ಸಿಗರಿಗೆ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಅತ್ತು ಕರೆದರೂ ಸೋನಿಯಾ ಮನ ಕರಗಲಿಲ್ಲ. ಸೋನಿಯಾ ತ್ಯಾಗ ಮಾಡಿದ ಹುದ್ದೆಗೆ ಯಾರು ಎಂಬುದೇ ತಿಳಿಯದಾಯಿತು. ಕಾಂಗ್ರೆಸ್ಸಿನ ಹಿರಿಯ ನಾಯಕರನೇಕರು ತಮಗೆ ಆ ಅದೃಷ್ಟ ಒಲಿಯಬಹುದು ಎಂಬ ಎಣಿಕೆಯಲ್ಲಿದ್ದರು. 

ಪ್ರಧಾನಿ ಪೀಠಕ್ಕೆ ಮಾಧ್ಯಮಗಳಲ್ಲಿ ಹಲವು ಹೆಸರುಗಳು ಚರ್ಚೆಯಾದವು. ಆದರೆ ಸೋನಿಯಾ ಅವರಿಂದ ಪ್ರಧಾನಿ ಹುದ್ದೆಗೆ ಹೆಸರೊಂದು ಪ್ರಕಟವಾಯಿತು. ಅದು ಮನಮೋಹನ ಸಿಂಗ್! 1991ರಲ್ಲಿ ಪಿ.ವಿ. ನರಸಿಂಹರಾವ್‌ ಅವರ ಒತ್ತಾ ಯಕ್ಕೆ ಮಣಿದು ಹಣಕಾಸು ಸಚಿವರಾಗಿದ್ದ, ಹಲ ವಾರು ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದ್ದ ಮನಮೋಹನ ಸಿಂಗ್ ಅವರ ಹೆಸರು ಎಲ್ಲರಿಗೂ ಪರಿಚಯವಿತ್ತು. 

ಆದರೆ ರಾಜಕಾರಣದಲ್ಲೇ ಇದ್ದರೂ ರಾಜಕಾರಣಿಗಳಂತೆ ಇಲ್ಲದ, ಅಪಾರ ಪಾಂಡಿತ್ಯ ವಿದ್ದರೂ ರಾಜಕೀಯದಲ್ಲಿ ಪರಿಣತಿ ಹೊಂದಿಲ್ಲದ ಡಾ| ಸಿಂಗ್ ಅವರನ್ನು ಸೋನಿಯಾ ಆಯ್ಕೆ ಮಾಡಿದ್ದು ಮಾತ್ರ ಎಲ್ಲರನ್ನೂ ಚಕಿತಗೊಳಿಸಿತು. ಸರ್ಕಾರದಲ್ಲಿ ಮನಮೋಹನ ಸಿಂಗ್ ಅವರನ್ನು ಕೂರಿಸಿ, ಅವರ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವುದು ಸೋನಿಯಾ ನಿಲುವಾಗಿತ್ತು. 

ಜತೆಗೆ ಕಾಂಗ್ರೆಸ್ಸಿನ ಯಾರೇ ಪ್ರಧಾನಿಯಾದರೂ ಮಿತ್ರ ಪಕ್ಷಗಳನ್ನು ಸಂಭಾಳಿಸುವುದು ಕಷ್ಟವಿತ್ತು. ಸೌಮ್ಯ ಸ್ವಭಾವದ ಡಾ| ಸಿಂಗ್ ಪ್ರಧಾನಿಯಾಗುವುದಕ್ಕೆ ಮಿತ್ರಪಕ್ಷಗಳು ವಿರೋಧ ಮಾಡುವುದಿಲ್ಲ ಹಾಗೂ ಸಿಂಗ್ ಅವರಂಥವರು ಇದ್ದರೆ ಮಿತ್ರಪಕ್ಷಗಳಿಗೆ ಸಮಸ್ಯೆಯಾಗುವುದಿಲ್ಲ ಎಂಬ ಕಾರಣಕ್ಕೆ ಸೋನಿಯಾ ಅವರು ಡಾ| ಮನಮೋಹನ ಸಿಂಗ್‌ಗೆ ಪಟ್ಟ ಕಟ್ಟಿದ್ದರು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.

Latest Videos

click me!