ಅಮೃತ ಮಹೋತ್ಸವ ಯಾತ್ರೆಗೆ ಸಾಥ್‌ ನೀಡಿದ ರಜನಿಕಾಂತ್: ಕೆಡೆಟ್‌ಗಳನ್ನು ಭೇಟಿಯಾದ ತಲೈವಾ

Published : Aug 07, 2022, 12:07 PM IST

ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಕ್ಕೆ ಏಷ್ಯಾನೆಟ್ ನ್ಯೂಸ್ ಮತ್ತಷ್ಟು ಮೆರುಗು ನೀಡಿದ್ದು, ಅಮೃತ ಮಹೋತ್ಸವ ಯಾತ್ರೆಗೆ ಜೂನ್‌ 20 ರಂದು ಚಾಲನೆ ನೀಡಿತ್ತು. ಈ ಅಭಿಯಾನಕ್ಕೆ ನಟ ರಜನಿಕಾಂತ್‌ ಸಹ ಬೆಂಬಲ ಸೂಚಿಸಿದ್ದಾರೆ. 

PREV
13
ಅಮೃತ ಮಹೋತ್ಸವ ಯಾತ್ರೆಗೆ ಸಾಥ್‌ ನೀಡಿದ ರಜನಿಕಾಂತ್: ಕೆಡೆಟ್‌ಗಳನ್ನು ಭೇಟಿಯಾದ ತಲೈವಾ

ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಅಮೃತ ಮಹೋತ್ಸವ ಯಾತ್ರೆಗೆ ದಕ್ಷಿಣ ಭಾರತದ ಪ್ರಖ್ಯಾತ ನಟ ಮೆಗಾಸ್ಟಾರ್‌ ರಜನಿಕಾಂತ್ ಸಾಥ್ ನೀಡಿದ್ದಾರೆ. ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ನಡೆಸುತ್ತಿರುವ ಅಮೃತ ಮಹೋತ್ಸವ ಯಾತ್ರೆ ಮಧ್ಯ ಭಾರತಕ್ಕೆ ಕಾಲಿಟ್ಟಿದ್ದು, ಮೆಗಾಸ್ಟಾರ್ ರಜನಿಕಾಂತ್ ಹೆಚ್ಚು ಪರಿಚಯವಿಲ್ಲದ ಐಕಾನ್‌ಗಳ ಪೋಸ್ಟರ್ ಅನ್ನು ಅನಾವರಣ ಮಾಡುವ ಮೂಲಕ ಮಧ್ಯ ಭಾರತ ಯಾತ್ರೆ ಪ್ರಾರಂಭವಾಗಿದೆ. 

23

ಎನ್‌ಸಿಸಿ ಸಹಯೋಗದಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಇಂಡಿಯಾ@75 ಸ್ಮರಣಾರ್ಥ ಕಿರು ವಿಡಿಯೋಗಳ ಮೂಲಕ 75 ವೀರರನ್ನು ಏಷ್ಯಾನೆಟ್‌ ಭಾರತದ 75ನೇ ಸ್ವಾತಂತ್ರೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ ಹೋಟೆಲ್‌ನಲ್ಲಿ ತಂಗಿರುವ ಕೆಡೆಟ್‌ಗಳನ್ನು ಅವರ ಸ್ಯೂಟ್‌ನಲ್ಲಿ ನಟ ರಜನಿಕಾಂತ್‌ ಭೇಟಿಯಾಗಿದ್ದಾರೆ. 
 

33

ಆಜಾದಿ ಕಾ ಅಮೃತಮಹೋತ್ಸವ ಸಂಭ್ರಮಕ್ಕೆ ಏಷ್ಯಾನೆಟ್ ನ್ಯೂಸ್ ಮತ್ತಷ್ಟು ಮೆರುಗು ನೀಡಿದ್ದು, ಏಷ್ಯಾನೆಟ್ ನ್ಯೂಸ್ ಹಾಗೂ ಎನ್‌ಎಸಿಸಿ ಕೆಡೆಟ್ ಜಂಟಿಯಾಗಿ ಜೂನ್‌ 14 ರಂದು ಅಮೃತ ಮಹೋತ್ಸವ ಅಥವಾ ವಜ್ರ ಜಯಂತಿ ಯಾತ್ರೆಗೆ ಚಾಲನೆ ನೀಡಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಈ ಐತಿಹಾಸಿಕ ಯಾತ್ರೆಗೆ ಚಾಲನೆ ನೀಡಿದ್ದರು. ಈಗ ನಟ ರಜನಿಕಾಂತ್ ಸಹ ಸಾಥ್‌ ನೀಡಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories