1 ಸಾವಿರ ಬೆಡ್‌ನ ಕ್ವಾರಂಟೈನ್‌ ಕೇಂದ್ರ: ರೋಗಿಗಳಿಗೆ ರಾಮಾಯಣ, ಮಹಾಭಾರತದ ದರ್ಶನ!

First Published May 10, 2021, 4:57 PM IST

ಮಧ್ಯಪ್ರದೇಶದಲ್ಲಿ ಎರಡನೇ ಕೊರೋನಾ ಅಲೆ ಅಬ್ಬರ ಮುಂದುವರೆದಿದೆ. ಹೀಗಿರುವಾಗಲೇ ರಾಜಧಾನಿ ಭೋಪಾಲ್‌ನಲ್ಲಿ ವಿಶೇಷ ವಿಚಾರವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮೋತೀಲಾಲ್ ನೆಹರೂ ಸ್ಟೇಡಿಯಂನಲ್ಲಿ ಒಂದು ಸಾವಿರ ಬೆಡ್‌ಗಳ ಕ್ವಾರಂಟೈನ್‌ ಸೆಂಟರ್‌ ಆರಂಭಿಸಲಾಗಿದೆ. ಇದನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದ್ದಾರೆ. ಈ ಕ್ವಾರಂಟೈನ್‌ ಸೆಂಟರ್‌ನ ವಿಶೇಷವೆಂದರೆ ಇಲ್ಲಿ ರೋಗಿಗಳಿಗೆ ಯೋಗದಿಂದ ಹಿಡಿದು ರಾಮಾಯಣ ನೋಡುವವರೆಗಿನ ವ್ಯವಸ್ಥೆ ಸರ್ಕಾರ ಮಾಡಿದೆ. ಇಲ್ಲಿ ರೋಗಿಗಳ ಚಿಕಿತ್ಸೆಗೆ ಇನ್ನೂರು ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸ್ಟಾಫ್‌ಗಳಿದ್ದಾರೆ.
 

