ರೈಲು ಪ್ರಯಾಣ, ಆಧಾರ್, ಪೆಟ್ರೋಲ್ ಸೇರಿ ಕೆಲ ನಿಯಮಗಳಲ್ಲಿ ಭಾರಿ ಬದಲಾವಣೆ, ಜುಲೈ 1 ರಿಂದ ಜಾರಿ

Published : Jun 30, 2026, 06:24 PM IST

ರೈಲು ಪ್ರಯಾಣ, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲ ನಿಯಮಗಳು ಜುಲೈ 1 ರಿಂದ ಬದಲಾಗುತ್ತಿದೆ. ಹೀಗಾಗಿ ಈ ಸೇವೆ ಪಡೆದುಕೊಳ್ಳುವ ಮುನ್ನ ಹೊಸ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ 

PREV
16
ಜುಲೈ 1 ರಿಂದ ಬದಲಾವಣೆ ಏನು

ಜುಲೈ 1 ರಿಂದ ಕೆಲ ಪ್ರಮುಖ ನಿಯಮಗಳಲ್ಲಿ ಬದಲಾಗುತ್ತಿದೆ. ವಿಶೇಷವಾಗಿ ರೈಲು ಪ್ರಯಾಣ, ಕ್ರಿಡಿಟ್ ಕಾರ್ಡ್, ಆಧಾರ್ ಕಾರ್ಡ್, ಪೆಟ್ರೋಲ್ -ಡೀಸೆಲ್, ಎಲ್‌ಪಿಜಿ ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಹೀಗಾಗಿ ಬಳಕೆ ಮಾಡುವ ಮುನ್ನ ಗ್ರಾಹಕರು ಬದಲಾದ ನೀತಿಗಳ ಕುರಿತು ತಿಳಿದುಕೊಳ್ಳುವುದು ಉತ್ತಮ.

26
ರೈಲು ಪ್ರಯಾಣಿಕರ ಗಮನಕ್ಕೆ

ಭಾರತೀಯ ರೈಲ್ವೇ ಪ್ರಯಾಣ ಆರಾಮದಾಯಕ ಮಾಡಲು ಹಲವು ಕ್ರಮ ಕೈಗೊಳ್ಳಲಾಗಿದೆ. ಜುಲೈ 1 ರಿಂದ ಟಿಕೆಟ್ ಇಲ್ಲದೆ ರೈಲು ಪ್ರಯಾಣ ಮಾಡುವ ಪ್ರಯಾಣಿಕರಿಗೆ ವಿಧಿಸುವ ದಂಡದ ಪ್ರಮಾಣ ಡಬಲ್ ಮಾಡಲಾಗುತ್ತಿದೆ. ಜನ ವಿಶ್ವಾಸ ತಿದ್ದುಪಡಿ ಮೂಲಕ ಇದೀಗ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕನಿಷ್ಠ 250 ರೂಪಾಯಿ ಇದ್ದ ದಂಡವನ್ನು 500 ರೂಪಾಯಿಗೆ ಏರಿಕೆ ಮಾಡಲಾಗಿದೆ.

36
ಪೆಟ್ರೋಲ್ ಡೀಸೆಲ್ ಮೇಲಿನ ನಿರ್ಬಂಧ ತೆರೆವು

ಯುದ್ಧದ ಕಾರಣದಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹಲವು ನಿರ್ಬಂಧ ವಿಧಿಸಲಾಗಿತ್ತು. ಇದೀಗ ಜುಲೈ 1 ರಿಂದ ಈ ನಿರ್ಬಂಧ ತೆರವುಗೊಳಿಸಲಾಗುತ್ತಿದೆ. ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಇಂಧನ ಖರೀದಿ, ಕೈಗಾರಿಕೆಗಳಿಗೆ ಭಾರಿ ಪ್ರಮಾಣದ ಇಂಧನ ಖರೀದಿಸುವವರು ಪೆಟ್ರೋಲ್ ಬಂಕ್‌ಗಳಿಂದ ಖರೀದಿಗೆ ನಿರ್ಬಂಧ ವಿಧಿಸಲಾಗಿತ್ತು. ಜನಸಾಮಾನ್ಯರಿಗೆ ಇಂಧನ ಕೊರತೆ ತಪ್ಪಿಸಲು ಈ ನಿರ್ಬಂಧ ಹೇರಲಾಗಿತ್ತು. ಇದೀಗ ನಿರ್ಬಂಧಗಳನ್ನು ಜುಲೈ 1 ರಿಂದ ತೆರವು ಮಾಡಲಾಗುತ್ತಿದೆ.

