ಪ್ರೇಯಸಿ ಮುಖ ನೋಡಲು ತರಕಾರಿ ಮಾರಿಕೊಂಡು ಬಂದವನಿಗೆ ಇದೆಂತಹಾ ಶಿಕ್ಷೆ!

Published : Jan 27, 2021, 04:07 PM IST

ಪ್ರೇಯಸಿ ಮುಖ ನೋಡಲು ಆಕೆಯ ಮನೆ ಬಳಿ ತರಕಾರಿ ಮಾರಿಕೊಂಡು ಹೋದ ಯುವಕನನ್ನು ಗ್ರಾಮಸ್ಥರೆಲ್ಲಾ ಸೇರಿ ಹಿಡಿದಿದ್ದಾರೆ. ಸಾಲದೆಂಬಂತೆ ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಕಪ್ಪು ಮಸಿ ಒರಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಕಾನ್ಪುರದ ಮಂಗಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಎನ್ನಲಾಗಿದೆ.

PREV
15
ಪ್ರೇಯಸಿ ಮುಖ ನೋಡಲು ತರಕಾರಿ ಮಾರಿಕೊಂಡು ಬಂದವನಿಗೆ ಇದೆಂತಹಾ ಶಿಕ್ಷೆ!

ಎಡಿಷನಲ್ ಎಸ್‌ಪಿ ಘನ್‌ಶ್ಯಾಮ್ ಚೌರಾಸಿಯಾ ಈ ಬಗ್ಗೆ ಮಾತನಾಡುತ್ತಾ ಕೆಲ ಮಂದಿ ಓರ್ವ ಯುವಕನ ಕೂದಲು ತುಂಡರಿಸಿ ಮುಖಕ್ಕೆ ಮಸಿ ಬಳಿದಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡು ಬಂದಿವೆ. ಅಲ್ಲದೇ ಆ ಯುವಕನ ಕೊರಳಿಗೆ ಚಪ್ಪಲಿ ಹಾರವನ್ನೂ ಹಾಕಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ ಎಂದಿದ್ದಾರೆ. 

25

ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ವೆಳೆ ಈ ಘಟನೆ ಸುಂದರ್‌ಪುರ ಹಳ್ಳಿಯಲ್ಲಿ ನಡೆದಿದೆ ಎಂಬ ವಿಚಾರ ಬಯಲಾಗಿದೆ. ಇನ್ನು ಈ ಯುವಕ ತಾನು ಮದುವೆಯಾದ ಪ್ರೇಯಸಿಯ ಮನೆ ಬಳಿ ತೆರಳಿ ಆಕೆಯನ್ನು ಭೇಟಿಯಾಗಲು ಯತ್ನಿಸುತ್ತಿದ್ದ ಎಂಬ ವಿಚಾರವೂ ತಿಳಿದು ಬಂದಿದೆ.

35

ಹೀಗಿರುವಾಗಲೇ ಗ್ರಾಮಸ್ಥರು ಆತನನ್ನು ಹಿಡಿದು, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಅಲ್ಲದೇ ಆತ ಮಾರಲು ತೆಗೆದುಕೊಂಡು ಬಂದಿದ್ದ ತರಕಾರಿ ಹಾಗೂ ಬ್ಯಾಗ್‌ಗಳನ್ನೂ ದೋಚಿದ್ದಾರೆನ್ನಲಾಗಿದೆ.

45

ಪೊಲೀಸರು ಎಲ್ಲಾ ದಿಕ್ಕಿನಿಂದಲೂ ತನಿಖೆ ನಡೆಸುತ್ತಿದ್ದಾರೆ. ದೂರುಇ ದಾಖಲಿಸಿದ್ದಾರೆ. ಅತ್ತ ದೌರ್ಜನ್ಯಕ್ಕೊಳಗಾದ ಯುವಕನೂ ಕೆಲ ಮಂದಿ ವಿರುದ್ಧ ದೂರು ನೀಡಿದ್ದಾನೆ.

55

ಇನ್ನು ಪ್ರಕರಣದಲ್ಲಿ ಯುವಕನ ಮುಖಕ್ಕೆ ಮಸಿ ಬಳಿದ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆಯ ವಿಡಿಯೋ ಮಾಡಿದವರ ವಿರುದ್ವೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

click me!

Recommended Stories