ಮಧ್ಯಾಹ್ನ 12:20ಕ್ಕೆ ಹೆಲಿಕಾಪ್ಟರ್ ಪತನಗೊಂಡಿದೆ. ಲ್ಯಾಂಡಿಂಗ್ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ವೈದ್ಯರು, ಸೇನಾ ಅಧಿಕಾರಿಗಳು ಮತ್ತು ಕೋಬ್ರಾ ಕಮಾಂಡೋಗಳ ತಂಡವು ಸ್ಥಳಕ್ಕೆ ತಲುಪಿವೆ.
ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ಹೇಳಿದೆ. ಪ್ರಾಥಮಿಕ ವರದಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಂಜಿನ್ ನಿಷ್ಕ್ರಿಯಗೊಂಡು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಮಾಹಿತಿ ಬಂದ ತಕ್ಷಣ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಊಟಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಿಡಿಎಸ್ ವಿಪಿನ್ ರಾವತ್ ಮತ್ತು ಇತರರು ಹೆಲಿಕಾಪ್ಟರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಸೇನಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವು ದೇಹಗಳು ಶೇ 80 ರಷ್ಟು ಸುಟ್ಟುಹೋಗಿವೆ ಎಂದು ಅವರು ಹೇಳಿದರು.
ಅಪಘಾತದ ನಂತರ ಕೆಲವು ವೀಡಿಯೊಗಳು ಸಹ ಹೊರಬಂದಿವೆ. ಅವುಗಳಲ್ಲಿ ಹೆಲಿಕಾಪ್ಟರ್ ಉರಿಯುತ್ತಿರುವುದು ಕಂಡುಬರುತ್ತದೆ. ಅಪಘಾತಕ್ಕೆ ಕಾರಣವೇನು ಎಂಬುವುದು ಇದು ತನಿಖೆಯ ವಿಷಯವಾಗಿದೆ. ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಕಾಲೇಜಿಗೆ ಕಾರ್ಯಕ್ರಮವೊಂದಕ್ಕೆ ಈ ಹೆಲಿಕಾಪ್ಟರ್ ತೆರಳುತ್ತಿತ್ತು ಎನ್ನಲಾಗಿದೆ.
ಮಂಜು ಮುಸುಕಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ. ಅಪಘಾತದ ಬಗ್ಗೆ ತಿಳಿದುಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಿಒಡಿಎಸ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ದುರಂತ ಅಪಘಾತದ ಬಗ್ಗೆ ಕೇಳಿ ಆಘಾತವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮೂಲಕ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. 'ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಹೆಲಿಕಾಪ್ಟರ್‌ನಲ್ಲಿರುವ ಇತರರು ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸುತ್ತೇವೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಸೇನಾ ಅಧಿಕಾರಿಗಳು ಹೋಗುವ ಹೆಲಿಕಾಪ್ಟರ್ ಟ್ವಿನ್ ಇಂಜಿನ್ ಹೊಂದಿದೆ. ಅಪಘಾತ ನಡೆದ ಎಂಐ 17ರಲ್ಲಿ ಪ್ರಧಾನಿ, ರಕ್ಷಣಾ ಸಚಿವರಂತಹ ವಿವಿಐಪಿಗಳೂ ಸವಾರಿ ಮಾಡುತ್ತಾರೆ. ಸೇನೆ ಮತ್ತು ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ವಿವಿಐಪಿಗಾಗಿ ಬಳಸುತ್ತವೆ. ಇದರಲ್ಲಿ ಎರಡು ಎಂಜಿನ್ ಗಳಿದ್ದು, ಯಾವುದೇ ಸಂದರ್ಭದಲ್ಲೂ ಮತ್ತೊಂದು ಎಂಜಿನ್ ಬಳಸಿ ಸರಿಯಾದ ಜಾಗಕ್ಕೆ ತರಬಹುದು ಎನ್ನಲಾಗಿದೆ.
ಈ ಜನರು ಹೆಲಿಕಾಪ್ಟರ್‌ನಲ್ಲಿ ಇದ್ದವರು: ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್. ಎ. ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್. ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ. ಸಾಯಿ ತೇಜ, ಹವಾಲ್ದಾರ್ ಸತ್ಪಾಲ್.