46
ಎಲ್‌ಪಿಜಿ ಸೇರಿದಂತೆ ಗ್ಯಾಸ್ ಬೆಲೆ ಪರಿಷ್ಕರಣೆ

ಜುಲೈ 1 ರಿಂದು ಎಲ್‌ಪಿಜಿ ಸೇರಿದಂತೆ ಗ್ಯಾಸ್ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ತೈಲ ಪೂರೈಕೆ ಸರಾಗವಾಗಿ ಆಗಿದೆ. ಯುದ್ಧ ಕಾರ್ಮೋಡ ದೂರ ಸರಿಯದಿದ್ದರೂ ಭಾರತದಲ್ಲಿ ಇದೀಗ ಎಲ್‌ಪಿಜಿ ಸೇರಿದಂತೆ ಗ್ಯಾಸ್ ಬೆಲೆಯಲ್ಲಿ ಪರಿಷ್ಕರಣೆಯಾಗಲಿದೆ. ಕಳೆದ ಕೆಲ ತಿಂಗಳಿನಿಂದ ಡೊಮೆಸ್ಟಿಕ್ ಗ್ಯಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

56
ಪಾಸ್‌‌ಪೋರ್ಟ್ ಬೆಲೆ ಏರಿಕೆ

ಭಾರತದಲ್ಲಿ ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಸುಲಭಗೊಳಿಸಲಾಗಿದೆ. ಆದರೆ ಜುಲೈ 1 ರಿಂದ ಪಾಸ್‌ಪೋರ್ಟ್ ಪಡೆಯುವುದು ಕೊಂಚ ದುಬಾರಿಯಾಗಿದೆ. 1,500 ರೂಪಾಯಿ ಇದ್ದ ಬೆಲೆ ಇದೀಗ 2,500 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ. ಇನ್ನು ತತ್ಕಾಲ್ ಬೆಲೆ 3,500 ರೂಪಾಯಿಯಿಂದ 5000 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ. 60 ಪುಟಗಳ ಆರ್ಡಿನರಿ ಪಾಸ್‌ಪೋರ್ಟ್ 2000 ರೂಪಾಯಿಯಿಂದ 3500 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ತತ್ಕಾಲ್ ಶುಲ್ಕ 4,000 ರೂಪಾಯಿಯಿಂದ 6,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

66
ಆಧಾರ್ ಕಾರ್ಡ್, ವಾಹನ ಬೆಲೆ

ಆಧಾರ್ ಕಾರ್ಡ್‌ನಲ್ಲಿ ಇಮೇಲ್ ವಿಳಾಸ ಹಾಕುವುದು ಜುಲೈ 1 ರಿಂದ ಉಚಿತವಾಗಲಿದೆ. ಸದ್ಯ 75 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಜುಲೈ 1 ರಿಂದ ಡಿಸೆಂಬರ್ 31ರ ವರೆಗೆ ಸಂಪೂರ್ಣ ಉಚಿತವಾಗಿದೆ. ಇನ್ನು ಜುಲೈ 1 ರಿಂದ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳ ಬೆಲೆ ಏರಿಕೆಯಾಗುತ್ತಿದೆ.ಎಸ್‌ಬಿಐ ಫೋನ್‌ಪೇ ಕ್ರಿಡಿಟ್ ಕಾರ್ಡ್ ದಾರರಿಗೆ ರಿವಾರ್ಡ್ ಪಾಯಿಂಟ್ ಸೇರಿಸಲಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories