ದೆಹಲಿ ಪೊಲೀಸ್ ಕಮಿಶನರ್, ಗುಪ್ತಚರ ಅಧಿಕಾರಿಗಳೊಂದಿಗೆ ಅಮಿತ್ ಶಾ ತುರ್ತು ಸಭೆ!

First Published Jan 26, 2021, 7:19 PM IST

ರೈತ ಸಂಘಟನೆಗಳ ಪ್ರತಿಭಟನೆ  ಇದೀಗ ದಂಗೆ ಸ್ವರೂಪ ಪಡೆದುಕೊಂಡಿದೆ. ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಖಲ್ಸಾ ಧ್ವಜ ಹಾರಿಸಲಾಗಿದೆ. ಈ ಘಟನೆಯನ್ನು ಪಾಕಿಸ್ತಾನದ ಕೆಲ ಸಂಘಟನೆಗಳು ಐತಿಹಾಸಿಕ ಎಂದು ಬಣ್ಣಿಸಿದೆ. ಆದರೆ ಭಾರತದ ಮಾನ ದಂಗೆಯಿಂದ ಹರಾಜಾಗಿದೆ. ರೈತರ ದಂಗೆ ತೀವ್ರಗೊಂಡಿರುವ ಕಾರಣ ಗೃಹ ಮಂತ್ರಿ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ.
 

ರೈತ ಪ್ರತಿಭಟನೆ ಸ್ವರೂಪ ಬದಲಾಗಿದೆ. ದೆಹಲಿಯಲ್ಲಿ ನಿಯಂತ್ರಣ ತಪ್ಪಿರುವ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಗೆ ಬ್ರೇಕ್ ಹಾಕಲು ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ.
undefined
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲ, ದೆಹಲಿ ಪೊಲೀಸ್ ಕಮಿಷನರ್ ಎಸ್ ಎನ್ ಶ್ರೀವಾತ್ಸವ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
undefined
ಹೆಚ್ಚವರಿ ಪಾರಾಮಿಲಿಟರಿ ಫೋರ್ಸ್ ನಿಯೋಜಿಸಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ.
undefined
ಪ್ರತಿಭಟನೆ ಕುರಿತು ಮಾಹಿತಿ ಪಡೆದ ಅಮಿತ್ ಶಾ, ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಈ ವೇಳೆ ಗುಪ್ತಚರ ಅಧಿಕಾರಿಗಳು ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
undefined
ಸರ್ಕಾರದ ಸೂಚನೆ ಮೇರೆಗೆ ದೆಹಲಿ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ರೈತರ ಪ್ರತಿಭಟನೆ ಶಾಂತಗೊಳಿಸಲು ಕೆಲ ಕಟ್ಟು ನಿಟ್ಟಿನ ಕ್ರಮ ಜಾರಿಯಾಗಲಿದೆ.
undefined
ದಂಗೆ ಬಳಿಕ ಇದೀಗ ರೈತ ಹೋರಾಟದಲ್ಲಿ ಖಲಿಸ್ತಾನ ಉಗ್ರ ಸಂಘಟನೆಯ ಪಾತ್ರ ಬಲಗೊಳ್ಳುತ್ತಿದೆ. ಈ ಕುರಿತು ಗುಪ್ತಚರ ಇಲಾಖೆ ಕೆಲ ಮಾಹಿತಿ ಹಂಚಿಕೊಂಡಿದೆ ಎಂದು ಎನ್ನಲಾಗುತ್ತಿದೆ.
undefined
ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಾಡುವ ಜಾಗದಲ್ಲಿ ಖಲ್ಸಾ ಧ್ವಜ ಹಾರಾಟ ಮಾಡಿರುವುದನ್ನು ಪಾಕಿಸ್ತಾನದ ಕೆಲ ಸಂಘಟನೆಗಳು ಸ್ವಾಗತಿಸಿದೆ. ಇತಿಹಾಸ ಮರುಕಳಿಸುತ್ತಿದೆ ಎಂದು ಬಣ್ಣಿಸಿದ್ದಾರೆ.
undefined
click me!