ಎಲ್ಲಾ ಸೌಲಭ್ಯಗಳಿರುವ ಈ ಕ್ವಾರಂಟೈನ್‌ ಸೆಂಟರ್‌ನ್ನು ಭೋಪಾಲ್‌ ಜಿಲ್ಲಾಆ ಬಿಜೆಪಿ ಹಾಗೂ ಮಾಧವ್ ಸೇವಾ ಕೇಂದ್ರದ ತಂಡ ತಯಾರಿಸಿದೆ. ಇದನ್ನು ಬಡ ಜನರಿಗಾಗಿ ನಿರ್ಮಿಸಲಾಗಿದೆ. ಸೋಂಕು ತಗುಲಿದ ಬಳಿಕ ಮನೆಯಲ್ಲಿ ಐಸೋಲೇಟ್‌ ಆಗಲು ವ್ಯವಸ್ಥೆ ಇಲ್ಲದಾಗ, ಬೇರೆ ವಿಧಿ ಇಲಲ್ದೇ ಅನೇಕ ಮಂದಿ ಉಳಿದವರೊಂದಿಗೇ ಇರುತ್ತಾರೆ. ಇದರಿಂದ ಮನೆಯ ಇತರ ಸದಸ್ಯರಿಗೂ ಕೊರೋನಾ ತಗುಲುತ್ತದೆ. ಇಂತಹವರಿಗಾಗಿ ಈ ಸೆಂಟರ್ ನಿರ್ಮಿಸಲಾಗಿದೆ.
undefined
ಈ ಕ್ವಾರಂಟೈನ್‌ ಸೆಂಟರ್‌ನಲ್ಲಿ ಕೋವಿಡ್‌ ವಾರ್ಡ್‌ಗಳನ್ನೂ ನಿರ್ಮಿಸಲಾಗಿದೆ. ಇವುಗಳಿಗೆ ಭಾರತದ ಸ್ವಾತಂತ್ರ್ಯ ಸೇನಾನಿ ಹಾಗೂ ಮಹಾಪುರುಷರ ಹೆಸರನ್ನಿಡಲಾಗಿದೆ. ಸುಭಾಷ್‌ ಚಂದ್ರ ಬೋಸ್‌ ವಾರ್ಡ್, ಅಬ್ದುಲ್ ಕಲಾಂ ವಾರ್ಡ್, ಸರ್ದಾರ್‌ ಪಟೇಲ್ ವಾರ್ಡ್, ರಾಜಾ ಭೋಜ್ ವಾರ್ಡ್ ಹೀಗೆ ಅನೇಕರ ಹೆಸರನ್ನಿಡಲಾಗಿದೆ. ಇನ್ನು ಅಅತ್ತ ಮಹಿಳೆಯರ ವಾರ್ಡ್‌ಗೆ ರಾಣಿ ಲಕ್ಷ್ಮೀಬಾಯಿ ಹಾಗೂ ರಾಣಿ ಕಮಲ್‌ಪತಿ ವಾರ್ಡ್‌ ಎಂದಿಡಲಾಗಿದೆ.
undefined
ಮೋತೀಲಾಲ್ ನೆಹರೂ ಸ್ಟೇಡಿಯಂನಲ್ಲಿ ನಿರ್ಮಿಸಲಾದ ಈ ಸ್ಟೇಡಿಯಂನಲ್ಲಿ ನಿರ್ಮಿಸಲಾದ ಈ ಕ್ವಾರಂಟೈನ್‌ ಸೆಂಟರ್‌ನ ಪ್ರತಿ ವಾರ್ಡ್‌ನಲ್ಲಿ30ರಿಂದ 50 ಬೆಡ್‌ಗಳಿವೆ. ಇಲ್ಲಿ ಪ್ರತಿ ಬೆಡ್‌ ಬಳಿ ಮೊಬೈಲ್ ಚಾರ್ಜ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ರೋಗಿಗಳಿಗೆ ಬಿಸಿ ನೀರಿನ ಕಂಟೇನರ್ ಕೂಡಾ ಇರಿಸಲಾಗಿದೆ. ಇಷ್ಟೇ ಅಲ್ಲದೇ ಬೆಡ್‌ ಬಳಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಮಷೀನ್ ಕೂಡಾ ಇದೆ.
undefined
ಸರ್ಕಾರದ ಪರವಾಗಿ ಈ ಸೆಂಟರ್‌ನಲ್ಲಿ ಬೃಹತ್ ಎಲ್‌ಇಡಿ ಪರದೆ ಕೂಡಾ ಅಳವಡಿಸಲಾಗಿದೆ. ಈ ಮೂಲಕ ರೋಗಿಗಳಿಗೆ ಮನೋರಂಜನೆ ನೀಡುವುದರೊಂದಿಗೆ ಜ್ಞಾನ ವೃದ್ಧಿಸುವ ವಿಚಾರಕ್ಕೆ ಒತ್ತು ನೀಡಲಾಆಗಿದೆ. ಇಲ್ಲಿ ಟಿವಿ ಮೂಲಕ ರಾಮಾಯಣ ಹಾಗೂ ಮಹಾಭಾರತ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಯೋಗಾಭ್ಯಾಸ ಕೂಡಾ ಮಾಡಿಸಲಾಗುತ್ತದೆ. ಜೊತೆಗೆ ಈ ಸಸೆಂಟರ್‌ನಲ್ಲಿ ಮಹಾ ಮೃತ್ಯುಂಜಯ ಮಂತ್ರ ಹಾಗೂ ಗಾಯತ್ರೀ ಮಂತ್ರವನ್ನೂ ಪಠಿಸಲಾಗುತ್ತದೆ.
undefined
ಈ ಸೆಂಟರ್‌ನ ಪ್ರತೀ ವಾರ್ಡ್‌ನಲ್ಲೂ ವೈದ್ಯರು ಡ್ಯೂಟಿಯಲ್ಲಿರುತ್ತಾರೆ. ಇವರು ರೋಗಿಗಳ ಆಕ್ಸಿಜನ್ ಲೆವೆಲ್ ಪರಿಶೀಲಿಸುತ್ತಿರುತ್ತಾರೆ. ರೋಗಿಯ ಅರೋಗ್ಯ ಸ್ಥಿತಿ ಕೊಂಚ ಗಂಭೀರವಾದರೂ ಕೂಡಲೇ ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗುತ್ತದೆ. ಇವೆಲ್ಲದರ ಜೊತೆ ಈ ಸೆಂಟರ್‌ನಲ್ಲಿ ರೋಗಿಗಳಿಗೆ ಔಷಧ, ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯೂಟ ನೀಡಲಾಗುತ್ತದೆ.
undefined
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಸೆಂಟರ್‌ ನಿರ್ಮಿಸಿದ ಇಡೀ ತಂಡಕ್ಕೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
undefined
click me!