ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಸೂಲೂರಿನಿಂದ ವೆಲ್ಲಿಂಗ್ಟನ್‌ಗೆ ಹಾರುತ್ತಿತ್ತು ಎಂದು ಐಎಎಫ್ ತಿಳಿಸಿದೆ. ಹೆಲಿಕಾಪ್ಟರ್‌ನಲ್ಲಿ ಸಿಬ್ಬಂದಿ ಸೇರಿದಂತೆ 14 ಮಂದಿ ಇದ್ದರು. ಇವರಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಎನ್ ಕೆ ಗುರ್ಸೇವಕ್ ಸಿಂಗ್, ಎನ್ ಕೆ ಜಿತೇಂದ್ರ ಕುಮಾರ್, ಎಲ್/ನಾಯಕ್ ವಿವೇಕ್ ಕುಮಾರ್, ಎಲ್/ನಾಯಕ್ ಬಿ ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಸೇರಿದ್ದಾರೆ.