ರಾಜಮನೆತನದ ಹೆಣ್ಮಗಳು Bipin Rawat ಪತ್ನಿ: ಮಗಳು, ಅಳಿಯನನ್ನು ಕಳೆದುಕೊಂಡ ಮನೆಯಲ್ಲಿ ಶೋಕ!

First Published Dec 8, 2021, 6:42 PM IST

ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 14 ಸೇನಾ ಅಧಿಕಾರಿಗಳು ಇದ್ದರು. ರಾವತ್ ಅವರ ಪತ್ನಿ ಮಧುಲಿಕಾ ಕೂಡಾ ಜೊತೆಗಿದ್ದರು. ವಾಯುಸೇನಾ ಪಡೆ ದೃಢಪಡಿಸಿರುವ ಮಾಹಿತಿ ಅನ್ವಯ ಸಿಡಿಎಸ್‌ ಬಿಪಿನ್ ರಾವತ್ , ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸರ್ಕಾರದಿಂದ ಸೇನೆಯವರೆಗೂ ಸಂಚಲನ ಮೂಡಿಸಿದೆ. ಅದೇ ಸಮಯದಲ್ಲಿ, ಹೆಲಿಕಾಪ್ಟರ್ ಅಪಘಾತದ ಸುದ್ದಿ ತಿಳಿದ ನಂತರ ಬಿಪಿನ್ ರಾವತ್ ಅವರ ಅತ್ತೆಯ ಮನೆಯಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ರಾವತ್ ಪತ್ನಿ ಮೂಲತಃ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯವರೆಂಬುವುದು ಉಲ್ಲೇಖನೀಯ.

ವಾಸ್ತವವಾಗಿ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರು ಮೂಲತಃ ಶಹದೋಲ್ ಜಿಲ್ಲೆಯ ಸೊಹಗ್ಪುರದವರು. ಮಧುಲಿಕಾ ಎಸ್. ಕುನ್ವರ್ ಅವರು ರೇವಾ ರಾಜಮನೆತನಕ್ಕೆ ಸೇರಿದ ಮೃಗೇಂದ್ರ ಸಿಂಗ್ ಅವರ ಪುತ್ರಿ. ಈ ಸುದ್ದಿಯಿಂದ ಅವರ ಮನೆಯಲ್ಲಿ ಆತಂಕ ಹೆಚ್ಚಿದೆ. ಮಗಳು, ಅಳಿಯನನ್ನು ಕಳೆದುಕೊಂಡ ಮನೆಯಲ್ಲಿ ಶೋಕ ಮನೆ ಮಾಡಿದೆ.
 

ಮಧುಲಿಕಾ ಅವರು 1985 ರಲ್ಲಿ ಬಿಪಿನ್ ರಾವತ್ ಅವರನ್ನು ವಿವಾಹವಾದರು. ಮಧುಲಿಕಾ ರಾವತ್ ಅವರು ಸೇನಾ ಕಲ್ಯಾಣ ಇಲಾಖೆ ಜೊತೆ ಸಂಬಂಧ ಹೊಂದಿದ್ದಾರೆ. ಅವರು ಸೇನಾ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷರಾಗಿದ್ದಾರೆ. ಬಿಪಿನ್ ರಾವತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬ ಮಗಳ ಹೆಸರು ಕೃತಿಕಾ ರಾವತ್.

ಹೆಲಿಕಾಪ್ಟರ್ ಪತನದ ಕುರಿತು ಬಿಪಿನ್ ರಾವತ್ ಅವರ ಸೋದರ ಮಾವ ಯಶವರ್ಧನ್ ಸಿಂಗ್ ಅವರೊಂದಿಗೆ ಮಾಧ್ಯಮಗಳು ಮಾತನಾಡಿದಾಗ, ಹೆಲಿಕಾಪ್ಟರ್‌ನಲ್ಲಿ ದೀದಿ ಮತ್ತು ಸೋದರ ಮಾವ ಇದ್ದರು ಮತ್ತು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಹೇಳಿದರು. ಇಲ್ಲಿಯವರೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲಎಂದಿದ್ದರು.
 

ಬಿಪಿನಿ ರಾವತ್ ಮೂಲತಃ ಉತ್ತರಾಖಂಡದವರು, ಅವರು 16 ಮಾರ್ಚ್ 1958 ರಂದು ಪೌರಿಯಲ್ಲಿ ಜನಿಸಿದರು. ರಾವತ್ ಅವರ ಕುಟುಂಬ ಹಲವು ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅವರ ತಂದೆ ಲಕ್ಷ್ಮಣ್ ಸಿಂಗ್ ಅವರು ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತರಾಗಿದ್ದಾರೆ. ಅದೇ ಸಮಯದಲ್ಲಿ, ಅವರ ತಾಯಿ ರಾಜ್ಯದ ಉತ್ತಕಾಂಶಿಯಿಂದ ಬಂದವರು, ಅವರು ಮಾಜಿ ಶಾಸಕ ಕಿಶನ್ ಸಿಂಗ್ ಪರ್ಮಾರ್ ಅವರ ಮಗಳು.
 

ಬಿಪಿನ್ ರಾವತ್ ಶಿಮ್ಲಾದ ಸೇಂಟ್ ಎಡ್ವರ್ಡ್ ಶಾಲೆ ಮತ್ತು ಖಡ್ಕಸಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದಾರೆ. ಬಿಪಿನ್ ರಾವತ್ ಅವರು ಡಿಸೆಂಬರ್ 1978 ರಲ್ಲಿ ಭಾರತೀಯ ಸೇನೆಗೆ ಸೇರಿದರು. 17 ಡಿಸೆಂಬರ್ 2016 ರಂದು, ಜನರಲ್ ದಲ್ಬೀರ್ ಸಿಂಗ್ ಸುಹಾಗ್ ನಂತರ ರಾವತ್ 27 ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ನಂತರ ಅವರು CDS ಅಂದರೆ ಮೂರು ಸೇವೆಗಳ ಮುಖ್ಯಸ್ಥರಾದರು.

click me!